For Quick Alerts
  ALLOW NOTIFICATIONS  
  For Daily Alerts

  ಪತ್ನಿ ಸಂಗೀತಾಗೆ ದಳಪತಿ ವಿಜಯ್ ಡಿವೋರ್ಸ್? ಕೀರ್ತಿ ಸುರೇಶ್ ಜೊತೆ 2ನೇ ಮದುವೆ?

  |

  ಕಾಲಿವುಡ್‌ನಲ್ಲಿ ಮತ್ತೊಮ್ಮೆ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡ್ತಿದೆ. ನಟಿ ಕೀರ್ತಿ ಸುರೇಶ್ ಕೈ ಹಿಡಿಯಲು ವಿಜಯ್ ಸಿದ್ಧತೆ ನಡೆಸಿದ್ದಾರೆ ನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ಆದರೆ ದಳಪತಿ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಸುಖಾ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ ಎನ್ನುತ್ತಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ #justiceforsangeetha (ಜಸ್ಟೀಸ್ ಫಾರ್ ಸಂಗೀತಾ) ಎನ್ನುವ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡ್ ಆಗ್ತಿದೆ. ಮತ್ತೊಂದು ಕಡೆ ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. 'ವಾರಿಸು' ಸಿನಿಮಾ ಬಿಡುಗಡೆಗಿಂತ ಒಂದು ವಾರ ಮುನ್ನ ಇಂತದ್ದೇ ವದಂತಿ ಹಬ್ಬಿತ್ತು. ಯಾರೋ ಕಿಡಿಗೇಡಿಗಳು ವಿಜಯ್ ವಿಕಿಪಿಡಿಯ ಪೇಜ್‌ನ ಪರ್ಸನಲ್ ಡಿಟೈಲ್ಸ್‌ನಲ್ಲಿ ತಪ್ಪು ತಪ್ಪಾಗಿ ಎಡಿಟ್ ಮಾಡಿ ವಿಕಿಪಿಡಿಯ ಸ್ಕ್ರೀನ್‌ ಶಾಟ್ ವೈರಲ್ ಮಾಡಿದ್ದರು. ಅದೆಲ್ಲಾ ಸುಳ್ಳು ಎಂದು ನಂತರ ಗೊತ್ತಾಗಿತ್ತು. ಇದೀಗ ಮತ್ತೊಮ್ಮೆ ಅಂತದ್ದೇ ಸುದ್ದಿ ತೇಲಿ ಬಿಟ್ಟಿದ್ದಾರೆ.

  ವಿಜಯ್ ಜೊತೆ ಪತ್ನಿ ಸಂಗೀತಾ 'ವಾರಿಸು' ಆಡಿಯೋ ಲಾಂಚ್ ಈವೆಂಟ್‌ನಲ್ಲಿ ಭಾಗಿ ಆಗಿರಲಿಲ್ಲ. ನಿರ್ದೇಶಕ ಅಟ್ಲಿ ಪತ್ನಿ ಪ್ರಿಯಾ ಸೀಮಂತ ಕಾರ್ಯಕ್ರಮದಲ್ಲೂ ಆಕೆಯ ಅನುಪಸ್ಥಿತಿ ಕಂಡಿತ್ತು. ಇದನ್ನೆಲ್ಲಾ ಒಂದಕ್ಕೊಂದು ಸೇರಿಸಿ ವಿಜಯ್ ಹಾಗೂ ಸಂಗೀತಾ ನಡುವೆ ವೈಮನಸ್ಸು ಇದೆ. ಇಬ್ಬರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರಾಗವನ್ನು ಕೆಲವರು ಹಾಡುತ್ತಿದ್ದಾರೆ.

  ಸುಖಾ ಸುಮ್ಮನೆ ಅಪಪ್ರಚಾರ

  ಸುಖಾ ಸುಮ್ಮನೆ ಅಪಪ್ರಚಾರ

  ಕಾಲಿವುಡ್‌ನಲ್ಲಿ ಸ್ಟಾರ್‌ ನಟರ ಅಭಿಮಾನಿಗಳ ನಡುವೆ ಭಾರೀ ಕೆಸರೆರಚಾಟ ನಡೆಯುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡಿ ಟ್ರೋಲ್ ಮಾಡುತ್ತಿರುತ್ತಾರೆ. ಈ ಹಿಂದೆ ಕೂಡ ಅಜಿತ್ ಅಭಿಮಾನಿಗಳು ವಿಜಯ್ ವಿರುದ್ಧ ಇಂತದ್ದೇ ನೆಗೆಟಿವ್ ವಿಚಾರ ಹಬ್ಬಿಸಿದ್ದರು. ಈ ಬಾರಿ ಅಜಿತ್ ಹಾಗೂ ಸೂರ್ಯ ಅಭಿಮಾನಿಗಳು ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎನ್ನುವು ವಿಜಯ್ ಅಭಿಮಾನಿಗಳ ಆರೋಪವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  ಮೌನಕ್ಕೆ ಜಾರಿದ ವಿಜಯ್ ದಂಪತಿ

