ತಮಿಳು ನಟ ವಿಜಯ್ 65ನೇ ಚಿತ್ರದ ಟೈಟಲ್ ಇದೇನಾ?
ತಮಿಳು ನಟ ವಿಜಯ್ ನಟನೆಯಲ್ಲಿ ತಯಾರಾಗಿರುವ ಮಾಸ್ಟರ್ ಸಿನಿಮಾ ಬಿಡುಗಡೆಯಾಗಬೇಕಿದೆ. ಈ ಚಿತ್ರದ ರಿಲೀಸ್‌ಗೂ ಮೊದಲೇ 65ನೇ ಪ್ರಾಜೆಕ್ಟ್ ಭಾರಿ ಗಮನ ಸೆಳೆಯುತ್ತಿದೆ. ಕಾರಣ, ಈ ಚಿತ್ರವನ್ನು ಎಆರ್ ಮುರುಗದಾಸ್ ಡೈರೆಕ್ಟ್ ಮಾಡಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಹಿಂದೆ ಸರಿದಿದ್ದಾರೆ.
ಹಾಗಾಗಿ, ದಳಪತಿ 65ನೇ ಚಿತ್ರಕ್ಕೆ ನಿರ್ದೇಶಕ ಯಾರು ಮತ್ತು ಸಿನಿಮಾದ ಹೆಸರು ಏನಾಗಬಹುದು ಎಂಬ ವಿಚಾರಗಳು ಚರ್ಚೆಯಲ್ಲಿದೆ.
ಸದ್ಯದ ಮಾಹಿತಿ ಪ್ರಕಾರ, ವಿಜಯ್ 65ನೇ ಚಿತ್ರಕ್ಕೆ 'ಕೋಲಮಾವು ಕೋಕಿಲಾ' ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಇದೀಗ, ಈ ಚಿತ್ರಕ್ಕೆ ಟೈಟಲ್ ಸಹ ಫಿಕ್ಸ್ ಆಗಿದ್ದು, ಟಾರ್ಗೆಟ್ ರಾಜ ಎಂದು ಹರಿದಾಡುತ್ತಿದೆ.

ಅಂದ್ಹಾಗೆ, ವಿಜಯ್‌ಗೆ ಈ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ಮಾತುಕತೆ ಸಹ ನಡೆಯುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಖಳನಟನಾಗುವ ಸಾಧ್ಯತೆ ಇದೆ ಎಂದು ಸಹ ಸುದ್ದಿ ಹರಿದಾಡಿದೆ.
ವಿಜಯ್ 65ನೇ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಇದುವರೆಗೂ ಈ ಪ್ರಾಜೆಕ್ಟ್ ಬಗ್ಗೆ ಯಾವ ವಿಷಯವನ್ನು ಸಹ ಅಧಿಕೃತವಾಗಿ ಹೇಳಿಲ್ಲ. ಹಾಗಾಗಿ, ಇದೆಲ್ಲವೂ ವದಂತಿಗಳಷ್ಟೇ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಥೇರಿ, ಮೆರ್ಸಲ್ ಹಾಗೂ ಬಿಗಿಲ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಟ್ಲಿ ಅವರನ್ನು ವಿಜಯ್ ಚೆನ್ನೈನ ಕಚೇರಿಯಲ್ಲಿ ಭೇಟಿ ಮಾಡಿದ್ದರು. ಬಹುಶಃ ವಿಜಯ್ 65ನೇ ಸಿನಿಮಾದ ಸಂಬಂಧ ಈ ಭೇಟಿಯಾಗಿರಬಹುದು ಎಂಬ ವಿಚಾರವೂ ಚರ್ಚೆಯಲ್ಲಿದೆ.


Click it and Unblock the Notifications