For Quick Alerts
  ALLOW NOTIFICATIONS  
  For Daily Alerts

  ಅಂತಿಮ ಕ್ಷಣದಲ್ಲಿ 'ಕೃಷ್ಣ'ನ ಪಾತ್ರಕ್ಕೆ ಮಹತ್ವದ ಬದಲಾವಣೆ.!

  By Bharath Kumar
  |
  ರವಿಮಾಮನಿಗೆ ಧ್ವನಿ ಕೊಡೋಕೆ ಮತ್ತೆ ವಾಪಸ್ ಬಂದ್ರು ಶ್ರೀನಿವಾಸ್..! |Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಕುರುಕ್ಷೇತ್ರ' ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ.

  ಈ ಮಧ್ಯೆ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಚಿತ್ರತಂಡ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡಿದೆ. ಎಲ್ಲರಿಗೂ ಗೊತ್ತಿರುವಾಗೆ, 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸಿದ್ದಾರೆ.

  ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ನಟಿಸಿರುವ ರವಿಚಂದ್ರನ್ ಸಾಕಷ್ಟು ತಯಾರಿ ನಡೆಸಿ ಅಭಿನಯಿಸಿದ್ದಾರೆ. ಇದೀಗ, ಕೃಷ್ಣನ ಪಾತ್ರಕ್ಕೆ ಮೇಜರ್ ಸರ್ಜರಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಏನದು.? ಮುಂದೆ ಓದಿ....

  ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ವಾಯ್ಸ್ ಇಲ್ಲ

  ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ವಾಯ್ಸ್ ಇಲ್ಲ

  ಕೃಷ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರವಿಚಂದ್ರನ್ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಅಂದ್ರೆ, ಬೇರೊಬ್ಬ ಕಲಾವಿದರಿಂದ ಈ ಪಾತ್ರಕ್ಕೆ ಕಂಠದಾನ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ನಾಟಕದ ಶೈಲಿಯ ಡೈಲಾಗ್‌ಗಳಿದ್ದು ರವಿಚಂದ್ರನ್ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಡಬ್ಬಿಂಗ್ ಇನ್ನೊಬ್ಬ ಕಲಾವಿದರನ್ನ ಕರೆತರುವ ಯೋಜನೆಯಲ್ಲಿದೆ.

  'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

  ಮತ್ತೆ ಬರಲಿದ್ದಾರೆ ಹಳೇ ರವಿಚಂದ್ರನ್

  ಮತ್ತೆ ಬರಲಿದ್ದಾರೆ ಹಳೇ ರವಿಚಂದ್ರನ್

  ಮೂಲಗಳ ಪ್ರಕಾರ ಹಳೆ ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಕಂಠದಾನ ಮಾಡುತ್ತಿದ್ದ ಹಿರಿಯ ನಟ ಶ್ರೀನಿವಾಸ ಪ್ರಭು ಅವರಿಂದ ಕೃಷ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

  ಕ್ರೇಜಿಸ್ಟಾರ್ ಗೆ ದನಿಯಾಗಿದ್ದ ನಟ

  ಕ್ರೇಜಿಸ್ಟಾರ್ ಗೆ ದನಿಯಾಗಿದ್ದ ನಟ

  ಅಂದ್ಹಾಗೆ, ರವಿಚಂದ್ರನ್ ಅವರ ಹಳೇ ಸಿನಿಮಾಗಳಿಗೆ ಕ್ರೇಜಿಸ್ಟಾರ್ ಡಬ್ ಮಾಡುತ್ತಿರಲಿಲ್ಲ. ಅವರು ಬದಲು ಶ್ರೀನಿವಾಸ ಪ್ರಭು ಅವರೇ ವಾಯ್ಸ್ ನೀಡುತ್ತಿದ್ದರು. ಹಾಗಾಗಿ, ರವಿಚಂದ್ರನ್ ಅವರ ಹೇಳೆಯ ವಾಯ್ಸ್ ಗೂ ನಿಜ ಜೀವನದಲ್ಲಿ ಮಾತನಾಡುವ ಧ್ವನಿಗೂ ಬಹಳಷ್ಟು ವ್ಯತ್ಯಾಸವಿದೆ. ಇದು ಅನೇಕ ಅಭಿಮಾನಿಗಳಿಗೆ ಗೊತ್ತಿಲ್ಲದೆ ಇರಬಹುದು.

  'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?

  ಕೃಷ್ಣನನ್ನ ಬಿಟ್ಟು ಎಲ್ಲರ ಕೆಲಸವೂ ಮುಗಿದಿದೆ

  ಕೃಷ್ಣನನ್ನ ಬಿಟ್ಟು ಎಲ್ಲರ ಕೆಲಸವೂ ಮುಗಿದಿದೆ

  ಇತ್ತೀಚಿಗಷ್ಟೆ ನಟ ದರ್ಶನ್ ದುರ್ಯೋಧನ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದರು. ಸದ್ಯದ ಮಾಹಿತಿ ಪ್ರಕಾರ 'ಕುರುಕ್ಷೇತ್ರ' ಚಿತ್ರದ ಬಹುತೇಕ ಎಲ್ಲರ ಡಬ್ಬಿಂಗ್ ಕೆಲಸವೂ ಮುಗಿದಿದೆ. ಆದ್ರೆ, ರವಿಚಂದ್ರನ್ ಅವರ ಕೃಷ್ಣನ ಪಾತ್ರ ಮಾತ್ರ ಬಾಕಿ ಉಳಿದಿದೆಯಂತೆ. ಇದೀಗ, ಅದನ್ನ ಮುಗಿಸುವ ಸಲುವಾಗಿ ಸಿದ್ಧತೆ ನಡೆಸಿದ್ದಾರೆ.

  'ಕುರುಕ್ಷೇತ್ರ'ದ ಬಗ್ಗೆ ಟ್ವೀಟ್ ಮಾಡಿ ಸುದ್ದಿ ಮುಟ್ಟಿಸಿದ ದರ್ಶನ್'ಕುರುಕ್ಷೇತ್ರ'ದ ಬಗ್ಗೆ ಟ್ವೀಟ್ ಮಾಡಿ ಸುದ್ದಿ ಮುಟ್ಟಿಸಿದ ದರ್ಶನ್

  ಸದ್ಯದಲ್ಲೇ ಆಡಿಯೋ ರಿಲೀಸ್

  ಸದ್ಯದಲ್ಲೇ ಆಡಿಯೋ ರಿಲೀಸ್

  ಮುನಿರತ್ನ ನಿರ್ಮಾಣ ಮಾಡಿರುವ 'ಕುರುಕ್ಷೇತ್ರ' ಚಿತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ. ದರ್ಶನ್, ಅರ್ಜುನ ಸರ್ಜಾ, ಅಂಬರೀಶ್, ರವಿಚಂದ್ರನ್, ರವಿಶಂಕರ್, ಸ್ನೇಹಾ, ಮೇಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.

  English summary
  Sources say that Srinivas Prabhu may return to dub for Ravichandran for Kurukshetra. Till the eventful Ramachari in 1991, actor Srinivas Prabhu was the voice for Ravichandran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X