»   » ನಿತಿನ್ ಗೆ ನಿದ್ದೆ ಕೆಡಿಸಿದ ಹುಡುಗಿ ಯಾರು?

ನಿತಿನ್ ಗೆ ನಿದ್ದೆ ಕೆಡಿಸಿದ ಹುಡುಗಿ ಯಾರು?

Posted By:
Subscribe to Filmibeat Kannada

'ಜಯಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ಹಾಲು ಗಲ್ಲದ ಚೆಂದದ ಹೀರೋ ನಿತಿನ್. ಮಾಸ್ ಹೀರೋ ಮಟ್ಟಕ್ಕೆ ತಲುಪದೇ ಇದ್ದರೂ, ಚಾಕಲೇಟ್ ಬಾಯ್ ಇಮೇಜ್ ನಿಂದ ಜನಪ್ರಿಯವಾಗಿರುವ ನಿತಿನ್ ಹಿಂದೆ ಬಿದ್ದಿರುವ ಹುಡುಗಿಯರ ಸಂಖ್ಯೆ ಲೆಕ್ಕವಿಲ್ಲದಷ್ಟು.

'ಜಯಂ' ಮನದೇ ಅಂತ ತೆಲುಗು ಸಿನಿ ಅಂಗಳದಲ್ಲಿ 'ವಿಕ್ಟರಿ' ಬಾರಿಸ್ತಿದ್ದ ಹಾಗೆ ನಿತಿನ್, ಅದೆಷ್ಟೋ ಹುಡುಗೀಯರ 'ದಿಲ್' ಕದ್ಬಿಟ್ಟರು. ಆದ್ರೆ ನಿತಿನ್ ಮಾತ್ರ ಯಾವುದೇ ಕಾರಣಕ್ಕೂ ತಮ್ಮ ಹೃದಯ ಚೋರಿಯಾಗುವುದಕ್ಕೆ ಬಿಟ್ಟಿರ್ಲಿಲ್ಲ. ಹಾಗೆ ಲವ್ವು, ಗಾಸಿಪ್ಪು ಅಂತ ಎಲ್ಲೂ ಸದ್ದು ಕೂಡ ಮಾಡಿರ್ಲಿಲ್ಲ. ತಾನಾಯ್ತು, ತನ್ನ ಸಿನಿಮಾಗಳಾಯ್ತು ಅಂತ ಗಪ್ ಚುಪ್ ಇರ್ತಿದ್ದ ನಿತಿನ್ ಗೆ ಇತ್ತೀಚೆಗೆ ನಿದ್ದೆನೇ ಬರ್ತಿಲ್ವಂತೆ.

Telugu Actor Nithiin is in love1

ಕೈಲಿ ಮೂರ್ನಾಲ್ಕು ಸಿನಿಮಾಗಳಿದ್ಮೇಲೆ ನಿದ್ದೆ ಹೇಗ್ತಾನೆ ಬರ್ಬೇಕು ಅನ್ನುವುದು ಸಹಜ ಪ್ರಶ್ನೆಯಾದರೂ, ನಿತಿನ್ ನಿದ್ದೆಗೆಟ್ಟಿರುವುದೇ ಬೇರೆ ಮ್ಯಾಟ್ರಲ್ಲಿ. ಹಾಗೆ ನಿತಿನ್ ಕಣ್ಮುಚ್ಚೋಕೆ ಆಗದೆ ಇರುವಷ್ಟು ತಲೆಕೆಡಿಸಿಕೊಂಡಿರುವುದಕ್ಕೆ ಕಾರಣ ಓರ್ವ ಹುಡುಗಿ.

ಪ್ರೀತಿಗೂ ನಂಗೂ ಆಗ್ಬರಲ್ಲ ಅಂತ ಇಲ್ಲಿಯವರೆಗೂ ಶ್ರೀರಾಮನ ಹಾಗೆ ಪೋಸು ಕೊಡ್ತಿದ್ದ ನಿತಿನ್, ಇದೀಗ ಸದ್ದಿಲ್ಲದೇ ಪ್ರೇಮ ಪಾಶದಲ್ಲಿ ಸಿಲುಕಿಕೊಂಡಿದ್ದಾರೆ. ಅದ್ಯಾವ ಘಳಿಗೆಯಲ್ಲಿ 'ಆ' ಹುಡುಗಿಯನ್ನ ನೋಡಿದರೋ, ಅಂದಿನಿಂದ ಇಂದಿನವರೆಗೂ ನಿತಿನ್ ಗೆ 'ಆ' ಹುಡುಗಿಯದ್ದೇ ಜಪ. ಎದೆಯಲ್ಲಿ ಸದಾ 'ಆ' ಹುಡುಗಿಯ ಹೆಸರು ಗಿಟಾರ್ ಬಾರಿಸಿದ್ಹಂಗೆ ಆಗುತ್ತಿರುವುದರಿಂದ ನಿತಿನ್ ಕಣ್ಮುಚ್ಚೋಕೆ ಆಗ್ತಿಲ್ಲವಂತೆ.

Telugu Actor Nithiin is in love2

'ಆ' ಹುಡುಗಿಯನ್ನ ನೋಡಿ, ಕ್ಲೀನ್ ಬೌಲ್ಡ್ ಆಗಿರುವ ನಿತಿನ್, ಆಕೆಯನ್ನ ಇಂಪ್ರೆಸ್ ಮಾಡುವುದಕ್ಕೆ ಹರಸಾಹಸ ಪಡ್ತಿದ್ದಾರಂತೆ. ಒಂದ್ವೇಳೆ 'ಆ' ಹುಡುಗಿ ಒಪ್ಪಿದ್ರೆ ಆದಷ್ಟು ಬೇಗ ವಾಲಗ ಊದಿಸುತ್ತಾರಂತೆ. ಈ ಸುದ್ದಿ ಕೇಳಿ ಅದೆಷ್ಟು ಹುಡುಗಿಯರ ಹಾರ್ಟ್ ಬ್ಲಾಸ್ಟ್ ಆಗಿದೆಯೋ ಗೊತ್ತಿಲ್ಲ, ಆದ್ರೆ 'ಆ' ಹುಡುಗಿ ಒಪ್ಪಿದ್ರೆ ನಿತಿನ್ ನೆಲದ ಮೇಲೆ ನಿಲ್ಲೋದೇ ಇಲ್ಲ. ಅಸಲಿಗೆ 'ಆ' ಹುಡುಗಿ ಯಾರು? ಅದನ್ನ ನಿತಿನ್ ಹೇಳುವವರೆಗೂ ಕಾಯ್ತಿರಿ.....(ಏಜೆನ್ಸೀಸ್)

English summary
Telugu Actor Nithiin of 'Jayam' fame is in love. It is said that Nithiin has fallen for a girl and has tried to impress that girl to a maximun extent. But did that girl was impressed by Nithiin? Did she accept? is not known yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada