»   » ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?

ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ಕೋಟಿಗೊಬ್ಬ 2' ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾದು-ಕಾದು ಸುಸ್ತಾದ್ರು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಹಾಕೋ ಸಮಯ ಹತ್ತಿರವಾಗುತ್ತಿದೆ.

ಬಹುನಿರೀಕ್ಷಿತ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡದವರು ಗೊತ್ತು ಮಾಡಿದ್ದು, ಆಗಸ್ಟ್ 12 ರಂದು ಈ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 12 ರಂದು ವರಮಹಾಲಕ್ಷ್ಮಿ ಹಬ್ಬವಿದ್ದು, ಅದೇ ದಿನದಂದು ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಸೂರಪ್ಪ ಬಾಬು ತೀರ್ಮಾನ ಮಾಡಿದ್ದಾರಂತೆ.[ಧ್ವನಿಸುರುಳಿ ವಿಮರ್ಶೆ: ಸುದೀಪ್ ಅಭಿನಯದ ಕೋಟಿಗೊಬ್ಬ 2]


Sudeep starrer 'Kotigobba 2' all set to releasing on August 12

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಜುಲೈ 22 ರಂದು ಇಡೀ ವಿಶ್ವದಾದ್ಯಂತ ತೆರೆ ಕಾಣುತ್ತಿರೋದು ಪಕ್ಕಾ ಆಗಿರುವುದರಿಂದ, ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.['ಕೋಟಿಗೊಬ್ಬ 2'ನಲ್ಲಿ ಎಷ್ಟು ಹಾಡುಗಳಿವೆ, ಇಲ್ಲಿದೆ ಡೀಟೈಲ್ಸ್]


Sudeep starrer 'Kotigobba 2' all set to releasing on August 12

ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವುದರಿಂದ, ಚೆನ್ನೈನಲ್ಲೂ ಸುದೀಪ್ ಅವರ 'ಮುಡಿಂಜ ಇವನ ಪುಡಿ' ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಳ್ಳಲಿದೆ.


'ಲಿಂಗಾ' ಚಿತ್ರದ ಖ್ಯಾತಿಯ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು 'ಕೋಟಿಗೊಬ್ಬ 2' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಸುದೀಪ್ ಅವರ ಕೆರಿಯರ್ ನಲ್ಲಿ ಈ ಸಿನಿಮಾ ದೊಡ್ಡ ರೆಕಾರ್ಡ್ ಸೃಷ್ಟಿ ಮಾಡಲಿದೆ ಎಂಬ ಮಾತು ಗಾಂಧಿನಗರದಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿದೆ.[ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ]


Sudeep starrer 'Kotigobba 2' all set to releasing on August 12

ಇದೇ ಮೊದಲ ಬಾರಿಗೆ ಸುದೀಪ್ ಅವರ ಜೊತೆ ನಿತ್ಯಾ ಮೆನನ್ ಡ್ಯುಯೆಟ್ ಹಾಡಿದ್ದು, ಇನ್ನುಳಿದಂತೆ ರವಿಶಂಕರ್, ಪ್ರಕಾಶ್ ರೈ, ಚಿಕ್ಕಣ್ಣ, ಸಾಧು ಕೋಕಿಲಾ, ಶರತ್ ಲೋಹಿತಾಶ್ವ ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚಿದ್ದಾರೆ.

English summary
Kannada Movie 'Kotigobba 2' all set to releasing on August 12th. Kannada Actor Sudeep, Actress Nithya menen in the lead role. The movie is directed by KS Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada