For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಸ್ಪರ್ಧಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

  |

  ತೆಲುಗು ಬಿಗ್‌ಬಾಸ್ ಸೀಸನ್ 05 ನಿನ್ನೆಯಷ್ಟೆ (ಸೆಪ್ಟೆಂಬರ್ 05) ಆರಂಭವಾಗಿದೆ. ತೆಲುಗು ಬಿಗ್‌ಬಾಸ್ 4 ಟಿಆರ್‌ಪಿ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತ್ತು ಹಾಗಾಗಿಯೇ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ಶೋ ಅನ್ನು ಲಾಂಚ್ ಮಾಡಲಾಗಿದೆ.

  ತೆಲುಗು ಬಿಗ್‌ಬಾಸ್ ಮನೆ ಒಳಗೆ ಹೊಕ್ಕ ಸ್ಪರ್ಧಿಗಳ ಬಗ್ಗೆ ಉತ್ತಮ ಅಭಿಪ್ರಾಯವೇ ವ್ಯಕ್ತವಾಗುತ್ತಿದ್ದು, ಉತ್ತಮ ಹಾಗೂ ಭಿನ್ನ-ಭಿನ್ನ ರಂಗದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಗ್‌ಬಾಸ್ 5, ಕಳೆದ ಬಿಗ್‌ಬಾಸ್‌ಗಿಂತಲೂ ಐದು ಪಟ್ಟು ಹೆಚ್ಚು ಮನರಂಜನೆ ನೀಡಲಿದೆ ಎಂದು ನಿರೂಪಕ ನಾಗಾರ್ಜುನ ಶೋನ ಆರಂಭದ ಸಮಯದಲ್ಲಿ ಘೋಷಿಸಿದ್ದಾರೆ.

  ತೆಲುಗು ಬಿಗ್‌ಬಾಸ್ ಮನೆಯಲ್ಲಿ ಇದೀಗ 19 ಮಂದಿ ಸ್ಪರ್ಧಿಗಳಿದ್ದಾರೆ. ಒಬ್ಬೊಬ್ಬರು ಒಂದೊಂದು ರಂಗದಿಂದ ಬಿಗ್‌ಬಾಸ್ ಮನೆಗೆ ಆಗಮಿಸಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಶ್ರೇಣಿಯ ಸಂಭಾವನೆಯನ್ನು ಆಯೋಜಕರು ನೀಡುತ್ತಿದ್ದಾರೆ. ಅವರ ಜನಪ್ರಿಯತೆ ಆಧರಿಸಿ ಈ ಸಂಭಾವನೆ ನಿಗದಿಯಾಗಿದೆ. ಹಾಗಿದ್ದರೆ ಯಾವ ಸ್ಪರ್ಧಿ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ?

  ಮನೆಯೊಳಗಿರುವ ಯೂಟ್ಯೂಬರ್ ಶಣ್ಮುಖ್ ಮತ್ತು ನಿರೂಪಕ ರವಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ಸ್ಪರ್ಧಿಗಳು ಎನ್ನಲಾಗಿದೆ. ಈ ಇಬ್ಬರು ಪ್ರತಿವಾರ 4-5 ಲಕ್ಷ ಹಣವನ್ನು ಖಾತೆಗೆ ಪಡೆಯುತ್ತಿದ್ದಾರೆ. ನಟ ಲೋಬೊ ಮತ್ತು ಅನಿ ಮಾಸ್ಟರ್ ಸಹ ಕಡಿಮೆ ಸಂಭಾವನೆಯನ್ನೇನು ಪಡೆಯುತ್ತಿಲ್ಲ, ಅವರೂ ಸಹ ವಾರಕ್ಕೆ 3-4 ಲಕ್ಷದ ಮೊತ್ತ ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

  ಜಸ್ವಂತ್, ಲಹರಿ, ಶ್ರೀರಾಮ್ ಚಂದ್ರ, ಪ್ರಿಯಾ ಮತ್ತು ಉಮಾದೇವಿ ಅವರುಗಳು ವಾರಕ್ಕೆ 1 ರಿಂದ 2 ಲಕ್ಷ ಹಣವನ್ನು ಪಡೆಯುತ್ತಿದ್ದರೆ, ವಿಶ್ವ, ನಟರಾಜ್, ಶ್ವೇತ ವರ್ಮಾ, ಸರಯು, ಸಿರಿ, ಪ್ರಿಯಾಂಕಾ, ವಿಜೆ ಸನ್ನಿ ಅವರುಗಳು ವಾರಕ್ಕೆ 40 ರಿಂದ 60 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ.

