Don't Miss!
- Sports
ವಿರಾಟ್ ಕೊಹ್ಲಿಗಿಂತ ತಾನು ನಂ.1 ಎಂದಿದ್ದ ಖುರ್ರಂ ಮಂಝೂರ್ ಹೇಳಿಕೆಗೆ ಪಾಕ್ನ ಮಾಜಿ ಕ್ರಿಕೆಟಿಗನಿಂದಲೇ ಟೀಕೆ
- News
74th Republic day 2023: ಪಾಕಿಸ್ತಾನದ ಪಡೆಗಳಿಗೆ ಸಿಹಿ ಹಂಚಿದ ಭಾರತ !
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗು ಸಿನಿಮಾ ಶೂಟಿಂಗ್ ವೇಳೆ ಹರಿಪ್ರಿಯ-ವಸಿಷ್ಠ ಸಿಂಹ ನಡುವೆ ಪ್ರೀತಿ: ಯಾವುದು ಆ ಸಿನಿಮಾ?
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಒಂದೊಂದೇ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಸದ್ಯ ಅದಿತಿ ಪ್ರಭುದೇವ ಇಂದು (ನವೆಂಬರ್ 28) ಯಶಸ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈಗ ಮತ್ತೊಂದು ಜೋಡಿಯ ವಿಷಯ ಸದ್ದು ಮಾಡುತ್ತಿದೆ.
ಸ್ಯಾಂಡಲ್‌ವುಡ್ ನಟಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಇಬ್ಬರೂ ಮದುವೆ ಆಗುತ್ತಿದ್ದಾರೆ. ಶೀಘ್ರದಲ್ಲಿಯೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋ ಸುದ್ದಿಯೊಂದು ಕನ್ನಡ ಚಿತ್ರರಂಗದಲ್ಲಿ ಹರಿದಾಡಿತ್ತು.
ಮುಹೂರ್ತ
ಮುಗಿಸಿದ್ದ
'ಬೆಲ್
ಬಾಟಮ್
2'
ನಿಂತುಹೋಯ್ತಾ?
ಬೆಳೆದ
ರಿಷಬ್
ಶೆಟ್ಟಿ
ಬಗ್ಗೆ
ಜಯತೀರ್ಥ
ಹೇಳಿದ್ದೇನು?
ಈ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಅಷ್ಟಕ್ಕೂ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರಿಗೂ ಪ್ರೀತಿ ಹುಟ್ಟಿದ್ದು ಯಾವಾಗ? ತಾರೆಯರು ಭೇಟಿಯಾಗಿದ್ದು ಎಲ್ಲಿ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿವೆ. ಅದಕ್ಕೀಗ ಉತ್ತರ ಎಂಬಂತೆ ಸುದ್ದಿಯೊಂದು ಓಡಾಡುತ್ತಿದೆ.

ತೆಲುಗು ಸಿನಿಮಾ ಶೂಟಿಂಗ್‌ನಲ್ಲಿ ಲವ್
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆಯ ಹಂತದಲ್ಲಿಯೇ ಇದೆ. ಆ ಸಿನಿಮಾ ಶೂಟಿಂಗ್ ವೇಳೆ ಹರಿಪ್ರಿಯಾ ಹಾಗೂ ವಸಿಷ್ಠ ಇಬ್ಬರ ಸ್ನೇಹ ಗಾಢವಾಗಿ ಬೆಳೆದಿತ್ತು. ಆ ಬಳಿಕವೇ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಈಗ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದಾರೆ ಅನ್ನೋ ಸುದ್ದಿಯೊಂದು ಪಬ್ಲಿಕ್ ಟಿವಿಯ ಡಿಜಿಟಲ್ ಮಾಧ್ಯಮ ವರದಿ ಮಾಡಿದೆ.

ಮೂಗು ಚುಚ್ಚಿದ ವಿಡಿಯೋ ಬಳಿಕ ಸುದ್ದಿ ವೈರಲ್
ಇತ್ತೀಚೆಗಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಹರಿಪ್ರಿಯಾ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಮದುವೆ ಸುದ್ದಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ವಸಿಷ್ಠ ಸಿಂಹ ನಟಿ ಹರಿಪ್ರಿಯಾ ಜೊತೆ ಮದುವೆ ಆಗುತ್ತಾರೆ ಅನ್ನೋ ಗುಲ್ಲೆದ್ದಿತ್ತು. ಅಲ್ಲದೆ ಹರಿಪ್ರಿಯಾ ಮೂಗು ಚುಚ್ಚಿಸಿದ್ದೇ ವಸಿಷ್ಠ ಸಿಂಹ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಸುದ್ದಿ ಬಗ್ಗೆ ಹರಿಪ್ರಿಯಾ ಆಗಲಿ, ವಸಿಷ್ಠ ಸಿಂಹ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ವಸಿಷ್ಠ ಸಿಂಹ ಸಿನಿಮಾಗಳಲ್ಲಿ ಫುಲ್ ಬ್ಯುಸಿ
ಸಿನಿಮಾ ವಿಚಾರಕ್ಕೆ ಬಂದ್ರೆ ವಸಿಷ್ಠ ಸಿಂಹ ನಟಿಸಿದ್ದ 'ಹೆಡ್ ಬುಷ್' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. 'ಕೆಜಿಎಫ್' ಸಿನಿಮಾ ವಸಿಷ್ಠಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಇದರೊಂದಿಗೆ 'ಕಾಲಚಕ್ರ' ಹಾಗೂ 'ಪಂಟ' ಸಿನಿಮಾ ಸೆಟ್ಟೇರಿದ್ದು, ಶೂಟಿಂಗ್ ನಡೆಯುತ್ತಿದೆ. ಸ್ಯಾಂಡಲ್‌ವುಡ್ ಸಿನಿಮಾಗಳ ಜೊತೆ ಜೊತೆಗೆ ತೆಲುಗು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಹೀಗಾಗಿ ಈಗಲೇ ಮದುವೆ ಬಗ್ಗೆ ಯೋಚನೆ ಮಾಡಿದ್ದಾರಾ? ಅನ್ನೋದು ಗುಮಾನಿಯಂತೂ ಇದೆ.

ಸಿನಿಮಾಗಳಲ್ಲಿ ಹರಿಪ್ರಿಯಾ ಫುಲ್ ಬ್ಯುಸಿ
ಹರಿಪ್ರಿಯಾ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2022ರಲ್ಲಿ 'ಪೆಟ್ರೊಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿದೆ. ಅಲ್ಲದೆ, ತಮಿಳಿನಲ್ಲಿ 'ನಾನ್ ಮಿರುಗಮೈ ಮಾರಾ' ತೆರೆಕಂಡಿದೆ. ಸದ್ಯ ಹರಿಪ್ರಿಯಾ ಕೈಯಲ್ಲಿ ಸುಮಾರು ಕಮ್ಮಿ ಅಂದ್ರೂ ಐದು ಸಿನಿಮಾಗಳಿವೆ. "ಬೆಲ್ ಬಾಟಂ 2', 'ಯದಾ ಯದಾಹಿ', 'ಹ್ಯಾಪಿ ಎಂಡಿಂಗ್', 'ಲಗಾಂ' ಅಂತಹ ಸಿನಿಮಾಗಳು ಇವೆ. ಈ ಕಾರಣಕ್ಕೆ ಮದುವೆ ಬಗ್ಗೆ ಆಲೋಚನೆ ಮಾಡಿದ್ದಾರಾ? ಅನ್ನೋದು ಅವರಿಂದಲೇ ಹೊರಬೀಳಬೇಕಿದೆ.