»   » ಸಮಂತಾ ಮನದಲ್ಲಿ ಸಿದ್ದಾರ್ಥ್ ಪ್ರೀತಿ ಹಚ್ಚೆ

ಸಮಂತಾ ಮನದಲ್ಲಿ ಸಿದ್ದಾರ್ಥ್ ಪ್ರೀತಿ ಹಚ್ಚೆ

Posted By:
Subscribe to Filmibeat Kannada

ತೆಲುಗು, ತಮಿಳು ಚಿತ್ರರಂಗದ ಆಗಾಗ ಹಿಂದಿ ಚಿತ್ರದಲ್ಲೂ ಈಗೀಗ ಬ್ಯುಸಿಯಾಗಿರುವ ಲವರ್ ಬಾಯ್ ಸಿದ್ದಾರ್ಥ್ ಗೆ ಫ್ಲರ್ಟ್ ಮಾಡುವುದು ಮಾಮೂಲಿ. ಇವನ ಹಿಂದೆ ಹುಡುಗಿಯರು ಸುತ್ತುವುದು. ಇವನು ಹುಡುಗಿಯರ ಹಿಂದೆ ಸುತ್ತುವುದು ಕೊನೆ ತಲೆ ತಿರುಗಿದಾಗ ಕಾಣದಂತೆ ತಿರುಗಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಚಿತ್ರರಂಗದಲ್ಲಿ ಪ್ಲೇ ಬಾಯ್ ಆಗಿ ಬೆಳೆಯುತ್ತಿರುವ ಸಿದ್ದಾರ್ಥ್ ಜೊತೆ ಹೊಸ ಹುಡುಗಿ ಸಮಂತಾ ಹೆಸರು ತಗುಲಿ ಹಾಕಿಕೊಂಡಿರುವುದು ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಆದರೆ, ಸಮಂತಾ ರುತ್ ಪ್ರಭು ಯಾಕೋ ಜಾಸ್ತಿ ಹಚ್ಚಿಕೊಂಡುಬಿಟ್ಟಿದ್ದಾಳೆ ಎನ್ನಿಸುತ್ತದೆ. ಇತ್ತೀಚೆಗೆ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಿನಿ ಅಂತಾ ಇದ್ಳು.

ಈಗ ಸಮಂತಾ ತನ್ನ ಪ್ರೀತಿಯನ್ನು ಅಲ್ಲಗೆಳೆಯಲು ಆಗದೆ 'ಪ್ರೀತಿ' ಪೂರ್ವಕವಾಗಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. LOVE ಎಂಬ ಟ್ಯಾಟೋ ಬಗ್ಗೆ ಮಾಧ್ಯಮಗಳಿಗೆ ಇತ್ತೀಚೆಗೆ ಗೊತ್ತಾಗಿದೆ. ಇನ್ನು ಮೂರು ವರ್ಷ ಮಾತ್ರ ಚಿತ್ರರಂಗದಲ್ಲಿರುತ್ತೇನೆ ಆಮೇಲೆ ನನ್ನ ಬದುಕು ಮದುವೆ ಇನ್ನು ಕೆಲವು ವಿಷಯಗಳತ್ತ ಗಮನಹರಿಸುತ್ತೇನೆ ಎಂದಿದ್ದಳು. ಪ್ರೇಮದ ಹಚ್ಚೆ ಸಿದ್ದಾರ್ಥ್ ಜೊತೆಗಿನ ಸಾಂಗತ್ಯ ಗಟ್ಟಿಯಾಗಿದ್ದರ ಚಿನ್ಹೆಯೇ ಎಂದರೆ ಬೆಳದಿಂಗಳ ನಗೆ ಚೆಲ್ಲಿದಳು.

ಇತ್ತೀಚಿಗೆ ಮಾಧ್ಯಮ ಮಿತ್ರರನ್ನು ಕರೆದು ತನ್ನ ವೃತ್ತಿ ಬದುಕು ಮುಕ್ತಾಯ ಯಾವಾಗ ಎಂಬುದರ ಬಗ್ಗೆ ಸುಳಿವು ನೀಡಿದ್ದಳು. ಲವ್, ಮದುವೆಗೆ ನಮ್ಮ ಮನೆಯಲ್ಲಿ ಏನು ಅಡ್ಡಿ ಏನಿಲ್ಲ ಎಂದ ಭರದಲ್ಲೇ ಸಿದ್ಧಾರ್ಥ್ ಜೊತೆಗಿನ ಪ್ರೇಮ ನಿಜ ಎಂದಿದ್ದಳು. ಈಗ ಇಬ್ಬರು ಅಧಿಕೃತವಾಗಿ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ ಎನ್ನಲಾಗಿದೆ. ಪ್ರೇಮ ಪ್ರಕರಣದ ಫ್ಯಾಶ್ ಬ್ಯಾಕ್ ಇಲ್ಲಿದೆ...

ಸಮಂತಾ- ಸಿದ್ದಾರ್ಥ್

ಸಮಂತಾ ಇತ್ತೀಚೆಗೆ, ನಾನು ಒಬ್ಬರನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಆದರೆ ಅವರ ಹೆಸರನ್ನು ಈಗಲೇ ಬಹಿರಂಗಪಡಿಸಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದರು. ನಂತರ ಸಿದ್ದಾರ್ಥ್ ಕುಟುಂಬಿಕರ ಜೊತೆ ನಿಯಮಿತವಾಗಿ ಬೆರೆಯುತ್ತಿರುವುದು ಸಮಂತಾ ಬಗ್ಗೆ ಅನುಮಾನದಿಂದ ನೋಡುವಂತಾಗಿತ್ತು.

ಜಬರ್ದಸ್ತ್ ನಾಯಕಿ ಸಮಂತಾ

ಜಬರ್ದಸ್ತ್ ನಾಯಕಿ ಸಮಂತಾ ಜೊತೆ ಮದುವೆಯಂತೆ ಹೌದೇ? ಎಂದರೆ ಅಯ್ಯೋ ಅದೆಲ್ಲ ಇಲ್ಲ ಬಿಡಿ ಎಂದು ಸಿದ್ದು ನಗಾಡಿದ್ದ.

ಆದರೆ, ಶೈವಕ್ಷೇತ್ರ ಶ್ರೀಕಾಳಹಸ್ತಿಗೆ ಅಪ್ಪ ಅಮ್ಮನ ಜೊತೆ ತೆರಳಿ ಮದುವೆಗೆ ತೊಡಕಾಗಿರುವ ನಾಗಪೂಜೆಯನ್ನು ನೆರವೇರಿಸಿ ಬಂದಿದ್ದ. ಇವರ ಪ್ರೇಮ್ ಕಹಾನಿಗೆ ಟ್ವಿಸ್ಟ್ ಎಂಬಂತೆ ಸಮಂತಾ ಕುಟುಂಬ ಕೂಡಾ ದೇಗುಲದಲ್ಲಿ ಕಾಣಿಸಿಕೊಂಡು ಜೊತೆ ಜೊತೆಗೆ ಪೂಜೆ ಸಲ್ಲಿಸಿತ್ತು.

ಸಿದ್ದಾರ್ಥ್ ಹಿನ್ನೆಲೆ

ಮಣಿರತ್ನಂ ಅವರ ಜೊತೆಗೆ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಇಳಿದ ಸಿದ್ದಾರ್ಥ್, ನಟ, ಗಾಯಕ, ಚಿತ್ರ ಬರಹಗಾರ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾನೆ.

ಆದರೆ, ವೈಯಕ್ತಿಕ ಬದುಕಿನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಮೇಲೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜೊತೆ ಲಿನ್ ಇನ್ ಸಂಬಂಧ ಹಾಳುಗೆಡವಿಕೊಂಡರು. ಎಲ್ಲಾ ಪ್ರಮುಖ ನಟಿಯರ ಜೊತೆ ಸಿದ್ದಾರ್ಥ್ ಹೆಸರು ಬೇಡದ ವಿಷಯಗಳಿಗೆ ತಗುಲಿಹಾಕಿಕೊಂಡಿದ್ದು ಅವರ ಕೆರಿಯರ್ ಗೆ ಕಪ್ಪುಚುಕ್ಕೆಯಾಗಿದೆ.

ಸಿದ್ದಾರ್ಥ್ ಲವರ್ ಬಾಯ್

ಸೋಹಾ ಅಲಿ ಖಾನ್, ಶ್ರುತಿ ಹಾಸನ್, ಪ್ರಿಯಾ ಆನಂದ್ ಪಟ್ಟಿಗೆ ಸಮಂತಾ ಸೇರ್ಪಡೆಯಾಗಿದ್ದು, ಸಿದ್ದಾರ್ಥ್ ಎಂಬ ಪ್ಲೇಬಾಯ್ ಗೆ ಸಮಂತಾ ಕಿರು ಬೆರಳ ಹಿಡಿದು ಸಪ್ತಪದಿ ತುಳಿಯುವ ಮನಸು ಮೂಡುವುದೇ ಕಾದು ನೋಡಬೇಕಿದೆ.

ಅಂದ ಹಾಗೆ ಸಮಂತಾಗೆ ಇನ್ನೂ ವಯಸ್ಸು ಇನ್ನೂ 25ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು. ಮದುವೆ ವಿಷಯದಲ್ಲಿ ಅನುಭವಿ

ಶೂಟಿಂಗ್ ನಲ್ಲಿ ಬ್ಯುಸಿ

ಸಿದ್ದಾರ್ಥ್ ನನ್ನ ಬಾಯ್ ಫ್ರೆಂಡ್ ಕಣ್ರಿ ಎಂದು ಸಮಂತಾ ಕಣ್ಣು ಮಿಟುಕಿಸಿ ನಕ್ಕ ಮೇಲೆ ಗಾಳಿಸುದ್ದಿಗೆ ರೆಕ್ಕೆ ಪುಕ್ಕ ಬಂದಿದ್ದೇನೋ ನಿಜ ಇಬ್ಬರು ಜೊತೆಜೊತೆಗೆ ಸಮಾರಂಭಗಳಲ್ಲಿ, ದೇಗುಲಗಳಿಗೆ ತೆರಳಿದ್ದು ನಿಜ.

ಆದರೆ, ಪ್ರೀತಿ ಬೇರೆ ಮದುವೆ ಬೇರೆ ಮದುವೆ ಬಗ್ಗೆ ಸದ್ಯಕ್ಕೆ ಇಬ್ಬರು ಯೋಚಿಸುವಂತಿಲ್ಲ. ಇಬ್ಬರು ಬಹುಬೇಡಿಕೆಯ ನಟ,ನಟಿಯಾಗಿದ್ದಾರೆ. ಸಮಂತಾ ಚೆನ್ನೈಗೆ ಬಂದು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ

English summary
Samantha has been spotted with a tattoo. She revealed the tattoo that reads ‘love’ to the media. Now, those in the media insist that the tattoo is symbolic of her love for Siddharth. It is being said that the pair is very much in love and that they will be tying the knot soon.
Please Wait while comments are loading...