»   » ಐಶ್ವರ್ಯಾ ರೈ ಜೊತೆ ಹೋಲಿಕೆ ಬೇಡ: ಸನ್ನಿ ಲಿಯೋನ್

ಐಶ್ವರ್ಯಾ ರೈ ಜೊತೆ ಹೋಲಿಕೆ ಬೇಡ: ಸನ್ನಿ ಲಿಯೋನ್

Posted By:
Subscribe to Filmibeat Kannada

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅಭಿನಯದ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ "ಡೋಲಿ ತಾರೋ ಡೋಲ್ ಬಾಜೆ" ಹಾಡು ಇದೀಗ ಮತ್ತೆ ಹೊಸ ವರಸೆಯಲ್ಲಿ ಬೆಳ್ಳಿತೆರೆಗೆ ಬರುತ್ತಿದೆ. ಈ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. 'ಏಕ್ ಪಹೇಲಿ ಲೀಲಾ' ಚಿತ್ರದಲ್ಲಿ ಆ ಹಾಡನ್ನು ಬಳಸಿಕೊಳ್ಳಲಾಗಿದೆ.

ಈ ಹಾಡಿನ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆ ಶುರುವಾಗಿದ್ದು ಐಶ್ವರ್ಯಾ ರೈಗೂ ಸನ್ನಿ ಲಿಯೋನ್ ಗೂ ಹೋಲಿಕೆ ಮಾಡಲಾಗುತ್ತಿದೆ. ಇದು ಸನ್ನಿಗೆ ಕಸಿವಿಸಿ ಉಂಟು ಮಾಡುತ್ತಿದೆಯಂತೆ. ಇದೇ ವಿಚಾರವಾಗಿ ಅವರು ಮಾತನಾಡುತ್ತಾ, ಹಳಬರ ಜೊತೆಗೆ ಹೊಸಬರನ್ನು ಹೋಲಿಸುವುದು ಸರಿಯಲ್ಲ ಎಂದಿದ್ದಾರೆ. [ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು]

Sunny Leone Don't like Comparisons With Aishwarya Rai

"ಹೊಸದಾಗಿ ಚಿತ್ರೋದ್ಯಮಕ್ಕೆ ಅಡಿಯಿಟ್ಟವರು ಸ್ಟಾರ್ ಗಳನ್ನು ನೋಡಿ ಗ್ರೇಟ್ ಆಗಿ ಫೀಲ್ ಆಗುತ್ತಾರೆ. ಹೊಸಬರು ಎಷ್ಟೇ ಚೆನ್ನಾಗಿ ಅಭಿನಯಿಸಿದರೂ ಕೆಲವರಿಗೆ ಹಿಡಿಸುವುದಿಲ್ಲ. ಈ ರೀತಿ ಹೋಲಿಕೆ ಮಾಡುವುದು ನನಗೆ ಸರಿಕಾಣಿಸುತ್ತಿಲ್ಲ" ಎನ್ನುತ್ತಾರೆ ಸನ್ನಿ.

ಈ ಹಾಡು ನನ್ನ ಚಿತ್ರದಲ್ಲಿ ಇರುತ್ತದೆ ಎಂದಾಗಲೇ ಕಂಗಾಲಾಗಿದ್ದೆ. ಈ ಹಾಡಿನ ಮೂಲಕ ಐಶ್ವರ್ಯಾ ರೈ ಜೊತೆ ನನ್ನನ್ನು ಹೋಲಿಸಿದ್ದು ಸುತಾರಾಂ ಹಿಡಿಸಲಿಲ್ಲ. ಐಶ್ವರ್ಯಾ ಅವರ ಹಾಡನ್ನು ನೋಡಿದ್ದೇನೆ. ನನ್ನ ಹಾಡನ್ನು ನೋಡಿದವರು ಇನ್ನೂ ಚೆನ್ನಾಗಿದೆ ಎನ್ನುತ್ತಾರೆ ಎಂಬುದು ನನಗೆ ಗೊತ್ತು ಎಂದಿದ್ದಾರೆ.

'ಏಕ್ ಪಹೇಲಿ ಲೀಲಾ' ಚಿತ್ರ ಇದೇ ಏಪ್ರಿಲ್ 10ರಂದು ತೆರೆಗೆ ಬರುತ್ತಿದೆ. ಭೂಷಣ್ ಕುಮಾರ್ ನಿರ್ಮಿಸಿದ ಈ ಚಿತ್ರದಲ್ಲಿ ಅಭಿನಯಿಸಲು ದೊಡ್ಡ ಸ್ಟಾರ್ ಗಳು ಹಿಂದೇಟು ಹಾಕಿದರು. ಚಿತ್ರದಲ್ಲಿ ನೀಲಿ ಚಿತ್ರಗಳ ತಾರೆ ಇದ್ದಾರೆ ಎಂಬ ಕಾರಣಕ್ಕೆ ಅವರೆಲ್ಲ ಹಿಂದೆಸರಿದರು ಎಂದಿದ್ದಾರೆ ನಿರ್ಮಾಪಕರು. (ಏಜೆನ್ಸೀಸ್)

English summary
Actress Sunny Leone says she knows her version of Aishwarya Rai Bachchan’s ‘Dhol Baje’ cannot match up to the original superhit track but she still hates being compared to the actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada