Don't Miss!
- News
ಶಾಲೆಯಲ್ಲಿ ಗಣಹೋಮ ನಡೆಸಿದಕ್ಕೆ ನೋಟಿಸ್ ಕೊಟ್ಟ ಬಿಇಒ!
- Finance
ಕಚ್ಚಾ ತೈಲ ದರ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಏಕಾಗಿದೆ?
- Technology
ಇಂದು ಇನ್ಫಿನಿಕ್ಸ್ ನೋಟ್ 12 ಟರ್ಬೋ ಫೋನಿನ ಫಸ್ಟ್ ಸೇಲ್!..ಕೊಡುಗೆ ಏನು?
- Automobiles
ಇವಿ ಸ್ಕೂಟರ್ನಲ್ಲಿ ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ
- Education
JEE Main 2022 Preparation Tips : ಮುಖ್ಯ ಪರೀಕ್ಷಾ ತಯಾರಿಗೆ ಸಲಹೆಗಳು ಇಲ್ಲಿವೆ
- Sports
ಇಂಡಿಯನ್ ಓಪನ್ ಆಫ್ ಸರ್ಫಿಂಗ್ 3ನೇ ಆವೃತ್ತಿ: ಮಂಗಳೂರಿನಲ್ಲಿ ಇಂದಿನಿಂದ ಭಾರತದ ಅಗ್ರ ಸರ್ಫರ್ಗಳ ಸ್ಪರ್ಧೆ
- Lifestyle
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಲ್ಲು ಅರ್ಜುನ್ ನಿರಾಕರಿಸಿದ್ದ 'ಸರ್ಕಾರು ವಾರಿ ಪಾಟ' ಮಹೇಶ್ ಬಾಬು ಪಾಲು?
ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಹೊಸ ಸಿನಿಮಾ. ಈ ಚಿತ್ರ ಮಹೇಶ್ ಬಾಬು ಸಿನಿಮಾ ಜರ್ನಿಯಲ್ಲಿ ಹೊಸ ತಿರುವು ನೀಡುವ ಸುಳಿವು ಕೊಟ್ಟಿದೆ. ಚಿತ್ರದ ಫಸ್ಟ್ ಲುಕ್ ಬಂದಾಗಿನಿಂದಲೂ ಸಿನಿಮಾದ ಮೇಲೆ ನಿರೀಕ್ಷೆ ಅಂತೂ ಮೂಡಿದೆ.
ಇನ್ನು ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಚಿತ್ರದ ಮಾಸ್ ಟ್ರೈಲರ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಹೇಶ್ ಬಾಬು ಮತ್ತಷ್ಟು ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ನೆಕ್ಸ್ಟ್ ಲೆವೆಲ್ ಅಭಿನಯ ಇರಲಿದೆ ಎಂದು ಪ್ರಿನ್ಸ್ ಅಭಿಮಾನಿಗಳು ಆತನನ್ನು ಕೊಂಡಾಡಿದ್ದಾರೆ.
ಮುಂದಿನ
ಸಿನಿಮಾ
ಬಗ್ಗೆ
ಮಾಹಿತಿ
ಕೊಟ್ಟ
ಪ್ರಿನ್ಸ್
ಮಹೇಶ್
ಬಾಬು
ಆದರೆ ಚಿತ್ರ ಟ್ರೈಲರ್ ರಿಲೀಸ್ ಆದಗಿನಿಂದಲೂ ಹೊಸ ವಿಚಾರವೊಂದು ಹರಿದಾಡುತ್ತಾ ಇದೆ. 'ಸರ್ಕಾರು ವಾರಿ ಪಾಟ' ಚಿತ್ರದ ಕಥೆ ಮಹೇಶ್ ಬಾಬುಗಾಗಿ ಬರೆದ ಕಥೆ ಅಲ್ಲ. ಈ ಕಥೆಯನ್ನು ನಿರ್ದೇಶಕ ಬರೆದಿದ್ದು ಅಲ್ಲು ಅರ್ಜುನ್‌ಗಾಗಿ ಎನ್ನುವ ಮಾತಿಗಳು ಕೇಳಿ ಬಂದಿದ್ದವು. ಇದಕ್ಕೆ ನಿರ್ದೇಶಕ ಪರಶುರಾಮ್ ಈಗ ಉತ್ತರಿಸಿದ್ದಾರೆ.

ಅಲ್ಲು ಅರ್ಜುನ್‌ಗಾಗಿ ಪರಶುರಾಮ್ ಬರೆದ ಕಥೆ!
ನಿರ್ದೇಶಕ ಪರಶುರಾಮ್ 'ಗೀತಾ ಗೋವಿಂದಂ' ಚಿತ್ರದ ನಂತರ ಗೀತಾ ಆರ್ಟ್ಸ್‌ಗಾಗಿ ಮತ್ತೊಂದು ಸಿನಿಮಾ ಮಾಡಬೇಕಿತ್ತು. ಗೀತಾ ಗೋವಿಂದಂ ಮತ್ತು ಶ್ರೀರಸ್ತು ಶುಭಮಸ್ತು ಚಿತ್ರಗಳನ್ನು ಮಾಡಿದ್ದ ಪರಶುರಾಮ್ ಅಲ್ಲು ಅರ್ಜುನ್‌ಗಾಗಿ ಮತ್ತೊಂದು ಸಿನಿಮಾವನ್ನು ಗೀತಾ ಆರ್ಟ್ಸ್‌ನಲ್ಲಿಯೇ ಮಾಡುತ್ತಾರೆ ಎನ್ನಲಾಗಿತ್ತು. ಅಲ್ಲು ಅರ್ಜುನ್‌ಗಾಗಿ ಮಾಡಬೇಕಿದ್ದ ಕಥೆಯೇ ಈಗ ಮಹೇಶ್ ಬಾಬು ಅಭಿನಯಿಸುತ್ತಾ ಇರುವ 'ಸರ್ಕಾರು ವಾರಿ ಪಾಟ' ಅಂತೆ.
ಮಹೇಶ್
ಬಾಬು
ಸಿನಿಮಾ
ಟಿಕೆಟ್
ದರ
ಹೆಚ್ಚಿಸಲು
ಒಪ್ಪಿಗೆ:
ದರ
ಎಷ್ಟು
ಹೆಚ್ಚಳ?

