For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗದ ಕಡೆ ಮುಖ ಮಾಡ್ತಾರಾ ಕನ್ನಡಿಗ ಸಂತೋಷ್ ಆನಂದ್ ರಾಮ್.?

  By Harshitha
  |

  ಸಂತೋಷ್ ಆನಂದ್ ರಾಮ್... ಉಡುಪಿ ಮೂಲದವರಾದರೂ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಿರ್ದೇಶಕ. ಆಕ್ಷನ್ ಕಟ್ ಹೇಳಿರುವ ಚಿತ್ರಗಳ ಸಂಖ್ಯೆ ಕೇವಲ 2. ಎರಡೂ ಸೂಪರ್ ಡ್ಯೂಪರ್ ಹಿಟ್ ಆಗಿರುವ ಕಾರಣ ಇವತ್ತು ಇವರು 'ಸ್ಟಾರ್ ಡೈರೆಕ್ಟರ್'. ಬಹುತೇಕ ತಾರೆಯರಿಗೆ ಇವರೊಂದಿಗೆ ಕೆಲಸ ಮಾಡುವ ಆಸೆ. ಆದ್ರೆ, ಇವರ ಚಿತ್ತ ಸದ್ಯ ತೆಲುಗು ಚಿತ್ರರಂಗದ ಕಡೆಗೆ.

  ಹೌದು, ಕನ್ನಡಿಗ.. ನಿರ್ದೇಶಕ ಸಂತೋಷ್ ಆನಂದ್ ರಾಮ್ ಟಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರಂತೆ. ಹಾಗೆನ್ನುತ್ತಿವೆ ಬಲ್ಲ ಮೂಲಗಳು.

  ತೆಲುಗಿನಲ್ಲಿ 'ರಾಜಕುಮಾರ' ರಾಜ್ಯಭಾರ

  ತೆಲುಗಿನಲ್ಲಿ 'ರಾಜಕುಮಾರ' ರಾಜ್ಯಭಾರ

  ಕನ್ನಡದಲ್ಲಿ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿರುವ 'ರಾಜಕುಮಾರ' ಚಿತ್ರದ ರೀಮೇಕ್ ರೈಟ್ಸ್ ಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆದ್ರೆ, ರೀಮೇಕ್ ಹಕ್ಕುಗಳನ್ನು ಸೇಲ್ ಮಾಡುವ ಬದಲು ತೆಲುಗಿನಲ್ಲಿ ತಮ್ಮದೇ ಬ್ಯಾನರ್ ನಲ್ಲಿ 'ರಾಜಕುಮಾರ' ಚಿತ್ರವನ್ನು ರೀಮೇಕ್ ಮಾಡಲು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಧರಿಸಿದ್ಯಂತೆ.

  ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್.!

  ತೆಲುಗಿನ ವರ್ಷನ್ ಗೂ ಸಂತೋಷ್ ಆನಂದ್ ರಾಮ್ ಡೈರೆಕ್ಟರ್

  ತೆಲುಗಿನ ವರ್ಷನ್ ಗೂ ಸಂತೋಷ್ ಆನಂದ್ ರಾಮ್ ಡೈರೆಕ್ಟರ್

  ಹೊಂಬಾಳೆ ಫಿಲ್ಮ್ಸ್ ಅಡಿ ನಿರ್ಮಾಣ ಆಗುವ ತೆಲುಗಿನ 'ರಾಜಕುಮಾರ' ಚಿತ್ರಕ್ಕೂ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುವ ಸಾಧ್ಯತೆ ಹೆಚ್ಚಾಗಿದೆ.

  ಕನ್ಫರ್ಮ್ ಇಲ್ಲ.!

  ಕನ್ಫರ್ಮ್ ಇಲ್ಲ.!

  ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟಾಲಿವುಡ್ ಗೆ ಹಾರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ ಹೊರತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

  'ರಾಜಮೌಳಿ'ನ ಭೇಟಿ ಮಾಡಿದ 'ರಾಜಕುಮಾರ' ಡೈರೆಕ್ಟರ್ ಸಂತೋಷ್

  ತೆಲುಗಿನಲ್ಲಿ 'ರಾಜಕುಮಾರ' ಯಾರು.?

  ತೆಲುಗಿನಲ್ಲಿ 'ರಾಜಕುಮಾರ' ಯಾರು.?

  ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ತೆಲುಗಿನಲ್ಲಿ ಯಾರು ನಿರ್ವಹಿಸಲಿದ್ದಾರೆ ಎಂಬುದು ಕೂಡ ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ.

  'ರಾಜಕುಮಾರ' ನಿರ್ದೇಶಕ ಹೈದರಬಾದ್ ಗೆ ಹೋಗಿದ್ದರ ಗುಟ್ಟು ರಟ್ಟು.!

  ರಾಜಮೌಳಿ ಜೊತೆ ಭೇಟಿ

  ರಾಜಮೌಳಿ ಜೊತೆ ಭೇಟಿ

  ಹೈದರಾಬಾದ್ ನಲ್ಲಿ 'ಬಾಹುಬಲಿ' ಡೈರೆಕ್ಟರ್ ಎಸ್.ಎಸ್.ರಾಜಮೌಳಿ ರವರನ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ನ ಕಾರ್ತಿಕ್ ಗೌಡ ಭೇಟಿ ಆಗಿದ್ದನ್ನ ಇಲ್ಲಿ ಸ್ಮರಿಸಬಹುದು. ತಮ್ಮ ಮುಂದಿನ ಚಿತ್ರದ ಬಗ್ಗೆ ಸಂತೋಷ್ ಆನಂದ್ ರಾಮ್ ರವರಿಗೆ ರಾಜಮೌಳಿ ಕೆಲ ಟಿಪ್ಸ್ ಗಳನ್ನು ನೀಡಿದ್ದಾರಂತೆ. ಹಾಗಾದ್ರೆ, ತೆಲುಗು ಚಿತ್ರರಂಗದ ಕಡೆಗೆ ಸಂತೋಷ್ ಆನಂದ್ ರಾಮ್ ಮುಖ ಮಾಡ್ತಾರಾ.? ಕಾದು ನೋಡೋಣ...

  English summary
  According to the grapevine, Kannada Director Santhosh Ananddram to make Tollywood debut with 'Raajakumara'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X