For Quick Alerts
  ALLOW NOTIFICATIONS  
  For Daily Alerts

  ಶಂಕರ್ ₹1000 ಕೋಟಿ ಬಜೆಟ್‌ ಸಿನಿಮಾದಲ್ಲಿ ಯಶ್, ರಣ್‌ವೀರ್, ರಾಮ್‌ಚರಣ್, ಸೂರ್ಯ?

  |

  ದುಬಾರಿ ನಿರ್ದೇಶಕ ಶಂಕರ್ ಸಿನಿಮಾ ಅಂದ್ರೆ ಎಲ್ಲರ ಕಣ್ಣು ನೆಟ್ಟಗಾಗುತ್ತೆ. 100 ಕೋಟಿ ಬಜೆಟ್‌ನಲ್ಲಿ ಶಂಕರ್ ಸಿನಿಮಾ ಮಾಡೋದನ್ನು ನಿಲ್ಲಿಸಿ ಜಮಾನವೇ ಆಗಿ ಹೋಗಿದೆ. ಈಗೇನಿದ್ದರೂ ಇವರ ಸಿನಿಮಾದ ಬಜೆಟ್ ಕೂಡ ಕುತೂಹಲ ಸೃಷ್ಟಿಸುತ್ತೆ.

  ಸದ್ಯ ಶಂಕರ್ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್‌ ರಾಮ್‌ ಚರಣ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಜೆಟ್ ಕೂಡ ಬರೋಬ್ಬರಿ 300 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಆದ್ರೀಗ ದಕ್ಷಿಣ ಭಾರತದಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಶಂಕರ್ ಮುಂದಿನ ಸಿನಿಮಾದ ಬಜೆಟ್ 1000 ಕೋಟಿ ರೂ. ಎನ್ನಲಾಗುತ್ತಿದೆ.

  Recommended Video

  KGF 3ಯಲ್ಲಿ Yash ಲುಕ್ ಇದೇನಾ? *Sandalwood

  ಯಶ್‌ ಸಿನಿಮಾಗೆ ಎಂದು ಇಟ್ಟಿದ್ದ 'ರಾಣ' ಟೈಟಲ್ ಕೆ ಮಂಜು ಪುತ್ರನ ಪಾಲಾಗಿದ್ದೇಗೆ?ಯಶ್‌ ಸಿನಿಮಾಗೆ ಎಂದು ಇಟ್ಟಿದ್ದ 'ರಾಣ' ಟೈಟಲ್ ಕೆ ಮಂಜು ಪುತ್ರನ ಪಾಲಾಗಿದ್ದೇಗೆ?

  ರಾಮ್ ಚರಣ್ ಸಿನಿಮಾ ಮುಗಿಸುತ್ತಿದ್ದಂತೆ ಶಂಕರ್ ಭಾರತದ ದುಬಾರಿ ಸಿನಿಮಾಗೆ ಕೈ ಹಾಕಲಿದ್ದಾರಂತೆ. ಇದು ಮಲ್ಟಿಸ್ಟಾರರ್ ಸಿನಿಮಾ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಶಂಕರ್ ಮಲ್ಟಿಸ್ಟಾರರ್ ಸಿನಿಮಾ ಮಾಡ್ತಾರಾ? ನಾಲ್ಕು ಹೀರೊಗಳು ಒಟ್ಟಿಗೆ ನಟಿಸುತ್ತಾರಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಶಂಕರ್ 1000 ಕೋಟಿ ಬಜೆಟ್ ಸಿನಿಮಾ

  ಶಂಕರ್ 1000 ಕೋಟಿ ಬಜೆಟ್ ಸಿನಿಮಾ

  ಶಂಕರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ಸಿನಿಮಾ ಸದ್ದಿಲ್ಲದೆ ನಡೆಯುತ್ತಿದೆ. ಈ ಮಧ್ಯೆ ಅರ್ಧಕ್ಕೆ ನಿಂತಿದ್ದ 'ಇಂಡಿಯನ್ 2'ಗೂ ಜೈ ಎಂದಿದ್ದಾರೆ. ಎರಡೆರಡು ಸಿನಿಮಾಗಳಲ್ಲಿ ಶಂಕರ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಶಂಕರ್ ನಿರ್ದೇಶನ ಮಾಡಲು ಹೊರ ಹೊಸ ಸಿನಿಮಾ ಬಗ್ಗೆ ಇಡೀ ದಕ್ಷಿಣ ಭಾರತದಲ್ಲಿ ಹಲ್‌ಚಲ್ ಎದ್ದಿದೆ. ಅದಕ್ಕೆ ಕಾರಣ ಸಿನಿಮಾ ಬಜೆಟ್. ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.

  'ವೆಲ್ಪರಿ' ಕಾದಂಬರಿಯನ್ನು ಆಧರಿಸಿದ ಚಿತ್ರ

  'ವೆಲ್ಪರಿ' ಕಾದಂಬರಿಯನ್ನು ಆಧರಿಸಿದ ಚಿತ್ರ

  ಬಿಗ್ ಬಜೆಟ್ ಸಿನಿಮಾಗಳ ಸರದಾರ ಶಂಕರ್ ಮತ್ತೊಂದು ಸಿನಿಮಾ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ. ಇದು ತಮಿಳಿನ ಜನಪ್ರಿಯ ಕಾದಂಬರಿ 'ವೆಲ್ಪರಿ'ಯನ್ನು ಆಧರಿಸಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದು ಸು ವೆಂಕಟೇಸನ್ ಬರೆದಿರೋ ತಮಿಳು ಕಾದಂಬರಿ. ಇದು ಮೂರು ಭಾಗಗಳಲ್ಲಿ ಸಿನಿಮಾ ಆಗಲಿದೆ ಅನ್ನೋದನ್ನು ಮತ್ತೊಬ್ಬ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹೇಳಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. "ವೆಲ್ಪರಿಯನ್ನು 1000 ಕೋಟಿ ರೂ. ಬಜೆಟ್‌ ಇಟ್ಟು ಮೂರು ಭಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶಂಕರ್ ಆರ್‌ಸಿ 15 ಸಿನಿಮಾಗೆ ಸ್ಕ್ರೀನ್‌ ಪ್ಲೇ ಬರೆಯುವಂತೆ ಕೇಳಿದ್ದರು. ಆ ವೇಳೆ ವೆಲ್ಪರಿ ಬಗ್ಗೆ ಸಿನಿಮಾ ಮಾಡುವ ಪ್ರಸ್ತಾಪ ಮಾಡಿದ್ದರು." ಎಂದು ಕಾರ್ತಿಕ್ ಹೇಳಿದ್ದಾರೆ.

  ಇದು ಮಲ್ಟಿಸ್ಟಾರ್‌ ಸಿನಿಮಾ?

  ಇದು ಮಲ್ಟಿಸ್ಟಾರ್‌ ಸಿನಿಮಾ?

  ಶಂಕರ್ ನಿರ್ದೇಶಿಸುತ್ತಿರುವ ಭಾರತದ ದುಬಾರಿ ಬಜೆಟ್ ಸಿನಿಮಾಗೆ ನಾಲ್ಕು ಸೂಪರ್‌ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಬಾಲಿವುಡ್‌ ನಟ ರಣ್‌ವೀರ್ ಸಿಂಗ್ ಜೊತೆ ಶಂಕರ್ ಸಿನಿಮಾ ಮಾಡೋ ಬಗ್ಗೆ ಹಲವು ದಿನಗಳಿಂದ ಚರ್ಚೆಯಾಗುತ್ತಿದೆ. ಇದರೊಂದಿಗೆ ಯಶ್ ಮುಂದಿನ ಸಿನಿಮಾವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ ಎಂದು ಹಲವು ದಿನಗಳಿಂದ ಓಡಾಡಿತ್ತು. ಈಗ ಇವರ ಜೊತೆ ರಾಮ್‌ ಚರಣ್ ಹಾಗೂ ಸೂರ್ಯ ಹೆಸರು ಕೂಡ ಸೇರಿಕೊಂಡಿದೆ. ಮೂರು ಪಾರ್ಟ್‌ಗಳಲ್ಲಿ ನಿರ್ಮಾಣ ಆಗುತ್ತಿರೋ ಸಿನಿಮಾದಲ್ಲಿ ಈ ನಾಲ್ಕು ನಟಿಸುತ್ತಾರೆ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ.

  ಯಶ್ 19 ಸುದ್ದಿ ಯಾವುದೂ ನಿಜವಲ್ಲ

  ಯಶ್ 19 ಸುದ್ದಿ ಯಾವುದೂ ನಿಜವಲ್ಲ

  ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಇತ್ತೀಚೆಗೆ ಯಶ್ ಮಾಧ್ಯಮದಲ್ಲಿ "ನನ್ನ ಸಿನಿಮಾ ಬಗ್ಗೆ ಹರಿದಾಡುತ್ತಿರುವ ಸುದ್ದಿ ಯಾವುದೂ ನಿಜವಲ್ಲ. ಏನೇ ಇದ್ದರೂ ನಾನೇ ಹೇಳುತ್ತೇನೆ. ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ." ಎಂದು ಯಶ್ ಹೇಳಿದ್ದರು. ಹೀಗಾಗಿ ಈಗ ಹರಿದಾಡುತ್ತಿರುವ ಸುದ್ದಿಯನ್ನು ನಂಬಬೇಕೋ ಬೇಡವೋ ಅನ್ನೋ ಗೊಂದಲದಲ್ಲಂತೂ ಅಭಿಮಾನಿಗಳಿದ್ದಾರೆ.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  English summary
  Shankar Will Be Directing 1000 Crore Movie With Yash, Ranveer Singh, Ram charan, Surya, Know More.
  Wednesday, November 9, 2022, 20:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X