»   » 'ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿದ್ರೆ ಕಣ್ಣು-ಬಾಯಿ ಬಿಡ್ತೀರಾ.!

'ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿದ್ರೆ ಕಣ್ಣು-ಬಾಯಿ ಬಿಡ್ತೀರಾ.!

By: ಹರಾ
Subscribe to Filmibeat Kannada

ಸೂಪರ್ ಸ್ಪೆಷಾಲಿಟಿಗಳಿಂದ ಸದಾ ಸುದ್ದಿಯಲ್ಲಿ ಇರುವ ಕಿಚ್ಚ ಸುದೀಪ್ ಅಭಿನಯದ ಕನ್ನಡದ ಸಿನಿಮಾ 'ಕೋಟಿಗೊಬ್ಬ-2'.

ಕಿಚ್ಚ ಸುದೀಪ್ ಜೊತೆ ನಿತ್ಯ ಮೆನನ್ ಮೊಟ್ಟ ಮೊದಲ ಬಾರಿಗೆ ಜೋಡಿಯಾಗಿರುವುದು, ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿರುವುದು, ಕೋಟಿ ಕೋಟಿ ವೆಚ್ಚದಲ್ಲಿ ಸೂರಪ್ಪ ಬಾಬು 'ಕೋಟಿಗೊಬ್ಬ-2' ರೆಡಿ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೇ. [ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು]

ಆದ್ರೆ, 'ಕೋಟಿಗೊಬ್ಬ-2' ಬಗ್ಗೆ ನಿಮಗ್ಯಾರಿಗೂ ಗೊತ್ತಿರದ ಮತ್ತೊಂದು ವಿಚಾರ ಇದೆ. ಅದನ್ನ ಕೇಳಿದ್ರೆ, ನಿಮಗೆ ಶಾಕ್ ಆಗುತ್ತೋ, ಸರ್ ಪ್ರೈಸ್ ಆಗುತ್ತೋ...ನಿಮ್ಮ ನಿಮ್ಮ ಮೆಂಟಾಲಿಟಿಗೆ ಬಿಟ್ಟಿದ್ದು.

ಯಾವುದಕ್ಕೂ ಡೀಟೇಲ್ ಆಗಿ ತಿಳಿದುಕೊಳ್ಳಬೇಕು ಅಂದ್ರೆ ಕೆಳಗಿರುವ ಸ್ಲೈಡ್ ಗಳನ್ನು ಒಮ್ಮೆ ಕ್ಲಿಕ್ಕಿಸಿ ಓದಿರಿ.....

ಅಂತರ್ಜಾಲದಲ್ಲಿ ಸಿಕ್ಕಿದೆ, 'ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್.!

'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ 'ವಿಶೇಷ' ಮಾಹಿತಿ ಸಿಕ್ಕಿದೆ. ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

'ಕೋಟಿಗೊಬ್ಬ-2' ಚಿತ್ರದಲ್ಲಿ ಸನ್ನಿ ಲಿಯೋನ್.?

ಸದ್ಯ 'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಬ್ರೇಕ್ ಆಗಿರುವ ನ್ಯೂಸ್ ಅಂದ್ರೆ ಇದೇ.! 'ಕೋಟಿಗೊಬ್ಬ-2' ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ 'ನೀಲಿ ಚಿತ್ರಗಳ ರಾಣಿ' ಸನ್ನಿ ಲಿಯೋನ್ ಮಿಂಚ್ತಾರಂತೆ..!

ಕಣ್ಣು-ಬಾಯಿ ಬಿಡ್ತಿದ್ದೀರಾ.?

ಸನ್ನಿ ಲಿಯೋನ್ ಅಂದ ತಕ್ಷಣ ಪಡ್ಡೆಗಳ ಹೃದಯದಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಹೀಗಿರುವಾಗ, ಸನ್ನಿ ಲಿಯೋನ್ ಕನ್ನಡ ಚಿತ್ರದಲ್ಲಿ ಮಿಂಚ್ತಾರೆ ಅಂದ್ರೆ, ಆಕೆಯ ಸೊಬಗು, ವನಪು, ವಯ್ಯಾರವನ್ನ ಕಣ್ತುಂಬಿಕೊಳ್ಳುವುದಕ್ಕೆ ಯಾರು ತಾನೆ ಹಿಂದೇಟು ಹಾಕ್ತಾರೆ ಹೇಳಿ.? 'ಕೋಟಿಗೊಬ್ಬ-2' ಚಿತ್ರದಲ್ಲಿ ಅಂತಹ ಚಾನ್ಸ್ ಸಿಗುತ್ತೆ ಅಂದ್ರೆ ಬಿಡೋರು ಯಾರು...?