  ಬಿಗ್‌ಬಾಸ್ ಸೀಸನ್ 4 ರ ವಿಜೇತ ಅಭಿಜಿತ್‌ಗೆ ಬರೋಬ್ಬರಿ 50 ಲಕ್ಷ ರು ಬಹುಮಾನವನ್ನು ನೀಡಲಾಗಿತ್ತು. ಬಿಗ್‌ಬಾಸ್ ಸೀಸನ್ 5ರಲ್ಲೂ ಇದೇ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಸ್ಪರ್ಧಿಗಳು ಸಂಭಾವನೆ ಜೊತೆಗೆ, ಶೋ ಗೆದ್ದಲ್ಲಿ ಭಾರಿ ಮೊತ್ತದ ನಗದು ಬಹುಮಾನವನ್ನು ಸಹ ಪಡೆದುಕೊಳ್ಳಲಿದ್ದಾರೆ.

  ಬಿಗ್‌ಬಾಸ್ ಶೋ ಭಾರತದ ಜನಪ್ರಿಯ ಟಿವಿ ಶೋ ಆಗಿದ್ದು, ತೆಲುಗು ಬಿಗ್‌ಬಾಸ್ ಆರಂಭವಾದ ಬೆನ್ನಲ್ಲೆ ತಮಿಳು ಬಿಗ್‌ಬಾಸ್‌ ಶೋನ ಪ್ರೋಮೊ ಬಿಡುಗಡೆ ಮಾಡಲಾಗಿದೆ. ಕಮಲ್ ಹಾಸನ್ ನಡೆಸಿಕೊಡಲಿರುವ ಈ ಶೋ ಕೆಲವೇ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ. ಅಕ್ಟೋಬರ್‌ 3 ರಿಂದ ಶೋ ಪ್ರಸಾರವಾಗುತ್ತದೆ ಎನ್ನಲಾಗುತ್ತಿದ್ದು, ವಿಜೇತ ಸ್ಪರ್ಧಿ 50 ಲಕ್ಷ ರು ಬಹುಮಾನ ಪಡೆಯಲಿದ್ದಾರೆ.

  ಕನ್ನಡದಲ್ಲಿ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಶೋ ಅತ್ಯಂತ ಜನಪ್ರಿಯತೆ ಪಡೆದಿದೆ. ಈ ವರೆಗೆ ಎಂಟು ಸೀಸನ್ ಮುಗಿಸಿರುವ ಕನ್ನಡ ಬಿಗ್‌ಬಾಸ್ ಒಂಬತ್ತನೇ ಸೀಸನ್‌ಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಡಿಸೆಂಬರ್ ಅಥವಾ ಜನವರಿ ವೇಳೆಗೆ ಶೋ ಆರಂಭವಾಗುವ ಸಾಧ್ಯತೆ ಇದೆ. ಕನ್ನಡ ಬಿಗ್‌ಬಾಸ್ ಸೀಸನ್ 8 ಅನ್ನು ಮಂಜು ಪಾವಗಡ ಗೆದ್ದಿದ್ದಾರೆ.

  ಮಲಯಾಳಂ ಬಿಗ್‌ಬಾಸ್‌ ಶೋ ಸಹ ಜನಪ್ರಿಯತೆ ಪಡೆದಿದ್ದು ಮಲಯಾಳಂನಲ್ಲಿ ನಟ ಮೋಹನ್‌ಲಾಲ್ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಾರೆ. ಮಲಯಾಳಂ ಬಿಗ್‌ಬಾಸ್ ಈವರೆಗೆ ಮೂರು ಸೀಸನ್ ಆಗಿದೆ. ನಾಲ್ಕನೇ ಸೀಸನ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಒಂದು ಬಾರಿ ಕೊರೊನಾ ಕಾರಣಕ್ಕೆ ಒಂದು ಸೀಸನ್ ಅನ್ನು ಅರ್ಧದಲ್ಲಿಯೇ ಮುಗಿಸಲಾಗಿತ್ತು.

  ಇನ್ನು ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ ಬಹಳ ಜನಪ್ರಿಯತೆ ಗಳಿಸಿದೆ. ಈವರೆಗೆ 14 ಸೀಸನ್‌ಗಳಲ್ಲಿ ಹಿಂದಿ ಬಿಗ್‌ಬಾಸ್ ಪ್ರಸಾರವಾಗಿದೆ. ಇದೀಗ ಕರಣ್ ಜೋಹರ್ ಒಟಿಟಿಯಲ್ಲಿಯೂ ಬಿಗ್‌ಬಾಸ್ ನಡೆಸಿಕೊಡುತ್ತಿದ್ದು, ಅದು ಈಗ ಚಾಲ್ತಿಯಲ್ಲಿದೆ. ಹದಿನೈದನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  English summary
  Telugu Bigg Boss Season 05: How much remuneration contestants receiving. Who is the highest paid contestant.
  Tuesday, September 7, 2021, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X