For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು, ತ್ರಿವಿಕ್ರಮ್ ಮಲ್ಟಿಸ್ಟಾರ್ ಚಿತ್ರ, ಮತ್ತೊಬ್ಬ ಹೀರೋ ಅವರೇನಾ?

  |

  ತೆಲುಗು ಇಂಡಸ್ಟ್ರಿಯಲ್ಲಿ ಮಲ್ಟಿಸ್ಟಾರ್ ಚಿತ್ರಗಳ ಟ್ರೆಂಡ್ ಮುಂದುವರಿಯುತ್ತದೆ. ಆ ಇಬ್ಬರು ನಟರು ಒಟ್ಟಿಗೆ ಸಿನಿಮಾ ಮಾಡುವುದು ಕಷ್ಟ ಎನ್ನುವ ಮಾತುಗಳಿಗೆ ಅಚ್ಚರಿ ಮೂಡುವಂತೆ ರಾಜಮೌಳಿ ಎನ್‌ಟಿಆರ್ ಹಾಗೂ ರಾಮ್ ಚರಣ್ ಜೊತೆ ಸಿನಿಮಾ ಮಾಡ್ತಿದ್ದಾರೆ.

  ಈ ಪ್ರಾಜೆಕ್ಟ್ ಘೋಷಣೆ ಆದ್ಮೇಲೆ ಇಂಡಸ್ಟ್ರಿಯ ಸ್ವರೂಪವೇ ಬದಲಾಗುತ್ತಿದೆ. ಇದೀಗ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ಮಲ್ಟಿಸ್ಟಾರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿರುವ ತ್ರಿವಿಕ್ರಮ್, ಈ ಚಿತ್ರದಲ್ಲಿ ಮತ್ತೊಬ್ಬ ಸೀನಿಯರ್ ನಟನನ್ನು ಕರೆತರುವ ಸಿದ್ಧತೆ ನಡೆಸಿದ್ದಾರೆ. ಮುಂದೆ ಓದಿ...

  ತ್ರಿವಿಕ್ರಮ್ ಜೊತೆ ಹೊಸ ಸಿನಿಮಾ

  ತ್ರಿವಿಕ್ರಮ್ ಜೊತೆ ಹೊಸ ಸಿನಿಮಾ

  ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಬಂದಿದ್ದ ಖಲೇಜಾ ಸಿನಿಮಾ ತೆರೆಕಂಡು 10 ವರ್ಷ ಆಗಿದೆ. ಈ ವಿಶೇಷ ಸಂದರ್ಭದಲ್ಲಿ ಈ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ. ಆತಡು, ಖಲೇಜಾ ಬಳಿಕ ಹಿಟ್ ಜೋಡಿಯೊಂದ ಮತ್ತೊಂದು ಸಿನಿಮಾ ಬರಲಿದೆ.

  ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿ ಎಂಟ್ರಿಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿ ಎಂಟ್ರಿ

  ಮಲ್ಟಿಸ್ಟಾರ್ ಚಿತ್ರಕ್ಕೆ ಸಿದ್ಧತೆ

  ಮಲ್ಟಿಸ್ಟಾರ್ ಚಿತ್ರಕ್ಕೆ ಸಿದ್ಧತೆ

  ಆತಡು, ಖಲೇಜಾ ಬಳಿಕ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿರುವ ತ್ರಿವಿಕ್ರಮ್ ಈ ಸಲ ಮಲ್ಟಿಸ್ಟಾರ್ ಚಿತ್ರದ ಸಿದ್ಧತೆ ನಡೆಸಿದ್ದಾರೆ. ಪ್ರಿನ್ಸ್ ಜೊತೆ ಮತ್ತೊಬ್ಬ ಸ್ಟಾರ್ ನಟನನ್ನು ಕರೆತರುವ ಯೋಜನೆ ಮಾಡಿದ್ದು, ಅದಕ್ಕಾಗಿ ತಯಾರಿ ಸಹ ಮಾಡಲಾಗಿದೆಯಂತೆ.

  ವೆಂಕಟೇಶ್ ಜೊತೆ ಮಹೇಶ್!

  ವೆಂಕಟೇಶ್ ಜೊತೆ ಮಹೇಶ್!

  ಮಹೇಶ್ ಬಾಬು ಜೊತೆ ಮಾಡಲಿರುವ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಸಹ ಇರಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಟಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಈ ಹಿಂದೆ 'ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚೆಟ್ಟು' ಚಿತ್ರದಲ್ಲಿ ಮಹೇಶ್ ಮತ್ತು ವೆಂಕಟೇಶ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಬಳಿಕ ಮತ್ತೆ ಆ ಜೋಡಿಯನ್ನು ತೆರೆಮೇಲೆ ತರಲು ನಿರ್ದೇಶಕರು ಪ್ಲಾನ್ ಮಾಡಿದ್ದಾರಂತೆ.

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!

  ಸಿನಿಮಾ ಲೇಟ್ ಆಗುತ್ತೆ

  ಸಿನಿಮಾ ಲೇಟ್ ಆಗುತ್ತೆ

  ಮಹೇಶ್ ಬಾಬು ಸದ್ಯ 'ಮೇಜರ್' ಮತ್ತು 'ಸರ್ಕಾರು ವಾರಿ ಪಾಟು' ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಕಡೆ ತ್ರಿವಿಕ್ರಮ್ ಶ್ರೀನಿವಾಸ್ ಜೂನಿಯರ್ ಎನ್‌ಟಿಆರ್ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ರಾಜಮೌಳಿ ಜೊತೆಯಲ್ಲೂ ಮಹೇಶ್ ಬಾಬು ಸಿನಿಮಾ ಮಾಡುವುದಾಗಿ ಹೇಳಿದ್ದರು. ಹೇಗೆ ಲೆಕ್ಕಾಚಾರ ಹಾಕಿದ್ರು ಇನ್ನೆರಡು ವರ್ಷ ಈ ಚಿತ್ರಕ್ಕಾಗಿ ಕಾಯಲೇಬೇಕು.

  English summary
  Director Trivikram srinivas planning to do multistar movie with Mahesh babu and Victory Venkatesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X