ಅಲ್ಲು ಅರ್ಜುನ್‌ಗಾಗಿ ಮಾಡಿದ್ದ ಕಥೆಯೆ ಮಹೇಶ್ ನಾಯಕ?
ಗೀತಾ ಆರ್ಟ್ಸ್‌ನಲ್ಲಿ ಪರಶುರಾಮ್ ಅಲ್ಲು ಅರ್ಜುನ್‌ಗಾಗಿ ಸಿನಿಮಾ ಮಾಡಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಪರಶುರಾಮ್‌ಗೆ ಹೊಸ ನಿರ್ದೇಶಕ ಸಿಕ್ಕರು. ಹಾಗಾಗಿ ಅದೇ ಕಥೆಯನ್ನು ಪರಶುರಾಮ್, ಮಹೇಶ್ ಬಾಬುಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವನ್ನು ಪರಶುರಾಮ್ ತಳ್ಳಿ ಹಾಕಿದ್ದಾರೆ. ಈ ಚಿತ್ರದ ಕಥೆಯನ್ನು ಮಹೇಶ್ ಬಾಬುಗಾಗಿಯೇ ಬರೆದಿದ್ದೇನೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಇದು ಅಲ್ಲು ಅರ್ಜುನ್ ಕಥೆಯಲ್ಲ: ಪರಶುರಾಮ್!
'ಸರ್ಕಾರು ವಾರಿ ಪಾಟ' ಚಿತ್ರದ ಕಥೆಯನ್ನು ಮಹೇಶ್ ಬಾಬುಗಾಗಿಯೇ ಬರೆದಿರುವುದಾಗಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. "ಗೀತ ಗೋವಿಂದಂ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮಾಡುವಾಗ, ನನಗೆ ಈ ಕಥೆ ಹೊಳೆಯಿತು. ನಾನು ಮಹೇಶ್ ಬಾಬು ಅವರನ್ನು ಭೇಟಿಯಾಗಿ ಈ ಕಥೆಯನ್ನು ಹೇಳಿದೆ. ಮಹೇಶ್ ಬಾಬು ಈ ಕಥೆಯನ್ನು ತುಂಬಾ ಇಷ್ಟ ಪಟ್ಟ ಕಾರಣ ಸಿನಿಮಾ ಮಾಡುವುದು ಪಕ್ಕಾ ಆಯ್ತು. ನಂತರ ಸ್ಕ್ರಿಪ್ಟ್ ಕೆಲಸ ಮಾಡಲು ಪ್ರಾರಂಭಿಸಿದೆ. ಹಾಗಾಗಿ, ಇದು ಅಲ್ಲು ಅರ್ಜುನ್ ಅಥವಾ ಬೇರೆ ಯಾರಿಗೋ ಬರೆದ ಕಥೆಯಲ್ಲ. ಇದು ಸಂಪೂರ್ಣವಾಗಿ ಮಹೇಶ್ ಬಾಬುಗಾಗಿ ಮಾತ್ರ ರಚಿಸಲಾಗಿದೆ" ಎಂದು ಪರಶುರಾಮ್ ಹೇಳಿಕೆ ನೀಡಿದ್ದಾರೆ.
ಕಾಲಿನ
ಫೋಟೊ
ತೋರಿಸಿ
ಮುಖ
ತೋರಿಸಲು
ನಿರ್ಧರಿಸಿದ
ಸಾಯಿ
ಪಲ್ಲವಿ:
ಬರ್ತ್‌ಡೇ
ದಿನವೇ
ಮುಹೂರ್ತ

ಪುಷ್ಪ ಚಿತ್ರವನ್ನು ತಿರಸ್ಕರಿಸಿದ್ದ ಮಹೇಶ್ ಬಾಬು!
ಅಲ್ಲು ಅರ್ಜುನ್ ಅಭಿನಯಿಸಿ ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾ 'ಪುಷ್ಪ' ಸಿನಿಮಾ ಮೊದಲು ಮಹೇಶ್ ಬಾಬು ಬಳಿಗೆ ಹೋಗಿತ್ತು. ಆದರೆ ಮಹೇಶ್ ಬಾಬು ಈ ಚಿತ್ರವನ್ನು ತಿರಸ್ಕರಿಸಿದ ಬಳಿಕ, ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್ ಈ ಕಥೆ ಹೇಳಿ ಸಿನಿಮಾ ಮಾಡಿದ್ದಾರೆ. ಈಗ ಅಲ್ಲು ಅರ್ಜುನ್ ಬಿಟ್ಟ ಕಥೆಯಲ್ಲಿ ಮಹೇಶ್ ಬಾಬು ಅಭಿನಯಿಸಿದ್ದಾರೆ ಎನ್ನುವ ಪುಕಾರು ಹಬ್ಬಿದೆ.