»   » ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್

ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ನಿಖಿಲ್ ಗೌಡಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ!

ಇದು ಬರೀ ಅಂತೆ ಕಂತೆಯ ಪುರಾಣವೋ, ಇಲ್ಲ ನಿಜವಾಗಿಯೂ ಪ್ರಯತ್ನ ನಡೆಯುತ್ತಿದೆಯೋ ಗೊತ್ತಿಲ್ಲ. ಆದ್ರೆ, ಗಾಂಧಿನಗರದಲ್ಲಿ ಓಡಾಡುತ್ತಿದ್ದ ಸುದ್ದಿಯನ್ನ ಇದ್ದ ಹಾಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೆಲ ದಿನಗಳ ಹಿಂದೆ ಪ್ರಕಟಿಸಿತ್ತು.

Tollywood Director Puri Jagannath to direct Nikhil Gowda's debut movie?

ಇದೀಗ ಇದೇ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿಖಿಲ್ ಗೌಡ ಹೀರೋ ಆಗುವುದಕ್ಕೆ ಸಜ್ಜಾಗುತ್ತಿರುವುದು ನಿಜ. ಆದ್ರೆ, ರಾಜಮೌಳಿ ಬದಲು ನಿಖಿಲ್ ಆರಂಗೇಟ್ರಂಗೆ ಸಾರಥ್ಯ ವಹಿಸುವವರು ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ .! [ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?]

ಹಾಗಂತ, ಗಾಂಧಿನಗರದಲ್ಲಿ ಹೊಸ ಗುಲ್ಲೆದ್ದಿದೆ. ಸದ್ಯಕ್ಕೆ ರಾಜಮೌಳಿ 'ಬಾಹುಬಲಿ' ಚಿತ್ರದಲ್ಲಿ ಬಿಜಿಯಿರುವ ಕಾರಣ, ಪುರಿ ಜಗನ್ನಾಥ್ ರನ್ನ ಕನ್ನಡಕ್ಕೆ ಮತ್ತೆ ಕರೆತರುವ ಬಗ್ಗೆ ನಿಖಿಲ್ ಗೌಡ ಪ್ಲಾನ್ ಮಾಡಿದ್ದಾರಂತೆ.

Tollywood Director Puri Jagannath to direct Nikhil Gowda's debut movie?

ಹಾಗ್ನೋಡಿದ್ರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚೊಚ್ಚಲ ಚಿತ್ರ 'ಅಪ್ಪು' ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಯುವರಾಜ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದರಿಂದ, ಪುರಿ ಜಗನ್ನಾಥ್ ಗೆ ಸ್ಯಾಂಡಲ್ ವುಡ್ ಹೊಸದೇನಲ್ಲ.

Tollywood Director Puri Jagannath to direct Nikhil Gowda's debut movie?

ಇಲ್ಲಿನ ಮಣ್ಣಿನ ಸೊಗಡು ಪುರಿ ಜಗನ್ನಾಥ್ ಗೆ ಚೆನ್ನಾಗಿ ಗೊತ್ತಿರುವುದರಿಂದ ತಮ್ಮ ಮೊದಲ ಚಿತ್ರಕ್ಕೆ ಅವರೇ ಸೂಕ್ತ ಅಂತ ಡಿಸೈಡ್ ಮಾಡಿದ್ದಾರಂತೆ ನಿಖಿಲ್. ಆದ್ರಿನ್ನೂ ಮಾತುಕತೆ ಹಂತದವರೆಗೆ ಹೋಗಿಲ್ಲ. ಮೊದಲ ಚಿತ್ರ ರೀಮೇಕೋ, ಇಲ್ಲ ಸ್ವಮೇಕೋ ಅನ್ನೋದು ನಿರ್ದೇಶಕರು ನಿಗಧಿಯಾದಮೇಲೆ ನಿರ್ಧಾರವಾಗಲಿದೆ.

ಅತ್ತ 'ಟೆಂಪರ್' ಆದ್ಮೇಲೆ ಒಳ್ಳೆ ಪ್ರಾಜೆಕ್ಟ್ ಗೆ ಕೈಹಾಕಬೇಕಂತಿರುವ ಪುರಿ, ನಿಖಿಲ್ ಆಸೆಯನ್ನ ನೆರವೇರಿಸೋಕೆ ಮನಸ್ಸು ಮಾಡಿದರೆ ಮತ್ತೆ ಬೆಂಗಳೂರಿನ ಕಡೆ ಮುಖ ಮಾಡುತ್ತಾರೆ.

English summary
H.D.Kumaraswamy's son Nikhil Gowda is all set to enter Sandalwood. According to the reports, Tollywood Director Puri Jagganath is considered for Nikhil's debut.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X