For Quick Alerts
  ALLOW NOTIFICATIONS  
  For Daily Alerts

  'ವರದನಾಯಕ' ನಟಿ ಸಮೀರಾ ತೆಲುಗು ಚಿತ್ರರಂಗ ತೊರೆಯಲು ಜೂ. ಎನ್‌ಟಿಆರ್ ಕಾರಣ!

  |

  ಮುಂಬೈನಲ್ಲಿ ಜನಿಸಿದ ಟಿ ಸಮೀರಾ ರೆಡ್ಡಿ ಹಿಂದಿ ಚಿತ್ರರಂಗದ ಮೂಲಕ ನಟನೆಗೆ ಬಂದವರು. ಅವರು ಕೊನೆಯದಾಗಿ ಕಾಣಿಸಿಕೊಂಡ ಚಿತ್ರ ಕನ್ನಡದ 'ವರದನಾಯಕ'. 2013ರ ಬಳಿಕ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಿಲ್ಲ. ಇಬ್ಬರು ಮಕ್ಕಳ ಪಾಲನೆಯಲ್ಲಿ ಅವರು ಖುಷಿ ಕಾಣುತ್ತಿದ್ದಾರೆ. ತಮ್ಮ ಮಕ್ಕಳ ಮುದ್ದಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ಹಾಡು ಕರ್ನಾಟಕದ ಪ್ರತಿಭೆ ಕೊರೊನಾ ಕುರಿತ ಹಾಡನ್ನು ಎಷ್ಟು ಅದ್ಭುತವಾಗಿ ಹಾಡಿದ್ದಾನೆ ನೋಡಿ | Basavaraju

  ಈಗ ಏಳು ವರ್ಷಗಳಿಂದ ಸಿನಿಮಾದಲ್ಲಿ ನಟಿಸದ ಸಮೀರಾ, ಒಂದು ಕಾಲದಲ್ಲಿ ಬೇಡಿಕೆ ನಟಿಯಾಗಿದ್ದರು. ಹಿಂದಿ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳಿದ್ದಾಗ, ದಕ್ಷಿಣ ಭಾರತೀಯ ಸಿನಿಮಾಗಳಿಂದಲೂ ಅವಕಾಶಗಳು ಅರಸಿ ಬಂದವು. ಸಮೀರಾ ಚಿತ್ರರಂಗ ಪ್ರವೇಶಿಸಿದ್ದು 2002ರಲ್ಲಿ. ಅಲ್ಲಿಂದ ಹನ್ನೊಂದು ವರ್ಷ ಚಿತ್ರರಂಗದಲ್ಲಿದ್ದ ಅವರು, 2014ರಲ್ಲಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗುವ ಮುನ್ನವೇ ಚಿತ್ರರಂಗ ತೊರೆದಿದ್ದರು. ಆದರೆ ತೆಲುಗು ಚಿತ್ರರಂಗದಿಂದ 2006ರಲ್ಲಿಯೇ ದೂರವಾಗಿದ್ದರು. ಮೂಲತಃ ತೆಲುಗು ಕುಟುಂಬದವರಾದರೂ ತೆಲುಗು ಚಿತ್ರರಂಗದಲ್ಲಿ ಅವರು ಉಳಿಯಲಿಲ್ಲ. ಅದಕ್ಕೆ ಕಾರಣ ಜೂನಿಯರ್ ಎನ್‌ಟಿಆರ್ ಜತೆಗಿನ ಒಂದು ಸಿನಿಮಾ. ಮುಂದೆ ಓದಿ...

  2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!

