Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಷರತ್ತುಗಳನ್ನು ಹಾಕಿ ಪ್ರಿನ್ಸ್ ಚಿತ್ರದಿಂದ ಶ್ರೀಲೀಲಾ ಹೊರಕ್ಕೆ? ಪವರ್ ಸ್ಟಾರ್ ಜೊತೆ ನಟಿಸೋ ಛಾನ್ಸ್?
'ಕಿಸ್' ಸಿನಿಮಾದಲ್ಲಿ ಮಿಂಚಿದ್ದ ಕನ್ನಡದ ಚೆಲುವೆ ಈಗ ಟಾಲಿವುಡ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ತೆಲುಗಿನ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಕ್ರೇಜ್‌ಗೆ ತಕ್ಕಂತೆ ಬೆಡಗಿ ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
'ಪೆಳ್ಳಿಸಂದD' ಸಿನಿಮಾ ಮೂಲಕ ನಟಿ ಶ್ರೀಲೀಲಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಧಮಾಕಾ' ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ಕಿಸ್ ಬೆಡಗಿ ಮಿಂಚಿದ್ದು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇಂತಹ ಹೊತ್ತಲ್ಲೇ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ನಟಿಸುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ದೊಡ್ಡ ದೊಡ್ಡ ಅವಕಾಶಗಳು ಬರ್ತಿದ್ದಂತೆ ಶ್ರೀಲೀಲಾ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ.
'ವಾಲ್ತೇರು
ವೀರಯ್ಯ'
ಪವರ್‌ಫುಲ್
ಟ್ರೈಲರ್;
ಚಿರಂಜೀವಿ,
ರವಿತೇಜಾ
ಖದರ್,
ಕಿಕ್
ಕೊಡ್ತಿದೆ
ಡೈಲಾಗ್ಸ್,
ಆಕ್ಷನ್
ಸೀನ್ಸ್
ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸೋ ಅವಕಾಶಗಳು ಅರದಿ ಬರುತ್ತಿರುವ ಸಮಯದಲ್ಲೇ ಶ್ರೀಲೀಲಾ ತಪ್ಪು ಮಾಡುತ್ತಿದ್ದಾರೆ. ತಮ್ಮ ಕೈಯ್ಯಾರ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಮಹೇಶ್ ಬಾಬು ಸಿನಿಮಾದಿಂದಲೂ ಹೊರಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

SSMB28 ಚಿತ್ರದಿಂದ ಶ್ರೀಲೀಲಾ ಹೊರಕ್ಕೆ?
ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಹ್ಯಾಟ್ರಿಕ್ ಸಿನಿಮಾ ಶುರುವಾಗಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಶ್ರೀಲೀಲಾ ಅವರನ್ನು ಕೇಳಲಾಗಿದೆಯಂತೆ. ಆದರೆ ಡೇಟ್ಸ್ ಇಲ್ಲದ ಕಾರಣ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ಏಕಾಏಕಿ ಸಂಭಾವನೆಯನ್ನು ಶ್ರೀಲೀಲಾ ಹೆಚ್ಚಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಸಂಭಾವನೆ ಜೊತೆಗೆ ಒಂದಷ್ಟು ಕಂಡೀಷನ್‌ಗಳನ್ನು ಹಾಕಿದ್ದಾರಂತೆ. ಇದು ಚಿತ್ರತಂಡಕ್ಕೂ ಶಾಕ್ ತಂದಿದೆ ಎನ್ನುವ ಗುಸುಗುಸು ಫಿಲ್ಮ್ ನಗರ್‌ನಲ್ಲಿ ಜೋರಾಗಿದೆ.

ಮತ್ತೊಂದು ಬಂಪರ್ ಆಫರ್?
ಮಹೇಶ್ ಬಾಬು ಸಿನಿಮಾದಿಂದ ಶ್ರೀಲೀಲಾ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ನಡುವೆಯೇ ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಮತ್ತೊಂದು ನ್ಯೂಸ್ ವೈರಲ್ ಆಗಿದೆ. 'ಸಾಹೋ' ಸಿನಿಮಾ ಖ್ಯಾತಿಯ ಸುಜಿತ್ ನಿರ್ದೇಶನದಲ್ಲಿ ಇತ್ತೀಚೆಗೆ ಪವನ್ ಕಲ್ಯಾಣ್ ಹೊಸ ಸಿನಿಮಾ ಘೋಷಿಸಿದ್ದರು. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿ ಪವರ್ ಸ್ಟಾರ್ ಜೊತೆ ಶ್ರೀಲೀಲಾ ನಟಿಸ್ತಾರೆ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ಕಿಸ್ ಬೆಡಗಿ ನಟಿಸಿದ್ರೆ ಖಂಡಿತ ಆಕೆಯ ಕರಿಯರ್ ಮತ್ತೊಂದು ಹಂತಕ್ಕೆ ಹೋಗಲಿದೆ.

ಸಾಲು ಸಾಲು ಚಿತ್ರಗಳಲ್ಲಿ ಶ್ರೀಲೀಲಾ
'ಧಮಾಕ' ನಂತರ 'ಅನಗನಗ ಒಕ ರಾಜು' ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರದಲ್ಲೂ ಮಿಂಚಿದ್ದಾರೆ. ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಬೋಯಪಾಟಿ ಶ್ರೀನಿ ನಿರ್ದೇಶನದಲ್ಲಿ ರಾಮ್ ಪೋತಿನೇನಿ ನಟನೆಯ ಚಿತ್ರದಲ್ಲೂ ನಾಯಕಿಯಾಗಿ ನಟಿಸ್ತಿದ್ದಾರೆ. ಸದ್ಯಕ್ಕೆ ಈ ಬೆಡಗಿ ಸ್ಯಾಂಡಲ್‌ವುಡ್‌ಗೆ ಮರಳುವಂತೆ ಕಾಣುತ್ತಿಲ್ಲ.

1 ಕೋಟಿ ಸಂಭಾವನೆ ಏರಿಕೆ?
ಟಾಲಿವುಡ್‌ನಲ್ಲೀಗ ಶ್ರೀಲೀಲಾ ಕ್ರೇಜ್ ಜೋರಾಗಿದೆ. ಯುವ ನಟರಿಂದ ಸೂಪರ್ ಸ್ಟಾರ್‌ಗಳವರೆಗೆ ನಾಯಕಿಯಾಗಿ ಕನ್ನಡದ ಚೆಲುವೆ ಬೇಕು ಎನ್ನುವಂತಾಗಿದೆ. ಅದಕ್ಕೆ ತಕ್ಕಂತೆ ಶ್ರೀಲೀಲಾ ಸಂಭಾವನೆ ಹೆಚ್ಚಿಸಿದ್ದಾರಂತೆ. ಚಿತ್ರವೊಂದಕ್ಕೆ 60 ಲಕ್ಷ ಚಾರ್ಜ್ ಮಾಡುತ್ತಿದ್ದ ಚೆಲುವೆ ಈಗ ಏಕಾಏಕಿ 1 ಕೋಟಿ ಕೇಳಲು ಶುರು ಮಾಡಿದ್ದಾರಂತೆ. ಫಿಲ್ಮ್ ನಗರ್‌ನಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ.