»   » ತಮಿಳು ನಟನ ಜೊತೆ 'ಕಿರಾತಕ' ನಟಿ ಓವಿಯಾ ಗುಟ್ಟಾಗಿ ಮದ್ವೆ.!

ತಮಿಳು ನಟನ ಜೊತೆ 'ಕಿರಾತಕ' ನಟಿ ಓವಿಯಾ ಗುಟ್ಟಾಗಿ ಮದ್ವೆ.!

Posted By:
Subscribe to Filmibeat Kannada
ತಮಿಳು ನಟಿ ಓವಿಯಾ ಜೊತೆ ತಮಿಳು ನಟ ಸಿಂಬು ಗುಟ್ಟಾಗಿ ಮದುವೆ | Filmibeat Kannada

ಬಹುಭಾಷಾ ನಟಿ ಓವಿಯಾ, ತಮಿಳು ಸ್ಟಾರ್ ನಟನ ಜೊತೆ ಗುಟ್ಟಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಈಗ ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿದೆ. ಅರೇ, ಈ ಓವಿಯಾ ಯಾರು ಎಂಬ ಕನ್ ಫ್ಯೂಶನ್ ನಿಮ್ಮನ್ನ ಕಾಡುತ್ತಿದ್ದರೇ, ನೀವು ಸ್ವಲ್ಪ ಫ್ಲಾಶ್ ಬ್ಯಾಕ್ ಗೆ ಹೋಗ್ಬೇಕು.

2011 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ 'ಕಿರಾತಕ' ಚಿತ್ರವನ್ನ ನೋಡಿದವರಿಗೆ ಈ ಓವಿಯಾ ನೆನಪಾಗ್ತಾರೆ. ಮಂಡ್ಯ ಹೈದ ಯಶ್ ಗೆ 'ಕಿರಾತಕ' ಚಿತ್ರದಲ್ಲಿ ನಾಯಕಿಯಾಗಿದ್ದ ಹುಡುಗಿಯೇ ಓವಿಯಾ.

ಓವಿಯಾ ಕನ್ನಡದಲ್ಲಿ ಮಾಡಿದ್ದು ಎರಡೇ ಸಿನಿಮಾ. ಆದ್ರೆ, ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡ ಈಕೆ, ತಮಿಳಿನ ಸ್ಟಾರ್ ನಟನನ್ನ ವಿವಾಹವಾಗಿದ್ದಾರೆ ಎನ್ನಲಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಿದ್ರೆ, ಓವಿಯಾ ಮದುವೆ ನಿಜಾನ? ಕಿರಾತಕನ ಹುಡುಗಿಯನ್ನ ಮದುವೆ ಆಗಿರುವ ಆ ಸ್ಟಾರ್ ನಟ ಯಾರು? ಮುಂದೆ ಓದಿ.....

ಸಿಂಬು ಜೊತೆ ಓವಿಯಾ ಮದುವೆ.!

ತಮಿಳಿನ ಖ್ಯಾತ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಜೊತೆ ಕಿರಾತಕನ ನಾಯಕಿ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಸುಳ್ಳು ಫೋಟೋ

ಅಂದ್ಹಾಗೆ, ಈ ಫೋಟೋ ನೋಡಿದ್ರೆ ಯಾರು ಬೇಕಾದ್ರೆ ಇದು ಎಡಿಟಿಂಗ್ ಮಾಡಿರುವ ಫೋಟೋ ಎಂದು ಹೇಳಬಲ್ಲರು. ಹೌದು, ಇದೊಂದು ಸುಳ್ಳು ಫೋಟೋ. ಬೇರೆಯದೊಂದು ಫೋಟೋಗೆ, ಓವಿಯಾ ಮತ್ತು ಸಿಂಬು ಅವರ ತಲೆಯನ್ನ ಅಂಟಿಸಲಾಗಿದೆ.

ಇಬ್ಬರು ನಡುವೆ ಸಂಥಿಂಗ್ ಸಂಥಿಂಗ್?

ಇದಕ್ಕು ಮುಂಚೆ 'ಮರಣ ಮಟ್ಟ' ಎಂಬ ಆಲ್ಬಂ ಸಾಂಗ್ ನಲ್ಲಿ ಓವಿಯಾ ಮತ್ತು ಸಿಂಬು ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಬಳಿಕ ಸಿಂಬು ಅವರ ಟ್ವಿಟ್ಟರ್ ನಲ್ಲಿ ''Ready to marry Oviya. Brave and Bold girl, With God_Blessings'' ಎಂಬ ಸ್ಟೇಟಸ್ ಕಾಣಿಸಿತ್ತು. ಆದ್ರೆ, ಇದು ಸಿಂಬು ಅವರು ಪೋಸ್ಟ್ ಮಾಡಿರಲಿಲ್ಲ. ಇದು ಸುಳ್ಳು ಟ್ವೀಟ್ ಆಗಿತ್ತು. ಮೂಲಗಳ ಪ್ರಕಾರ ಇವರಿಬ್ಬರ ನಡುವೆ ಅಂತಹದೇನು ಇಲ್ಲ.

ನಯನತಾರ ಜೊತೆ ಬ್ರೇಕ್ ಅಪ್

ಇದಕ್ಕು ಮುಂಚೆ ನಟ ಸಿಂಬು, ನಟಿ ನಯನತಾರ ಜೊತೆ ಲವ್ವಲ್ಲಿ ಇದ್ರು. ಆದ್ರೆ, ಅದು ಮುರಿದು ಬಿದ್ದಿತ್ತು. ಬಳಿಕ ಸಿಂಬು ತಮ್ಮ ಸಿನಿಮಾಗಳ ಕಡೆ ಗಮನ ಹರಿಸಿದ್ದರು. ಇದೀಗ, ಓವಿಯಾ ಬಿಗ್ ಬಾಸ್ ತಮಿಳಿನಲ್ಲಿ ಸ್ಪರ್ಧೆ ಮಾಡಿದ್ದರು. ಓವಿಯಾ ಕೂಡ ಹೊಸ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ.

English summary
social media is abuzz with rumours that Tamil actor Simbu has secretly married Oviya. A picture of them with garlands around their necks has paved the way for the speculations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X