  ಎನ್‌ಟಿಆರ್ ಜತೆ ಸಮೀರಾ ಹೆಸರು

  ಎನ್‌ಟಿಆರ್ ಜತೆ ಸಮೀರಾ ಹೆಸರು

  2006ರಲ್ಲಿ ಸಮೀರಾ ರೆಡ್ಡಿ, ಸುರೇಂದರ್ ರೆಡ್ಡಿ ನಿರ್ದೇಶನದ ತೆಲುಗು ರೊಮ್ಯಾಂಟಿಂಗ್ ಆಕ್ಷನ್ ಚಿತ್ರ 'ಅಶೋಕ್'ದಲ್ಲಿ ಜೂನಿಯರ್ ಎನ್‌ಟಿಆರ್ ಜತೆ ನಟಿಸಿದ್ದರು. ಎನ್‌ಟಿಆರ್ ಸಾಮಾನ್ಯವಾಗಿ ನಟಿಯರೊಂದಿಗಿನ ಗಾಸಿಪ್‌ನಿಂದ ದೂರ ಇರುವವರು. ಆದರೆ ಸಮೀರಾ ರೆಡ್ಡಿ ಜತೆ ಅವರ ಹೆಸರು ಕೇಳಿಬರತೊಡಗಿತ್ತು.

  ಡೇಟಿಂಗ್ ರೂಮರ್

  ಡೇಟಿಂಗ್ ರೂಮರ್

  ಸಮೀರಾ ರೆಡ್ಡಿ, ಜೂ ಎನ್‌ಟಿಆರ್ ಜತೆಗೆ ಹೆಚ್ಚು ಆತ್ಮೀಯತೆಯಿಂದ ವರ್ತಿಸುತ್ತಿದ್ದರು. ಇದರಿಂದ ಇಬ್ಬರ ಕುರಿತು ಕಥೆಗಳನ್ನು ಹರಡಿಸಲು ಆರಂಭಿಸಿದರು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಜೋರಾಗಿತ್ತು. ಚಿತ್ರದ ಬಿಡುಗಡೆ ಸಂದರ್ಭದಲ್ಲಿಯಂತೂ ಅದು ದಟ್ಟವಾಗಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ಅದು ತಣ್ಣಗಾಯಿತು.

  ಅಂಡರ್ ವಾಟರ್ ನಲ್ಲಿ 'ವರದನಾಯಕ' ನಟಿಯ ಪ್ರೆಗ್ನೆನ್ಸಿ ಫೋಟೋಶೂಟ್ಅಂಡರ್ ವಾಟರ್ ನಲ್ಲಿ 'ವರದನಾಯಕ' ನಟಿಯ ಪ್ರೆಗ್ನೆನ್ಸಿ ಫೋಟೋಶೂಟ್

  ತೆಲುಗು ಚಿತ್ರರಂಗದಿಂದ ದೂರ

  ತೆಲುಗು ಚಿತ್ರರಂಗದಿಂದ ದೂರ

  ಇದರ ಬಳಿಕ ಅವರು ತೆಲುಗು ಸಿನಿಮಾಗಳಲ್ಲಿ ನಾಯಕಿಯ ಪಾತ್ರ ನಿರ್ವಹಿಸಲಿಲ್ಲ. ಬೆಂಗಾಳಿ, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದ ಒಂದು ಸಿನಿಮಾದಲ್ಲಿಯೂ ನಟಿಸಿದರು. ಆರು ವರ್ಷದ ಬಳಿಕ 2012ರಲ್ಲಿ ರಾಣಾ ದಗ್ಗುಬಾಟಿ, ನಯನತಾರಾ ನಟನೆಯ 'ಕೃಷ್ಣ ವಂದೆ ಜಗದ್ಗುರುಂ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದರಷ್ಟೇ.