ಬಾಗಿಲು ತೆಗೆದು ಬಂದಿದ್ದಾರಾ ಸನ್ನಿ.?

'ಬಾಗಿಲು ತೆಗೆಯೇ ಸೇಸಮ್ಮ...' ಹಾಡಿನಲ್ಲಿ ಬಳುಕುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಾಕೆ ಸನ್ನಿ ಲಿಯೋನ್. ನಂತರ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದ ಐಟಂ ಸಾಂಗ್ ನಲ್ಲೂ ಸನ್ನಿ ಹೆಜ್ಜೆ ಹಾಕಿದ್ದರು. ಈಗ 'ಕೋಟಿಗೊಬ್ಬ-2' ಚಿತ್ರಕ್ಕಾಗಿ ಸನ್ನಿ ಸಿಲಿಕಾನ್ ಸಿಟಿ ಕಡೆ ಮುಖ ಮಾಡಿದ್ದಾರಾ.?

ಇನ್ನೊಂದು ಸರ್ ಪ್ರೈಸ್ ಇದೇ ಕೇಳಿ..!

ಬಾಲಿವುಡ್ ನ ಮತ್ತೋರ್ವ ಬಳುಕುವ ಬಳ್ಳಿ, ಶರ್ಲಿನ್ ಛೋಪ್ರ ಕೂಡ 'ಕೋಟಿಗೊಬ್ಬ-2' ಚಿತ್ರದ ವಿಶೇಷ ಪಾತ್ರಧಾರಿಯಂತೆ.!

ಡಬ್ಕಿ ಡಬಲ್ ಧಮಾಕಾ.!

ಒಂದ್ಕಡೆ ಸನ್ನಿ ಲಿಯೋನ್, ಮತ್ತೊಂದು ಕಡೆ 'ಕಾಮಸೂತ್ರ 3D' ಖ್ಯಾತಿಯ ಶರ್ಲಿನ್ ಛೋಪ್ರ...ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದ್ರೆ ಪಡ್ಡೆ ಹೈಕಳಿಗೆ ಇದಕ್ಕಿಂತ ಖುಷಿ ವಿಚಾರ ಮತ್ತೊಂದು ಇದೆಯೇ.?

ಇದು ಕಾಗೆ ಹಾರಿಸುವ ಪ್ರೋಗ್ರಾಂ.?

ಅಂದ್ಹಾಗೆ, ಇದು ಗಾಸಿಪ್ ಸುದ್ದಿನೋ, ಇಲ್ಲ ನಿಜವಾಗಲೂ ಇಬ್ಬರು ನಟಿಸಿದ್ದಾರೋ ಅಂತ ನೀವು ಕಣ್ಣು ಬಾಯಿ ಬಿಡುವ ಮುನ್ನ ಒಮ್ಮೆ ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ವಿಕಿಪೀಡಿಯಾ ಸಾರುತ್ತಿದೆ ನೋಡಿ....

ಅಸಲಿಗೆ, 'ಕೋಟಿಗೊಬ್ಬ-2' ಚಿತ್ರದಲ್ಲಿ ಸನ್ನಿ ಲಿಯೋನ್ ಹಾಗೂ ಶರ್ಲಿನ್ ಛೋಪ್ರ ಪಾತ್ರಧಾರಿಗಳು ಅಂತ ಸಾರುತ್ತಿರುವುದು ವಿಕಿಪೀಡಿಯಾ ವೆಬ್ ತಾಣ.

ತಮಿಳಿನ 'ಮುಡಿಂಜಾ ಇವನ ಪುಡಿ'

'ಕೋಟಿಗೊಬ್ಬ-2' ಸಿನಿಮಾ ತಮಿಳಿನಲ್ಲಿ 'ಮುಡಿಂಜಾ ಇವನ ಪುಡಿ' ಹೆಸರಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಕುತೂಹಲಕ್ಕೆ ಅಂತ 'ಮುಡಿಂಜಾ ಇವನ ಪುಡಿ' ವಿಕಿಪೀಡಿಯಾ ತಾಣವನ್ನು ನೀವು ತೆರೆದರೆ, ತಾರಾಗಣ ಪಟ್ಟಿಯಲ್ಲಿ ಸುದೀಪ್, ನಿತ್ಯಾ ಮೆನನ್, ರವಿಶಂಕರ್ ಜೊತೆ ಸನ್ನಿ ಲಿಯೋನ್ ಹಾಗೂ ಶರ್ಲಿನ್ ಛೋಪ್ರ 'ವಿಶೇಷ ಪಾತ್ರ' ನಿರ್ವಹಿಸುವ ಬಗ್ಗೆ ಉಲ್ಲೇಖವಿದೆ.

ಹಾಗಾದ್ರೆ, ಇಬ್ಬರೂ ನಟಿಸಿದ್ದಾರಾ.?

'ಕೋಟಿಗೊಬ್ಬ-2' ಚಿತ್ರದಲ್ಲಿ ಸನ್ನಿ ಲಿಯೋನ್ ಹಾಗೂ ಶರ್ಲಿನ್ ಛೋಪ್ರ ನಟಿಸಿರುವ ಬಗ್ಗೆ ಇಲ್ಲಿಯವರೆಗೂ ಯಾವುದೇ ಪತ್ರಿಕೆಯಾಗಲಿ, ಮಾಧ್ಯಮಗಳಾಗಲಿ, ಡಿಜಿಟಲ್ ವೆಬ್ ತಾಣಗಳಾಗಲಿ ವರದಿ ಮಾಡಿಲ್ಲ.

ಚಿತ್ರತಂಡ ಕೂಡ ಹೇಳಿಕೊಂಡಿಲ್ಲ.!

ಇನ್ನೂ ಸನ್ನಿ ಲಿಯೋನ್ ಹಾಗೂ ಶರ್ಲಿನ್ ಛೋಪ್ರ ನಟಿಸಿರುವ ಬಗ್ಗೆ 'ಕೋಟಿಗೊಬ್ಬ-2' ಚಿತ್ರತಂಡ ಕೂಡ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ.

ಎಡವಟ್ಟಾಗಿದ್ಯಾ.?

ವಿಕಿಪೀಡಿಯಾದಲ್ಲಿ ಎಡವಟ್ಟು, ಅವಾಂತರಗಳು ಸರ್ವೇ ಸಾಮಾನ್ಯ. ಅಂಬರೀಶ್ ವಿಚಾರವಾಗಿಯೂ ಒಮ್ಮೆ ವಿಕಿಪೀಡಿಯಾ ವಿವಾದವಾಗಿದ್ದು ನಿಮಗೆ ನೆನಪಿರಬಹುದು. ಹೀಗಿರುವಾಗ, ಇದು ಕೂಡ ಬೈ ಮಿಸ್ಟೇಕ್ ಅಂತ ಭಾವಿಸಬಹುದಾ.?

ಯಾವುದಕ್ಕೂ ಚಿತ್ರತಂಡ ಉತ್ತರ ಕೊಟ್ಟರೆ ಒಳಿತು.!

'ಕೋಟಿಗೊಬ್ಬ-2' ಚಿತ್ರದ ತಾರಾಗಣದ ಬಗ್ಗೆ, ಸನ್ನಿ ಲಿಯೋನ್ ಹಾಗೂ ಶರ್ಲಿನ್ ಛೋಪ್ರ ಭಾಗಿಯಾಗಿರುವ (?) ಕುರಿತು ಒಮ್ಮೆ ಚಿತ್ರತಂಡ ಸ್ಪಷ್ಟೀಕರಣ ಕೊಟ್ಟರೆ ಒಳಿತು. ಇಲ್ಲಾಂದ್ರೆ, ಪಾಪ...ಪಡ್ಡೆಗಳ ಮೂಗಿಗೆ ಮಾತ್ರ ತುಪ್ಪ ಸವರಿದಂತೆ ಆಗ್ಬಹುದು.!

English summary
What.? Is Sunny Leone and Sherlyn Chopra doing cameo in Kannada Movie 'Kotigobba-2'? Well, The Tamil version of 'Kotigobba-2', 'Mudinja Ivana Pudi' page of Wikipedia says so.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada