For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಮುಂಚೆಯೇ ದಾಖಲೆ ಮೊತ್ತಕ್ಕೆ ಮಹೇಶ್ ಬಾಬು ಚಿತ್ರದ ಡಿಜಿಟಲ್ ಹಕ್ಕು ಸೇಲ್!

  |

  'ಸರಿಲೇರು ನೀಕೆವ್ವರು' ಚಿತ್ರದ ಬಳಿಕ ಮಹೇಶ್ ಬಾಬು ನಟಿಸುತ್ತಿರುವ ಚಿತ್ರ 'ಸರ್ಕಾರು ವಾರಿ ಪಾಟ'. ಫಸ್ಟ್ ಲುಕ್ ಪೋಸ್ಟರ್, ಮೋಷನ್ ಪೋಸ್ಟರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಟಾಲಿವುಡ್ ಇಂಡಸ್ಟ್ರಿ ಪಾಲಿಗೆ ಹೊಸ ದಾಖಲೆ ಸೃಷ್ಟಿಸಿಲಿದೆ ಎಂದು ಹೇಳಲಾಗುತ್ತಿದೆ.

  ಬರಿ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರಕ್ಕೆ ಭಾರಿ ಬೇಡಿಕೆ ಸಿಕ್ಕಿದ್ದು, ಶೂಟಿಂಗ್ ಮುಕ್ತಾಯವಾಗುವುದಕ್ಕೂ ಮೊದಲೇ ಸ್ಯಾಟ್‌ಲೈಟ್ ಹಕ್ಕು ದೊಡ್ಡ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿ ತೆಲುಗು ಸಿನಿನಗರಿಯಲ್ಲಿ ಚರ್ಚೆಯಾಗ್ತಿದೆ. ಈ ಸುದ್ದಿ ಕೇಳಿ ಪ್ರಿನ್ಸ್ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ, ಮಹೇಶ್ ಹೊಸ ಚಿತ್ರಕ್ಕೆ ಸಿಕ್ಕ ಸ್ಯಾಟ್‌ಲೈಟ್ ಬೆಲೆ ಎಷ್ಟು?

  'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಸಿಕ್ಕ ಬೆಲೆ ಎಷ್ಟು?

  'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಸಿಕ್ಕ ಬೆಲೆ ಎಷ್ಟು?

  ಮಹೇಶ್ ಬಾಬು ನಟಿಸುತ್ತಿರುವ ಇನ್ನು ಬಿಡುಗಡೆಯಾಗದ ಸರ್ಕಾರು ವಾರಿ ಪಾಟು ಚಿತ್ರದ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು 35 ಕೋಟಿಗೆ ಸೇಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಮಹೇಶ್ ಬಾಬು ಚಿತ್ರಗಳ ಪೈಕಿ ಅತಿ ಹೆಚ್ಚು ಬೆಲೆ ಎಂದು ಹೇಳಲಾಗಿದೆ.

  ಮೂರು ವರ್ಷ ಚಿತ್ರರಂಗದಿಂದ ದೂರಾಗಿದ್ದ ಮಹೇಶ್ ಬಾಬು: ಅವರೇ ಕೊಟ್ಟ ಕಾರಣಮೂರು ವರ್ಷ ಚಿತ್ರರಂಗದಿಂದ ದೂರಾಗಿದ್ದ ಮಹೇಶ್ ಬಾಬು: ಅವರೇ ಕೊಟ್ಟ ಕಾರಣ

  'ಸರಿಲೇರು ನೀಕೆವ್ವರು' ಚಿತ್ರಕ್ಕೆ ಎಷ್ಟು ಸಿಕ್ಕಿತ್ತು?

  'ಸರಿಲೇರು ನೀಕೆವ್ವರು' ಚಿತ್ರಕ್ಕೆ ಎಷ್ಟು ಸಿಕ್ಕಿತ್ತು?

  ಮಹೇಶ್ ಬಾಬು ನಟನೆಯಲ್ಲಿ ಕೊನೆಯದಾಗಿ ತೆರೆಕಂಡ ಸಿನಿಮಾ 'ಸರಿಲೇರು ನೀಕೆವ್ವರು'. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆದ ಈ ಚಿತ್ರ ಕಲೆಕ್ಷನ್ ಸಹ ಜೋರಾಗಿಯೇ ಇತ್ತು. ಈ ಚಿತ್ರಕ್ಕೆ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟವಾದ ಬೆಲೆ 24.5 ಕೋಟಿ.

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!

  'ಮಹರ್ಷಿ' ಚಿತ್ರಕ್ಕೆ ದೊಡ್ಡ ಮೊತ್ತ ಸಿಕ್ಕಿತ್ತು

  'ಮಹರ್ಷಿ' ಚಿತ್ರಕ್ಕೆ ದೊಡ್ಡ ಮೊತ್ತ ಸಿಕ್ಕಿತ್ತು

  2019ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಮಹರ್ಷಿ. ವಂಶಿ ನಿರ್ದೇಶನ ಮಾಡಿದ್ದ ಈ ಚಿತ್ರವು ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಚಿತ್ರದ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟವಾಗಿದ್ದು 27.5 ಕೋಟಿಗೆ ಎಂದು ಹೇಳಲಾಗಿದೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ಕೀರ್ತಿ ಸುರೇಶ್ ನಾಯಕಿ!

  ಕೀರ್ತಿ ಸುರೇಶ್ ನಾಯಕಿ!

  'ಗೀತಾ ಗೋವಿಂದಂ' ಚಿತ್ರ ನಿರ್ದೇಶನ ಮಾಡಿದ್ದ ಪರುಶರಾಮ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕೀರ್ತಿ ಸುರೇಶ್ ಚಿತ್ರಕ್ಕೆ ನಾಯಕಿ ಎಂದು ಹೇಳಲಾಗಿದ್ದು, ಎರಡನೇ ನಾಯಕಿಯಾಗಿ ಅನನ್ಯ ಪಾಂಡೆ ಇರಲಿದ್ದಾರೆ. ದಸರಾ ಹಬ್ಬದ ನಂತರ ಶೂಟಿಂಗ್ ಆರಂಭ ಮಾಡುವ ಚಿತ್ರ ಮುಂದಿನ ವರ್ಷ ದಸರಾ ಹಬ್ಬಕ್ಕೆ ತೆರೆಮೇಲೆ ಬರಲಿದೆ.

  English summary
  Telugu actor Mahesh babu starrer upcoming movie Sarkaru Vaari Paata digital and satellite rights sold for 35 Crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X