  ತೆಲುಗು ಸಿನಿಮಾ ಬಗ್ಗೆ ಗೊತ್ತಿರಲಿಲ್ಲ

  ತೆಲುಗು ಸಿನಿಮಾ ಬಗ್ಗೆ ಗೊತ್ತಿರಲಿಲ್ಲ

  ಸಂದರ್ಶನವೊಂದರಲ್ಲಿ ಸಮೀರಾ ರೆಡ್ಡಿ, ಜೂ. ಎನ್‌ಟಿಆರ್ ಜತೆಗಿನ ಸಂಬಂಧದ ರೂಮರ್ ಬಗ್ಗೆ ಮಾತನಾಡಿದ್ದರು. 'ನಾನು ಬಹಳ ಫ್ರೆಂಡ್ಲಿ ಮತ್ತು ನೇರವಂತಿಕೆಯವಳು ಎನ್ನುವುದು ನಿಜ. ನಾನು ಯಾವುದನ್ನೂ ಮುಚ್ಚಿಡಲು ಬಯಸುವುದಿಲ್ಲ. ಅವರು ಜತೆಗೆ ಕೆಲಸ ಮಾಡಲು ಬಹಳ ಅತ್ಯುದ್ಭುತ ವ್ಯಕ್ತಿ ಎಂಬ ಕಾರಣಕ್ಕೆ ನಮ್ಮ ನಡುವಿನ ಆತ್ಮೀಯತೆ ಹೆಚ್ಚಿತ್ತು. ಅವರು ನನಗೆ ಸಾಕಷ್ಟು ಕಲಿಸಿದ್ದರು. ತೆಲುಗು ರೆಡ್ಡಿಯಾಗಿದ್ದರೂ ನನಗೆ ತೆಲುಗು ಸಿನಿಮಾಕ್ಕೆ ಬಂದಾಗ ಏನೂ ಗೊತ್ತಿರಲಿಲ್ಲ' ಎಂದಿದ್ದಾರೆ.

  ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಮೀರಾ ರೆಡ್ಡಿಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಮೀರಾ ರೆಡ್ಡಿ

  ನಾವು ಒಳ್ಳೆಯ ಸ್ನೇಹಿತರಾಗಿದ್ದೆವು

  ನಾವು ಒಳ್ಳೆಯ ಸ್ನೇಹಿತರಾಗಿದ್ದೆವು

  ಜೂನಿಯರ್ ಎನ್‌ಟಿಆರ್ ಸ್ವಭಾವದ ಬಗ್ಗೆ ಮಾತನಾಡಿದ್ದ ಸಮೀರಾ, 'ಅವರು ತಮ್ಮಷ್ಟಕ್ಕೆ ತಾವು ಇರುವ ವ್ಯಕ್ತಿ ಎಂದು ಅನೇಕರು ಹೇಳಿದ್ದನ್ನು ಕೇಳಿದ್ದೆ. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಶೂಟಿಂಗ್ ಮುಗಿದ ಬಳಿಕವೂ ಅವರು ನಮ್ಮೊಂದಿಗೆ ಮಾತನಾಡುವುದಿಲ್ಲ. ಹಾಗಾಗಿ ನನ್ನೊಂದಿಗೆ ಮಾತನಾಡಲೂ ಬಹಳ ಸಮಯ ತೆಗೆದುಕೊಂಡರು. ಆದರೂ ನಾವು ಹೇಗೋ ಒಳ್ಳೆಯ ಸ್ನೇಹಿತರಾದೆವು. ಆದರೆ ನಮ್ಮ ಸ್ನೇಹವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು' ಎಂದು ಬೇಸರಗೊಂಡಿದ್ದರು.

  ಅಪ್ಪನಿಗೆ ಉತ್ತರ ನೀಡಬೇಕಿತ್ತು

  ಅಪ್ಪನಿಗೆ ಉತ್ತರ ನೀಡಬೇಕಿತ್ತು

  ಈ ವದಂತಿ ಹರಡಿದಾಗ ಸಮೀರಾ ಕುಟುಂಬದಲ್ಲಿ ತಳಮಳ ಶುರುವಾಗಿತ್ತಂತೆ. 'ಮನೆಯಲ್ಲಿ ಅದು ದೊಡ್ಡ ಸಂಗತಿಯಾಗಿತ್ತು. ಏಕೆಂದರೆ ಎಲ್ಲ ಕಡೆಯೂ ಅದೇ ಸುದ್ದಿ ಬರುತ್ತಿತ್ತು. ಮನೆಯಲ್ಲಿ ಬೇಸರಗೊಂಡಿದ್ದರು. ಅನೇಕ ಸಿನಿಮಾಗಳಲ್ಲಿ ನಾನು ಬೋಲ್ಡ್ ಆಗಿ ನಟಿಸಿದ್ದೇನೆ. ನನ್ನ ತಂದೆ ಈಗಲೂ ಆಂಧ್ರ ರೆಡ್ಡಿಯಾಗಿಯೇ ಉಳಿದಿದ್ದಾರೆ. ಕೊನೆಯಲ್ಲಿ ನಾನು ಅವರಿಗೆ ಉತ್ತರ ಕೊಡಬೇಕಿತ್ತು. ಏಕೆಂದರೆ ಅವರು ತಮ್ಮ ಕುಟುಂಬದ ಕಡೆಯಿಂದ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು' ಎಂದಿದ್ದರು.

