»   » ಸಿದ್ಧಾರ್ಥ್ ಜೊತೆ ಬ್ಯೂಟಿ ಸಮಂತಾ ಕುಚ್ ಕುಚ್

ಸಿದ್ಧಾರ್ಥ್ ಜೊತೆ ಬ್ಯೂಟಿ ಸಮಂತಾ ಕುಚ್ ಕುಚ್

By: ರವಿಕಿಶೋರ್
Subscribe to Filmibeat Kannada
ಈ ರೀತಿಯ ಸುದ್ದಿಗಳು ಬಣ್ಣದ ಜಗತ್ತಿನಲ್ಲಿ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಈಗ ಅಂತಹದ್ದೇ ಒಂದು ಸುದ್ದಿ ಹಬ್ಬಿದೆ. ದಕ್ಷಿಣದ ಬೆಡಗಿ ಸಮಂತಾ ಹಾಗೂ ನಟ ಸಿದ್ಧಾರ್ಥ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬುದೇ ಆ ಪುಕಾರು.

ಈ ರೀತಿಯ ಗಾಸಿಪ್ ಸುದ್ದಿಗಳಿಗೆ ತಲೆ ಇರಲ್ಲ ಬುಡ ಇರಲ್ಲ. ಯಾರೋ ಇಲಿ ಹೋಯಿತು ಎಂದರೆ. ಇನ್ಯಾರೋ ಹುಲಿ ಎಂದುಕೊಳ್ಳುತ್ತಾರೆ. ಕಡೆಗೆ ಅದು ಸಂಬಂಧಪಟ್ಟ ತಾರೆಗಳ ಕಿವಿಗೂ ಬಿದ್ದು ಅವರು ಸ್ಪಷ್ಟೀಕರಣ ನೀಡುವವರೆಗೂ ಹೋಗುತ್ತದೆ.

ಈಗ ಆಗಿರುವುದೇ ಅಂಥಹದ್ದೇ. ನಟ ಸಿದ್ಧಾರ್ಥ್ ಹಾಗೂ ಸುಮಂತಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಸಮಂತಾ ಇತ್ತೀಚೆಗೆ, ನಾನು ಒಬ್ಬರನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಆದರೆ ಅವರ ಹೆಸರನ್ನು ಈಗಲೇ ಬಹಿರಂಗಪಡಿಸಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದರು.

ಇದಿಷ್ಟೇ ಅಲ್ಲದೆ ಕಾರ್ಯಕ್ರಮಗಳಲ್ಲಿ ತಮ್ಮ ಮೈಮಾಟವನ್ನೂ ಭರ್ಜರಿಯಾಗಿಯೇ ಪ್ರದರ್ಶಿಸುತ್ತಿದ್ದರು. ಇವೆಲ್ಲಕ್ಕೂ ಲಿಂಕ್ ಮಾಡಿ ಈಗ ಸಿದ್ಧಾರ್ಥ್ ಜೊತೆ ಸಂಬಂಧ ಕಲ್ಪಿಸಲಾಗಿದೆ. ಆದರೆ ಇದನ್ನು ಎಂದಿನಂತೆ ಸಮಂತಾ ತಳ್ಳಿಹಾಕಿದ್ದಾರೆ. ಇದೆಲ್ಲಾ ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ.

ಇದಿಷ್ಟೇ ಅಲ್ಲದೆ ಸಿದ್ಧಾರ್ಥ್ ಮನೆಗೆ ಆಗಾಗ ಭೇಟಿ ನೀಡುವುದು. ಅವರ ಕುಟುಂಬಿಕರ ಜೊತೆ ನಿಯಮಿತವಾಗಿ ಬೆರೆಯುತ್ತಿರುವುದು ಸಮಂತಾ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ. ಸಮಂತಾ ವಯಸ್ಸು ಇನ್ನೂ 25ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು.

ಈಗಾಗಲೆ ಸಿದ್ಧಾರ್ಥ್ ಗೆ ಮದುವೆಯಾಗಿ ವಿಚ್ಛೇದನವೂ ತೆಗೆದುಕೊಂಡಿದ್ದಾರೆ. ಒಂದು ವರ್ಷ ಸೋಹಾ ಆಲಿ ಖಾನ್ ಹಾಗೂ ಇನ್ನೊಂದಷ್ಟು ದಿನಗಳ ಕಾಲ ಶ್ರುತಿ ಹಾಸನ್ ಜೊತೆ ಕಣ್ಣಾಮುಚ್ಚಾಲೆ ಆಡಿದ ಬಗ್ಗೆಯೂ ಬಾಲಿವುಡ್ ನಲ್ಲಿ ಗುಸುಗುಸು ಮಾತುಗಳು ಕೇಳಿಬರುತ್ತಿವೆ.

English summary
Recently South Indian beauty Samantha said that she was in ‘love’. However, she did not mention who the lucky guy was. But rumours in the film industry suggest that it none other than actor Siddharth.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada