»   » ಸಂಖ್ಯಾಶಾಸ್ತ್ರಕ್ಕೆ ಮರುಳಾದ ಸೂಪರ್ ಸ್ಟಾರ್ ರಜನಿಕಾಂತ್

ಸಂಖ್ಯಾಶಾಸ್ತ್ರಕ್ಕೆ ಮರುಳಾದ ಸೂಪರ್ ಸ್ಟಾರ್ ರಜನಿಕಾಂತ್

Posted By:
Subscribe to Filmibeat Kannada
Super star Rajinikanth Kochadaiiyaan yeilds to superstition numerology
ದಕ್ಷಿಣ ಭಾರತದ ಸೂಪರ್ ಸ್ಟಾರ್, ಕನ್ನಡಿಗ ರಜನಿಕಾಂತ್ ಅವರು ಸಂಖ್ಯಾಶಾಸ್ತ್ರದ ಬಲೆಯಲ್ಲಿ ಸಿಲುಕಿದ್ದಾರೆ. ರಜನಿಕಾಂತ್ ಅವರ ಬಹುನಿರೀಕ್ಷಿತ ಕೊಚಾಡಿಯನ್ ಸಿನಿಮಾ ಡಿಸೆಂಬರ್ 12ರಂದು ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯ ಭಾಗ್ಯ ಕಾಣುವುದು ಖಚಿತವಾಗಿದೆ. ಆದರೆ ಈ ಮಧ್ಯೆ,

superstition ಮೋಡಿಯಲ್ಲಿ super star:
'ಕೊಚಾಡಿಯನ್' ಬಿಡುಗಡೆ ವಿಳಂಬದ ಬಗ್ಗೆ ಆತಂಕಗೊಂಡಿರುವ ರಜನಿಕಾಂತ್, ಭಾರಿ ತಲೆ ಕೆಡಿಸಿಕೊಂಡ ಬಳಿಕ ಮೂಢನಂಬಿಕೆಗೆ ತಲೆಬಾಗಿದ್ದಾರೆ. ಸಂಖ್ಯಾಶಾಸ್ತ್ರಕ್ಕೆ (numerology) ಮೊರೆಹೋಗಿರುವ ರಜನಿಕಾಂತ್ Kochadaiiyaan ಹೆಸರಿನಲ್ಲಿ ಬದಲಾವಣೆ ಮಾಡಿದ್ದಾರೆ.

ಕನ್ನಡಿಗರಿಗೆ ಈ ಹೆಸರನ್ನು ಉಚ್ಚರಿಸುವುದು ಕಷ್ಟವಾಗುತ್ತಿದೆ ಎಂದು ರಜನಿ ಈ ಬದಲಾವಣೆಗೆ ಮುಂದಾಗಿಲ್ಲ. ಬದಲಿಗೆ Kochadaiiyaan ಹೆಸರಿನಲ್ಲಿರುವ ಒಂದು i ಅನ್ನು ತೆಗೆದುಹಾಕಿದ್ದಾರೆ.

ತಾರಾಮಣಿಗಳು ಮತ್ತು ತಾರಾಗತಿಗೆ ಅವಿನಾಭಾವ ನಂಟು ಇಂದು ನಿನ್ನೆಯದಲ್ಲ. ಆದರೆ ಜನರ ದೃಷ್ಟಿಯಲ್ಲಿ ಆರಾಧ್ಯ ದೈವನಾಗಿರುವ ರಜನಿಕಾಂತ್ ಅವರೇ ಹೀಗೆ ಜ್ಯೋತಿಷ್ಯದ ಬೆನ್ನುಹತ್ತಿರುವುದು ಸೋಜಿಗವಾಗಿದೆ. ಸಂಖ್ಯಾಶಾಸ್ತ್ರದ ಈ ಉಚಿತ ಸಲಹೆಯನ್ನು ರಜನಿಗೆ ನೀಡಿದವರು ಯಾರು ಎಂಬುದೂ ಗೌಪ್ಯವಾಗಿದೆ. ಹಾಗಾದರೆ Kochadaiiyaan ಅಲ್ಲಲ್ಲ Kochadaiyaan ಸೂಪರ್ ಡ್ಯೂಪರ್ ಆಗುತ್ತದಾ? ರಜನಿ ಅಭಿಮಾನಿ ದೇವರುಗಳೇ ಹೇಳಬೇಕು! 