  ಮೌನಕ್ಕೆ ಜಾರಿದ ವಿಜಯ್ ದಂಪತಿ

  'ಭೈರವ' ಹಾಗೂ 'ಸರ್ಕಾರ್' ಸಿನಿಮಾಗಳಲ್ಲಿ ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆ ಸ್ನೇಹವಿದೆ. ಆದರೆ ಈಗ ಆ ಸ್ನೇಹ ಪ್ರೀತಿಯಾಗಿ ಬದಲಾಗಿದೆ, ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರುತ್ತಾರೆ, ಅದಕ್ಕಾಗಿ ವಿಜಯ್ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಡುತ್ತಾರೆ ಅಂತೆಲ್ಲಾ ಪ್ರಚಾರ ಆಗುತ್ತಿದೆ. ಮತ್ತೊಂದು ಕಡೆ ಕೀರ್ತಿ ಸುರೇಶ್‌ನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ಆಗ್ಲಿ ಸಂಗೀತಾ ಆಗ್ಲಿ ಈ ಬಗ್ಗೆ ಏನು ಮಾತನಾಡಿಲ್ಲ.

  ವಿಜಯ್ ಮಾತನಾಡಬೇಕು

  ವಿಜಯ್ ಮಾತನಾಡಬೇಕು

  'ವಾರಿಸು' ಸಿನಿಮಾ ಹಿಟ್ ಆಗಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬರ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಇಂತದ್ದೇ ನೆಗೆಟಿವ್ ಟ್ರೋಲ್ ಆರಂಭವಾಗಿತ್ತು. ಆದರೆ ಅದು ಸಿನಿಮಾ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ ಅಜಿತ್ ನಟನೆಯ 'ಥುನಿವು' ಚಿತ್ರವನ್ನು ಮೀರಿಸಿ 'ವಾರಿಸು' ಕಲೆಕ್ಷನ್ ಮಾಡುತ್ತಿದೆ. ಈ ಬೇಸರದಿಂದ ಅಜಿಯ್ ಫ್ಯಾನ್ಸ್ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಸ್ವತಃ ವಿಜಯ್ ಪ್ರತಿಕ್ರಿಯಿಸದ ಹೊರತು ಇದು ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ. ಆದರೆ ಇಂತಹ ನೂರಾರು ಗಾಸಿಪ್‌ಗಳು ಬರುತ್ತಿರುತ್ತವೆ. ಎಲ್ಲದಕ್ಕೂ ಸ್ಪಷ್ಟನೆ ಕೊಡಲು ಸಾಧ್ಯವಿಲ್ಲ.

  ವಿಜಯ್- ಸಂಗೀತಾ ಲವ್ ಸ್ಟೋರಿ

  ವಿಜಯ್- ಸಂಗೀತಾ ಲವ್ ಸ್ಟೋರಿ

  ಇನ್ನು ವಿಜಯ್ ಹಾಗೂ ಸಂಗೀತಾ ಲವ್ ಸ್ಟೋರಿ ಬಹಳ ಇಂಟ್ರೆಸ್ಟಿಂಗ್ ಆಗಿದೆ. ತಮ್ಮ ಅಭಿಮಾನಿಯನ್ನೇ ವಿಜಯ್ ಪ್ರೀತಿಸಿ ಮದುವೆ ಆಗಿದ್ದಾರೆ. 22 ವರ್ಷಗಳ ಹಿಂದೆ ಹಸೆಮಣೆ ಏರಿದ್ದ ಜೋಡಿಗೆ ಒಬ್ಬ ಮಗ ಕೂಡ ಇದ್ದಾನೆ. ಆತ ವಿದೇಶದಲ್ಲಿ ಓದುತ್ತಿದ್ದಾನೆ. 1996ರಲ್ಲಿ ವಿಜಯ್ ನಟನೆಯ 'ಪೂವೆ ಉನಕ್ಕಾಗ' ಸಿನಿಮಾ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ವಿಜಯ್ ನಟನೆ ನೋಡಿ ಯುಕೆಯಲ್ಲಿದ್ದ ಸಂಗೀತಾ ಫಿದಾ ಆಗಿದ್ದರು. ನೆಚ್ಚಿನ ನಟನನ್ನು ನೋಡಲು ಪದೇ ಪದೇ ಚೆನ್ನೈಗೆ ಬರುತ್ತಿದ್ದರು. ಇದನ್ನು ತಿಳಿದು ವಿಜಯ್ ಭೇಟಿ ಮಾಡಿದ್ದರು. ಆ ಭೇಟಿ ಪರಿಚಯ ಮುಂದೆ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಆಗಿದ್ದರು.

  English summary
  Thalapathy Vijay, Sangeetha spark separation rumors again, #justiceforsangeetha trending now. Know more
  Tuesday, January 24, 2023, 18:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X