  ಮದುವೆಯಾಗುತ್ತೀರಾ ಎಂದೇ ಕೇಳುತ್ತಿದ್ದರು...

  ಮದುವೆಯಾಗುತ್ತೀರಾ ಎಂದೇ ಕೇಳುತ್ತಿದ್ದರು...

  'ಈ ಪ್ರಶ್ನೆಗಳನ್ನು ಅಪ್ಪ ಪದೇ ಪದೇ ಕೇಳಲು ಆರಂಭಿಸಿದಾಗ ನಾನು ತೆಲುಗು ಸಿನಿಮಾದಿಂದಲೇ ದೂರ ಸರಿಯಲು ನಿರ್ಧರಿಸಿದೆ. ಚಿತ್ರರಂಗದಲ್ಲಿ ಅತಿಯಾದ ಮಾತುಗಳು ಕೇಳಿ ಬರುತ್ತಿದ್ದವು. ಜೂ.ಎನ್‌ಟಿಆರ್ ಅವರನ್ನು ಮದುವೆಯಾಗುತ್ತಾರಾ? ಅಥವಾ ನೀವು ಅವರನ್ನು ಮದುವೆಯಾಗುತ್ತೀರಾ? ಅಭಿಮಾನಿಗಳು ನೂರಾರು ಪ್ರಶ್ನೆ ಕೇಳುತ್ತಿದ್ದರು. ಜನರು ನಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದರು. ಅವರು ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ನಾನು ಯಾವುದರಲ್ಲಿ ಸಾಮರ್ಥ್ಯ ಹೊಂದಿದ್ದೇನೂ ಅದರ ಬಗ್ಗೆ ಮಾತನಾಡಲಿಲ್ಲ. ಅವರ ಗಮನ ಸಮೀರಾ ರೆಡ್ಡಿಯಿಂದ ಸಮೀರಾ ಎನ್‌ಟಿಆರ್ ಕಡೆಗೆ ತಿರುಗಿತ್ತು' ಎಂದು ಕೋಪದಿಂದ ಹೇಳಿದ್ದರು.

  ತಮಿಳು ಸಿನಿಮಾಗಳತ್ತ ಹೋದೆ...

  ತಮಿಳು ಸಿನಿಮಾಗಳತ್ತ ಹೋದೆ...

  'ಆಗ ನಾನಿನ್ನೂ ಚಿಕ್ಕವಳು. ಕುಟುಂಬದವರಿಗೆ ಉತ್ತರ ನೀಡಬೇಕಿತ್ತು. ಅದಕ್ಕೆ ತಮಿಳು ಸಿನಿಮಾಗಳತ್ತ ಗಮನ ಹರಿಸಲು ನಿರ್ಧರಿಸಿದೆ. ಏಕೆಂದರೆ ನನಗೆ ನನ್ನದೇ ಆದ ಐಡೆಂಟಿಟಿ ಬೇಕಿತ್ತು. ಬಳಿಕ ನೋಡಿ ಏನಾಯ್ತು... 'ವಾರನಂ ಆಯಿರಂ' ಭರ್ಜರಿ ಹಿಟ್ ಆಯ್ತು. ಅಜಿತ್, ವಿಶಾಲ್ ಜತೆಗೆ ಸಿನಿಮಾ ಮಾಡಿದೆ. ಗೌತಮ್ ಮೆನನ್ ಜತೆಗೂ ಕೆಲಸ ಆರಂಭಿಸಿದೆ' ಎಂದು ತಿಳಿಸಿದ್ದರು.

