»   » ಸ್ಟಾರ್ ಕಲಾವಿದರು ರಿಜೆಕ್ಟ್ ಮಾಡಿದ 'ಚಿತ್ರಕ್ಕೆ' ಶ್ರುತಿ ಅದೃಷ್ಟವಾಗ್ತಾರಾ.?

ಸ್ಟಾರ್ ಕಲಾವಿದರು ರಿಜೆಕ್ಟ್ ಮಾಡಿದ 'ಚಿತ್ರಕ್ಕೆ' ಶ್ರುತಿ ಅದೃಷ್ಟವಾಗ್ತಾರಾ.?

Posted By:
Subscribe to Filmibeat Kannada

'ನೀರ್ ದೋಸೆ' ಚಿತ್ರದ ನಂತರ ನಿರ್ದೇಶಕ ವಿಜಯ ಪ್ರಸಾದ್ ವಿಭಿನ್ನ ಕಥೆಯನ್ನಿಟ್ಟು ಸಿನಿಮಾ ಮಾಡಲು ನಿರ್ಧರಿಸಿದ್ದರು. ಅದಕ್ಕೆ 'ಲೇಡಿಸ್ ಟೈಲರ್' ಎಂದು ಟೈಟಲ್ ಕೂಡ ಇಟ್ಟು ಗಮನ ಸೆಳೆದರು.

ಆದ್ರೆ, ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ. ಸಿನಿಮಾ ಆರಂಭವಾಗೇ ಇಲ್ಲ. ಯಾಕಂದ್ರೆ, ಈ ಚಿತ್ರದ ಕಥೆಯನ್ನ ಮೆಚ್ಚಿಕೊಂಡ ಸ್ಟಾರ್ ಕಲಾವಿದರು, ಚಿತ್ರದಲ್ಲಿ ಅಭಿನಯಿಸಲು ಧೈರ್ಯ ಮಾಡಲಿಲ್ಲ. ಅದರಲ್ಲೂ, ಈ ಚಿತ್ರದ ನಾಯಕಿ ಪಾತ್ರಕ್ಕಂತೂ ಯಾವ ನಟಿಯೂ ಆಸಕ್ತಿ ತೋರಲೇ ಇಲ್ಲ.

ಇದೀಗ, ಕನ್ನಡದ ಪ್ರತಿಭಾನ್ವಿತ ನಟಿ ಶ್ರುತಿ ಹರಿಹರನ್ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಅಷ್ಟಕ್ಕೂ, ಈ ಚಿತ್ರದಲ್ಲಿ ಅಂಥಹದ್ದೇನಿದೆ? ಯಾಕೆ ಯಾರೂ ಒಪ್ಪಲಿಲ್ಲ, ಈಗ ಶ್ರುತಿ ಒಪ್ಪಲು ಕಾರಣವೇನು ಎಂದು ಮುಂದೆ ಓದಿ.....

'ಲೇಡಿಸ್ ಟೈಲರ್'ಗೆ ಸಾಥ್ ಕೊಡ್ತಿದ್ದಾರೆ ಶ್ರುತಿ

'ನೀರ್ ದೋಸೆ' ನಿರ್ದೇಶಕನ 'ಲೇಡಿಸ್ ಟೈಲರ್' ಚಿತ್ರದಲ್ಲಿ ನಟಿ ಶ್ರುತಿ ಹರಿಹರನ್ ಮುಖ್ಯಪಾತ್ರವನ್ನ ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

'ನೀರ್ದೋಸೆ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಇಲ್ಲ

ನಿಂತಿದ್ದ ಪ್ರಾಜೆಕ್ಟ್ ಗೆ ಮತ್ತೆ ಜೀವ.!

ಕಥೆಯಲ್ಲಿ ಕೊಂಚ ಬದಲಾವಣೆ ಮಾಡುವಂತೆ ಹಲವು ಕಲಾವಿದರು ಸೂಚಿಸಿದ್ದರು. ಆದ್ರೆ, ನಿರ್ದೇಶಕರು ಒಪ್ಪಿರಲಿಲ್ಲ. ಹೀಗಾಗಿ, ಯಾವ ಕಲಾವಿದರು ಅಭಿನಯಿಸಲು ಮುಂದಾಗಲಿಲ್ಲ. ಈಗ ನಿರ್ದೇಶಕರು ಚಿತ್ರಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಪರಿಣಾಮ ಶ್ರುತಿ ಹೆಜ್ಜೆಯಿಟ್ಟಿದ್ದಾರೆ.

'ಲೇಡಿಸ್ ಟೈಲರ್' ಚಿತ್ರವನ್ನ ಯಾರೂ ಒಪ್ಪುತ್ತಿಲ್ಲ ಯಾಕೆ? ಚಿತ್ರದಲ್ಲಿ ಅಂತಹದ್ದೇನಿದೆ?

ನಾಯಕಿಯ ತೂಕ ಕಡಿಮೆಯಾಗುತ್ತಾ?

ಅಂದ್ಹಾಗೆ, 'ಲೇಡಿಸ್ ಟೈಲರ್' ಕಥೆಯಲ್ಲಿ ನಾಯಕಿಯ ತೂಕ ಬರೋಬ್ಬರಿ 120 ಕೆಜಿ ಇರಬೇಕಂತೆ. ಆದ್ರೀಗ, ಶ್ರುತಿ ಅವರು ಅಷ್ಟು ತೂಕ ಹೆಚ್ಚಿಸಿಕೊಳ್ಳುತ್ತಾರ? ಅಥವಾ ತೂಕದಲ್ಲಿ ಕಡಿಮೆ ಮಾಡಲಾಗಿದೆಯಾ ಎಂಬ ಕುತೂಹಲ ಕಾಡುತ್ತಿದೆ.

ನಿರ್ದೇಶಕರ ಮುಂದಿನ ಆಯ್ಕೆ ಏನು?

ಸದ್ಯ, ಚಿತ್ರಕ್ಕೆ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದ್ದಾಗಿದೆ. ಮತ್ತೊಂದೆಡೆ ನಾಯಕನ ಪಾತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಎಂಬುದು ಈಗ ಪ್ರಶ್ನೆಯಾಗಿದೆ. ಇದಕ್ಕು ಮೊದಲು ರವಿಶಂಕರ್ ಗೌಡ ಆಯ್ಕೆ ಆಗಿದ್ದರು. ಆದ್ರೆ, ಅದ್ಯಾಕೋ ಮುಂದುವರೆಯಲಿಲ್ಲ. ನಂತರ ಸತೀಶ್ ನೀನಾಸಂ ಮತ್ತು ಜಗ್ಗೇಶ್ ಅವರ ಹೆಸರು ಕೇಳಿ ಬಂತಾದರೂ ಅದು ನಿಜವಾಗಲಿಲ್ಲ. ಈಗ ಈ ಪಾತ್ರವನ್ನ ಯಾರು ಮಾಡಬಹುದು?

ನವೆಂಬರ್ ನಲ್ಲಿ ಆರಂಭ.!

'ನೀರ್ ದೋಸೆ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಪ್ರಸನ್ನ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನವೆಂಬರ್ ತಿಂಗಳಿನಲ್ಲಿ 'ಲೇಡಿಸ್ ಟೈಲರ್' ಚಿತ್ರಕ್ಕೆ ಚಾಲನೆ ದೊರೆಯಲಿದೆಯಂತೆ.

English summary
According to source, Actress Shruthi Hariharan will Play Female Lead Role In Vijaya Prasad's 'Ladies Tailor'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada