twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚ ಸುದೀಪ್-ರಚಿತಾ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವ ಸುದ್ದಿ, ನಿಜವೇ?

    |

    'ರನ್ನ' ಸಿನಿಮಾ ಬಳಿಕ ಕಿಚ್ಚ ಸುದೀಪ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸಲೇ ಇಲ್ಲ. ಮುಕುಂದ ಮುರಾರಿ ಹಾಗೂ ದಿ ವಿಲನ್ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದು ಅಷ್ಟೆ. ತೆರೆಮೇಲೆ ಕಿಚ್ಚನ ಜೊತೆ ಮತ್ತೆ ರಚ್ಚುನಾ ನಾಯಕಿಯಾಗಿ ನೋಡಬಹುದಾ ಎಂಬ ಕುತೂಹಲ ಹಾಗೇ ಉಳಿದುಕೊಂಡಿದೆ.

    ಆದ್ರೀಗ, ಸುದೀಪ್ ಹಾಗು ರಚಿತಾ ಕುರಿತು ಗಾಂಧಿ ನಗರದಲ್ಲಿ ಬಿಸಿಬಿಸಿ ಸುದ್ದಿಯೊಂದು ಹರಿದಾಡುತ್ತಿದೆ. ಇದು ಬರಿ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಅದರಿಂದಾಚೆಯೂ ಸದ್ದು ಮಾಡ್ತಿದೆ. ಈ ಸುದ್ದಿ ನಿಜವೇ ಆದ್ರೆ ಕನ್ನಡಿಗರ ಖುಷಿಗೆ ಪಾರವೇ ಇರಲ್ಲ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಗುವವರೆಗೂ ಇದು ಬರಿ ಸುದ್ದಿಯಾಗಿಯೇ ಇರಲಿದೆ. ಅಷ್ಟಕ್ಕೂ, ಏನದು? ಮುಂದೆ ಓದಿ....

    ಆರ್‌ಸಿಬಿ ರಾಯಭಾರಿಯಾಗಿ ಕಿಚ್ಚ-ರಚ್ಚು!

    ಆರ್‌ಸಿಬಿ ರಾಯಭಾರಿಯಾಗಿ ಕಿಚ್ಚ-ರಚ್ಚು!

    ಲಾಕ್‌ಡೌನ್‌ನಿಂದ ನಿಗದಿತ ದಿನಾಂಕಕ್ಕೆ ಐಪಿಎಲ್ ನಡೆಯಲಿಲ್ಲ. ಭಾರತದಿಂದ ದುಬೈಗೆ ಐಪಿಎಲ್ ಶಿಫ್ಟ್ ಆಗಿದ್ದು, ಸೆಪ್ಟೆಂಬರ್‌ನಲ್ಲಿ ಪಂದ್ಯಾವಳಿ ಆರಂಭವಾಗಲಿದೆ. ಈ ಸಲ ಆರ್‌ಸಿಬಿ ತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಚಿತಾ ರಾಮ್ ರಾಯಭಾರಿಗಳಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ಸುದ್ದಿಯನ್ನು ಕೇಳಿ ಆರ್‌ಸಿಬಿ ಫ್ಯಾನ್ಸ್ ಸಹ ಥ್ರಿಲ್ ಆಗಿದ್ದಾರೆ.

    ಮೂರು ನಾಯಕರು ಬೇಡವೆಂದಿದ್ದ 'ಹುಚ್ಚ' ಸಿನಿಮಾ ಸುದೀಪ್ ಜೀವನ ಬದಲಾಯಿಸಿತು!ಮೂರು ನಾಯಕರು ಬೇಡವೆಂದಿದ್ದ 'ಹುಚ್ಚ' ಸಿನಿಮಾ ಸುದೀಪ್ ಜೀವನ ಬದಲಾಯಿಸಿತು!

    ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ

    ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ

    ಆರ್‌ಸಿಬಿ ತಂಡಕ್ಕೆ ಈ ವರ್ಷ ಯಾರು ರಾಯಭಾರಿಗಳಾಗ್ತಾರೆ ಎನ್ನುವುದರ ಬಗ್ಗೆ ಸದ್ಯದವರೆಗೂ ಸ್ಪಷ್ಟನೆ ಇಲ್ಲ. ಸುದೀಪ್ ಮತ್ತು ರಚಿತಾ ರಾಮ್ ಹೆಸರು ಕೇಳಿ ಬರ್ತಿದೆ ಅಂದ್ರೆ ಈ ವಿಚಾರವನ್ನು ಅಲ್ಲೆಗೆಳೆಯುವಂತೂ ಇಲ್ಲ. ಏಕಂದ್ರೆ, ಸುದೀಪ್ ಅಪ್ಪಟ ಕ್ರಿಕೆಟ್ ಪ್ರೇಮಿ. ಇಂತಹ ಅವಕಾಶ ಕಿಚ್ಚನಿಗೆ ಬಂದರೆ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ರಚ್ಚು ಸಹ ಇಂತಹ ಆಫರ್ ದೂರ ತಳ್ಳುವುದು ಅನುಮಾನ. ಆದರೆ, ಸದ್ಯಕ್ಕೆ ಇದು ಖಚಿತವಾಗಿಲ್ಲ. ಕೇವಲ ವಂದತಿ ಅಷ್ಟೇ ಎನ್ನಲಾಗಿದೆ.

    ಈ ಹಿಂದೆ ಯಾರೆಲ್ಲ ರಾಯಭಾರಿ ಆಗಿದ್ದರು!

    ಈ ಹಿಂದೆ ಯಾರೆಲ್ಲ ರಾಯಭಾರಿ ಆಗಿದ್ದರು!

    ಅಂದ್ಹಾಗೆ, ಈ ಹಿಂದೆ ಆರ್‌ಸಿಬಿ ತಂಡಕ್ಕೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಗಳು ರಾಯಭಾರಿಗಳಾಗಿ ಆಯ್ಕೆಯಾಗಿದ್ದರು. 2008ರ ಮೊದಲನೇ ಆವೃತ್ತಿಯಲ್ಲಿ ಕತ್ರಿನಾ ಕೈಫ್ ಆರ್‌ಸಿಬಿ ಪರ ರಾಯಭಾರಿಯಾಗಿ ಆಯ್ಕೆಯಾಗಿದ್ದರು. ನಂತರ ಸಿನಿಮಾ ಕಾರಣದಿಂದ ಹಿಂದಕ್ಕೆ ಸರಿದರು. ತದ ನಂತರ ದೀಪಿಕಾ ಪಡುಕೋಣೆ, ನಟಿ ರಮ್ಯಾ, ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ತಂಡಕ್ಕೆ ಜೋಶ್ ತುಂಬಿದ್ದರು.

    RCB ಆಟಗಾರರನ್ನು ಬೈಯಬೇಡಿ ಅಂದ್ರು ಭಟ್ರು! ಯಾಕೆ ಗೊತ್ತೆ?RCB ಆಟಗಾರರನ್ನು ಬೈಯಬೇಡಿ ಅಂದ್ರು ಭಟ್ರು! ಯಾಕೆ ಗೊತ್ತೆ?

    ಸುದೀಪ್ ಮತ್ತು ಕ್ರಿಕೆಟ್

    ಸುದೀಪ್ ಮತ್ತು ಕ್ರಿಕೆಟ್

    ಕಿಚ್ಚ ಸುದೀಪ್ ಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ಒಂದು ಹಂತದಲ್ಲಿ ವೃತ್ತಿಪರ ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಸಹ ಹೊಂದಿದ್ದರು. ಆದರೆ, ಸಿನಿ ಬದುಕು ಆಯ್ಕೆ ಮಾಡಿಕೊಂಡರು. ಹಾಗಂತ ಕ್ರಿಕೆಟ್ ಬಿಡಲಿಲ್ಲ. ಸಮಯ ಸಿಕ್ಕಾಗ ಎಲ್ಲ ಕ್ರಿಕೆಟ್ ಆಡುತ್ತಿದ್ದರು. ಡಾ ರಾಜ್ ಕಪ್, ಸಿಸಿಎಲ್, ಚಂದನವನ ಕಪ್ ಹಾಗೂ ಇನ್ನಿತರ ಟೂರ್ನಿಗಳಲ್ಲಿ ಆಡಿದ್ದಾರೆ. ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ಸಹ ಸುದೀಪ್ ಕ್ರಿಕೆಟ್ ಆಡಿದ್ದಾರೆ.

    English summary
    There news is going viral on social media that kiccha sudeep and Rachita Ram are brand ambassador for RCB.? its true?.
    Friday, August 14, 2020, 12:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X