  ಜೂ. ಎನ್‌ಟಿಆರ್‌ಗೂ ನೋವಾಗಿತ್ತು

  ಜೂ. ಎನ್‌ಟಿಆರ್‌ಗೂ ನೋವಾಗಿತ್ತು

  'ಈ ರೀತಿಯ ಸನ್ನಿವೇಶವನ್ನು ಈ ಹಿಂದೆ ಎಂದೂ ಎದುರಿಸಿರಲಿಲ್ಲ. ನಾನು ನೇರ ಮಾತಾಡುವವಳು. ಹೀಗಾಗಿ ಇದರಿಂದ ಅಚ್ಚರಿಯಾಗಿತ್ತು. ನನಗನ್ನಿಸುತ್ತದೆ, ಆಂಧ್ರ ಸಮುದಾಯವು ಇಂತಹ ಒಂದು ವಿಚಾರದಲ್ಲಿಯೇ ಮುಳುಗಿರುತ್ತದೆ. ನನಗೆ ಅದು ಬಹಳ ಬೇಸರ ಮೂಡಿಸಿತ್ತು. ನಾನು ಒಳ್ಳೆಯ ನಟಿ ಮತ್ತು ನೃತ್ಯಗಾರ್ತಿ. ಹಾಗೆಯೇ ಗುರುತಿಸಿಕೊಳ್ಳಲು ಬಯಸಿದ್ದೆ. ನಾನು ಜೂ. ಎನ್‌ಟಿಆರ್ ಅವರ ಪ್ರೇಮಾಸಕ್ತಿಯ ವಸ್ತು ಆಗಲು ಬಯಸಿರಲಿಲ್ಲ. ಈ ವಿಚಾರದಲ್ಲಿ ಜೂ. ಎನ್‌ಟಿಆರ್ ಅವರಿಗೂ ನೋವಾಗಿತ್ತು ಎನ್ನುವುದು ಗೊತ್ತು. ಏಕೆಂದರೆ ಅವರನ್ನೂ ಟಾರ್ಗೆಟ್ ಮಾಡಲಾಗಿತ್ತು' ಎಂದು ಹೇಳಿದ್ದರು.

  ಜೂ. ಎನ್‌ಟಿಆರ್ ಜತೆ ಮತ್ತೆ ಮಾತಾಡಿಲ್ಲ

  ಜೂ. ಎನ್‌ಟಿಆರ್ ಜತೆ ಮತ್ತೆ ಮಾತಾಡಿಲ್ಲ

  'ಅಶೋಕ ಚಿತ್ರದ ಬಳಿಕ ಅವರಿಂದ ನಾನು ಅಂತರ ಕಾಯ್ದುಕೊಂಡೆ. ಅವರ ಜತೆ ಮತ್ತೆ ಮಾತನಾಡಲೂ ಇಲ್ಲ. ಅದರಿಂದ ಮಾತ್ರವೇ ಈ ರೂಮರ್ ತಡೆಯಲು ಸಾಧ್ಯ ಎನ್ನುವುದು ನನಗೆ ಗೊತ್ತಿತ್ತು. ನನಗೆ ಅನೇಕ ಜನರು ಗೊತ್ತು. ನಾನು ಈಗಲೂ ಗೌತಮ್ ಮೆನನ್, ಸಂಜಯ್ ದತ್, ಅನಿಲ್ ಕಪೂರ್ ಅಥವಾ ನಾನು ಕೆಲಸ ಮಾಡಿದ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಬಲ್ಲೆ. ಆದರೆ ಎನ್‌ಟಿಆರ್ ವಿಚಾರ ತೀವ್ರ ನಾಟಕ ಶುರುಮಾಡಿತ್ತು. ಹೀಗಾಗಿ ನಾನು ಅದನ್ನು ನಿಲ್ಲಿಸಿಬಿಟ್ಟೆ' ಎಂದು ವಿವರಿಸಿದ್ದರು.

  English summary
  Throwback: Actress Sameera Reddy was forced to leave Telugu Cinema, because of the rumours about her relationship with Jr NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X