For Quick Alerts
  ALLOW NOTIFICATIONS  
  For Daily Alerts

  ರೋರಿಂಗ್ ಸ್ಟಾರ್ 'ರಥಾವರ' ತಮಿಳಿಗೆ ರಿಮೇಕ್ ಆಗುತ್ತಾ?

  By Suneetha
  |

  'ಉಗ್ರಂ' ನಟ ಶ್ರೀಮುರಳಿ ಅವರು 'ರಥಾವರ' ಭರ್ಜರಿ ಯಶಸ್ಸು ಕಂಡಿದೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಥಾವರ' ಯಶಸ್ಸಿನ ಹಾದಿಯಲ್ಲಿರುವಾಗಲೇ ಚಿತ್ರದ ತಮಿಳು ಭಾಷೆಗೆ ರಿಮೇಕ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

  ಹೌದು ಶ್ರೀಮುರಳಿ ಅವರಿಗೆ ಈ ವರ್ಷ ಮತ್ತೊಂದು ಬ್ರೇಕ್ ಕೊಟ್ಟ 'ರಥಾವರ' ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದ್ದು, ತಮಿಳಿನಲ್ಲಿ ನಟ ವಿಶಾಲ್ ಅವರು ನಟಿಸಲಿದ್ದಾರಂತೆ.[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

  ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಹೇಳುವಂತೆ ಹಿಟ್ ಸಿನಿಮಾ 'ರಥಾವರ' ತಮಿಳಿಗೆ ರಿಮೇಕ್ ಆಗುತ್ತಿದ್ದ, ತಮಿಳಿನಲ್ಲಿ ನಟ ವಿಶಾಲ್ ಅವರು ಮಾಡಲಿದ್ದಾರೆ. ಈಗಾಗಲೇ ನಟ ವಿಶಾಲ್ ತಂದೆ ಜಿ.ಕೆ ರೆಡ್ಡಿ ಅವರು 'ರಥಾವರ' ಚಿತ್ರವನ್ನು ವೀಕ್ಷಿಸಿ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದಿದ್ದಾರೆ.

  ನಟ ವಿಶಾಲ್ ಗೂ ಚಿತ್ರದ ಕಥೆ ಬಗ್ಗೆ ವಿವರಿಸಿದ್ದು, ಅವರು ಸಹ ಚಿತ್ರದಲ್ಲಿ ನಟಿಸಲು ತೀರ್ಮಾನಿಸಿದ್ದಾರಂತೆ. ಅಂದಹಾಗೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರಿಗೆ ತಮಿಳಿನಲ್ಲೂ ನಿರ್ದೇಶಿಸಲು ಆಫರ್ ಬಂದಿದ್ದು, ಅದನ್ನು ಒಪ್ಪುವುದೋ ಬಿಡುವುದೋ ಎಂಬ ಜಿಜ್ಞಾಸೆಯಲ್ಲಿ ಇದ್ದಾರೆ ನಿರ್ದೇಶಕರು.[ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?]

  ಒಟ್ನಲ್ಲಿ 'ಉಗ್ರಂ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಶ್ರೀಮುರಳಿ ಅವರಿಗೆ ಬ್ರೇಕ್ ಕೊಟ್ಟ ಸ್ವಮೇಕ್ ಸಿನಿಮಾ 'ರಥಾವರ' ಪಕ್ಕದ ರಾಜ್ಯದಲ್ಲೂ ಸೌಂಡ್ ಮಾಡುತ್ತೆ ಅಂದ್ರೆ ಕನ್ನಡದವರಾದ ನಮಗೆ ಹೆಮ್ಮೆಯ ವಿಷಯ ಅಲ್ಲವೇ?.

  English summary
  Kannada Actor Srimurali and Rachita Ram Starrer Kannada Movie 'Rathaavara' will be remake in Tamil. The movie is directed by Chandrashekar Bandiyappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X