ಸಲ್ಮಾನ್ ಖಾನ್ ವಿಷಯದಲ್ಲೂ ಹೀಗೇ ಆಯ್ತು. ಅವರ Dabangg ಚಿತ್ರದ ಹೆಸರಿನಲ್ಲಿ ಹೆಚ್ಚುವರಿಯಾಗಿ ಒಂದು g ಸೇರಿಸಿದ್ದಕ್ಕೆ ಸಲ್ಮಾನ್ ವರಿಗಳೆಲ್ಲಾ ದೂರವಾಗಿ ಚಿತ್ರ ಸೂಪರ್ ಡ್ಯೂಪರ್ ಆಯ್ತು ಎನ್ನುತ್ತಾರೆ ತಮ್ಮ ನಿಖರ ಸಂಖ್ಯಾಶಾಸ್ತ್ರದ ಮೂಲಕ ಬಾಲಿವುಡ್ ಲೋಕದಲ್ಲಿ ಹೆಸರುವಾಸಿಯಾಗಿರುವ ಸಂಜಯ್ ಬಿ ಜುಮ್ಮಾಣಿ. ಸಂಜಯ್ ಬಿ ಜುಮ್ಮಾನಿ ಮತ್ತು ಅವರ ಸೋದರಿ ಶ್ವೇತಾ ಜುಮ್ಮಾನಿ ಸಂಖ್ಯಾಶಾಸ್ತ್ರದಲ್ಲಿ ಖ್ಯಾತಿ ಪಡೆದಿದ್ದು, ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Bigg Boss ಸಿನಿಮಾದ ಕಥೆಯೂ ಇದೇ ಆಗಿದೆ. ಈ ಹೆಸರಿಗೆ ಹೆಚ್ಚುವರಿಯಾಗಿ g ಸೇರಿಸಿದ್ದೇ ಅದರ ಭಾರಿ ಯಶಸ್ಸಿಗೆ ಕಾರಣವಾಯ್ತು ಎಂಬುದು ಸಂಜಯ್ ಅಂಬೋಣ. OMG Oh My God!, Rowdy Rathore, Housefull 2, Azaad ಮುಂತಾದವು ಬ್ಲಾಕ್ ಬಸ್ಟರ್ ಸಿನಿಮಾಗಳಾಗಿ ಪರಿವರ್ತನೆಗೊಂಡಿದ್ದೂ ಸಹ ಇದೇ ಸಂಖ್ಯಾಶಾಸ್ತ್ರದ ಆಧಾರದಲ್ಲಿ ಎಂಬುದು ಅವರ ಅಚಲ ವಿಶ್ವಾಸ.

ಪೂರ್ವ ನಿಗದಿಯಂತೆ Chennai Express ಆಗಸ್ಟ್ 8ರಂದು ರಿಲೀಸ್ ಆಗಬೇಕಿತ್ತು. ಆದರೆ ಸಂಖ್ಯಾಶಾಸ್ತ್ರವನ್ನು ಕೇಳಿದಾಗ 8 ಸರಿಬರುವುದಿಲ್ಲ. ಬದಲಿಗೆ ಆಗಸ್ಟ್ 9ರಂದು ರಿಲೀಸ್ ಮಾಡಿ ಎಂದು ಅಪ್ಪಣೆ ನೀಡಿದ್ದರು. ಅದರಂತೆ ಆಗಸ್ಟ್ 9ರಂದು ರಿಲೀಸ್ ಆಗಿದ್ದೇ ತಡ ಬಾಕ್ಸಾಫೀಸಿನಲ್ಲಿ ಬ್ರೇಕ್ ಇಲ್ಲದ ರೈಲಿನಂತೆ Chennai Express ಓಡಿದೆ. 

English summary
Matinee idol, Super star, Kannadiga to the core Mr. Rajinikanth starer Kochadaiiyaan yeilds to superstition numerology. The extra ‘i’ in 'Kochadaiiyaan' has been removed after a much thought-out strategy.
Please Wait while comments are loading...