»   » 'ಸಂಜು ವೆಡ್ಸ್ ಗೀತಾ-2'ಗೆ ಬದಲಾದ ನಾಯಕ: ಆ ಸ್ಟಾರ್ ನಟ ಯಾರು?

'ಸಂಜು ವೆಡ್ಸ್ ಗೀತಾ-2'ಗೆ ಬದಲಾದ ನಾಯಕ: ಆ ಸ್ಟಾರ್ ನಟ ಯಾರು?

Posted By:
Subscribe to Filmibeat Kannada

'ಸಂಜು ವೆಡ್ಸ್ ಗೀತಾ'.... ಸ್ಯಾಂಡಲ್ ವುಡ್ ನಲ್ಲಿ ಭಾರಿ ಫೇಮಸ್ ಆಗಿದ್ದ ಸಿನಿಮಾ. ಚಿತ್ರದ ಹಾಡುಗಳು ಮತ್ತು ನಾಗಶೇಖರ್ ಹೇಳಿದ್ದ ಹೊಸ ರೀತಿಯ ಪ್ರೇಮ ಕತೆಯನ್ನ ಕನ್ನಡ ಸಿನಿಮಾ ಪ್ರೇಮಿಗಳು ಮೆಚ್ಚಿಕೊಂಡಿದ್ರು. ಸಿನಿಮಾ ಹಿಟ್ ಆದ ನಂತರ 'ಸಂಜು ವೆಡ್ಸ್ ಗೀತಾ-2' ಸಿನಿಮಾ ಮಾಡುವುದಾಗಿ ತಿಳಿಸಿದ್ದ ನಾಗಶೇಖರ್ ಸದ್ಯ ಪ್ರೀ ಪ್ರೊಡಕ್ಷನ್ಸ್ ಕೆಲಸ ಶುರು ಮಾಡಿದ್ದಾರೆ.

ಪ್ರಾರಂಭದಲ್ಲಿ ತಾವೇ ನಾಯಕನಾಗಿ ಅಭಿನಯಿಸುವುದಾಗಿ ತಿಳಿಸಿದ್ದ ನಾಗಶೇಖರ್ ಈಗ 'ಸಂಜು ವೆಡ್ಸ್ ಗೀತಾ-2' ಸಿನಿಮಾಗೆ ಸ್ಟಾರ್ ನಟನನ್ನ ಕರೆತಂದಿದ್ದಾರೆ. ಇನ್ನು ಕೃತಿ ಕರಬಂಧ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ಆದ್ರೆ ಈಗ ನಾಯಕಿ ಕೂಡ ಬದಲಾಗಿದ್ದು ಸದ್ಯ ನಾಯಕಿಯ ಹುಡುಕಾಟದಲ್ಲಿ ನಾಗಶೇಖರ್ ಬ್ಯುಸಿ ಆಗಿದ್ದಾರೆ.

Sharan to play lead in Sanju Weds Geetha 2

'ಸಂಜು ವೆಡ್ಸ್ ಗೀತಾ-2' ಸಿನಿಮಾಗೆ ಬಂದಿರುವ ಆ ಸ್ಟಾರ್ ನಟ ಯಾರು ಅಂದ್ರೆ ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಶರಣ್.

Sharan to play lead in Sanju Weds Geetha 2

ಹೌದು, 'ಸಂಜು ವೆಡ್ಸ್ ಗೀತಾ-2' ಸಿನಿಮಾಗೆ ನಿರ್ದೇಶಕ ನಾಗಶೇಖರ್, ಶರಣ್ ಅವ್ರನ್ನ ಆಯ್ಕೆ ಮಾಡಿದ್ದಾರಂತೆ. ಇಷ್ಟು ದಿನಗಳ ಕಾಲ ಕೇವಲ ಕಾಮಿಡಿ ಪಾತ್ರದಲ್ಲೇ ಕಾಣಿಸಿಕೊಂಡಿರುವ ಶರಣ್ ಅವ್ರಿಂದ ಲವ್ವರ್ ಬಾಯ್ ಕ್ಯಾರೆಕ್ಟರ್ ಮಾಡಿಸೋ ಆಲೋಚನೆಯಲ್ಲಿದ್ದಾರಂತೆ ನಿರ್ದೇಶಕರು. ಮೂರು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶರಣ್ ಡೇಟ್ಸ್ ಸಿಕ್ಕರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಶರಣ್ ಅವ್ರನ್ನ ಬೇರೆಯದ್ದೇ ರೀತಿಯ ಪಾತ್ರದಲ್ಲಿ ನೋಡೋ ಅವಕಾಶ ಸಿಗಲಿದೆ.

English summary
Sharan to play lead in Sanju Weds Geetha 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X