»   » ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?

ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ತೆಲುಗು, ತಮಿಳು ಹಾಗೂ ಮಲೆಯಾಳಂ ಸಿನಿ ಅಂಗಳದಲ್ಲಿ ಪ್ರಖ್ಯಾತಿ ಪಡೆದು ಇದೀಗ ಸ್ಯಾಂಡಲ್ ವುಡ್ ಅಂಗಳಕ್ಕೂ ಕಾಲಿಟ್ಟಿರುವ ತಾರೆ ಅಮಲಾ ಪೌಲ್ ದಾಂಪತ್ಯ ಜೀವನ ಮುರಿದು ಬೀಳುವ ಹಂತಕ್ಕೆ ಬಂದಿದೆ.

  ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ರವರ ಸಂಸಾರದಲ್ಲಿ ಬಿರುಕು ಮೂಡಿದೆ. [ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್]

  ಜೂನ್ 12, 2014 ರಂದು ನಿರ್ದೇಶಕ ಎ.ಎಲ್.ವಿಜಯ್ ಜೊತೆ ನಟಿ ಅಮಲಾ ಪೌಲ್ ವಿವಾಹ ಮಹೋತ್ಸವ ನಡೆದಿತ್ತು. [ಹಿಂದೂ ಸಂಪ್ರದಾಯದಂತೆ ಅಮಲಾ ಪೌಲ್ ಮದುವೆ]

  ಎರಡೇ ವರ್ಷಗಳಲ್ಲಿ ಸತಿ-ಪತಿ ಬೇರೆ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಅಂತ ವರದಿ ಆಗಿದೆ. ಇದಕ್ಕೆ ಅಸಲಿ ಕಾರಣವೇನು.? ಕಾರಣ ಯಾರು.? ಎಂಬುದನ್ನು ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  ವೈಮನಸ್ಯ ತಾರಕಕ್ಕೆ ಏರಿದೆ.!

  ನಿರ್ದೇಶಕ ಎ.ಎಲ್.ವಿಜಯ್ ಹಾಗೂ ನಟಿ ಅಮಲಾ ಪೌಲ್ ನಡುವೆ ವೈಮನಸ್ಯ ತಾರಕಕ್ಕೆ ಹೋಗಿದೆ ಎನ್ನುತ್ತಿವೆ ಮೂಲಗಳು. [ಕೊಚ್ಚಿಯಲ್ಲಿ ಸರಳವಾಗಿ ಅಮಲಾ ಪೌಲ್ ನಿಶ್ಚಿತಾರ್ಥ]

  ವಿಚ್ಛೇದನಕ್ಕೆ ಅರ್ಜಿ.?

  ಪರಸ್ಪರ ಒಪ್ಪಿಗೆ ಮೇರೆಗೆ ಎ.ಎಲ್.ವಿಜಯ್ ಹಾಗೂ ಅಮಲಾ ಪೌಲ್ ಸದ್ಯದಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಅಂತ ಖ್ಯಾತ ದಿನಪತ್ರಿಕೆಗಳು ವರದಿ ಮಾಡಿವೆ. [ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

  ಕಾರಣ ಏನು.?

  ಮದುವೆ ಆದ ಬಳಿಕ ಅಮಲಾ ಪೌಲ್ ನಟಿಸುವುದು ಪತಿ ಎ.ಎಲ್.ವಿಜಯ್ ರವರಿಗೆ ಇಷ್ಟ ಇರ್ಲಿಲ್ಲ. ಆದರೂ, ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳಿಗೆ ಅಮಲಾ ಪೌಲ್ ಗ್ರೀನ್ ಸಿಗ್ನಲ್ ನೀಡುತ್ತಲೇ ಬಂದಿದ್ದರಿಂದ ಇಬ್ಬರ ನಡುವಿನ ಮನಸ್ತಾಪ ಹೆಚ್ಚಾಗಿದೆ ಎನ್ನಲಾಗಿದೆ.

  ಅತ್ತೆ-ಮಾವನಿಗೂ ಇಷ್ಟ ಇರ್ಲಿಲ್ಲ.!

  ಅಮಲಾ ಪೌಲ್ ಬಣ್ಣ ಹಚ್ಚುವುದು ಎ.ಎಲ್.ವಿಜಯ್ ರವರ ತಂದೆ-ತಾಯಿಗೂ ಇಷ್ಟ ಇರ್ಲಿಲ್ಲ. ಎಲ್ಲರ ಮಾತನ್ನೂ ಮೀರಿ ತಮ್ಮ ಸಿನಿ ಜರ್ನಿ ಮುಂದುವರಿಸಿದ್ದರಿಂದ, ಅಮಲಾ ಪೌಲ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.

  ಅಪ್ಪ-ಅಮ್ಮನ ನಿರ್ಧಾರಕ್ಕೆ ಬದ್ಧ.!

  ದಾಂಪತ್ಯ ಜೀವನದಲ್ಲಿ ಎದ್ದಿರುವ ಬಿರುಗಾಳಿ ಬಗ್ಗೆ ಖ್ಯಾತ ದಿನ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಎ.ಎಲ್.ವಿಜಯ್, ''ಈ ವಿಚಾರದ ಬಗ್ಗೆ ನಾನು ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ. ನನ್ನ ತಂದೆ-ತಾಯಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ'' ಎಂದಿದ್ದಾರೆ.

  ಶಾಕಿಂಗ್ ನ್ಯೂಸ್.!

  ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ಇದ್ದಕ್ಕಿದ್ದಂತೆ ವಿಚ್ಛೇದನದ ಮಾತುಗಳನ್ನಾಡಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿ ಶಾಕಿಂಗ್ ನ್ಯೂಸ್.

  ಲವ್ ಸ್ಟೋರಿ ಶುರು ಆಗಿದ್ದು....

  ವಿಕ್ರಮ್ ನಾಯಕನಾಗಿ ಅಭಿನಯಿಸಿದ್ದ ಸೂಪರ್ ಡ್ಯೂಪರ್ ಹಿಟ್ 'ದೈವ ತಿರುಮಗಳ್' ಚಿತ್ರವನ್ನ ನೀವು ನೋಡಿರಬಹುದು. 'ದೈವ ತಿರುಮಗಳ್' ಚಿತ್ರಕ್ಕೆ ಎ.ಎಲ್.ವಿಜಯ್ ಆಕ್ಷನ್ ಕಟ್ ಹೇಳಿದ್ರೆ, ಅದೇ ಸಿನಿಮಾದಲ್ಲಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ರು.

  ಶೂಟಿಂಗ್ ಸಂದರ್ಭದಿಂದ ಲವ್ವಿ-ಡವ್ವಿ

  'ದೈವ ತಿರುಮಗಳ್' ಚಿತ್ರದ ಶೂಟಿಂಗ್ ಸಂದರ್ಭದಲ್ಲೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಿತು. ಅಲ್ಲಿಂದ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ 2014 ರಲ್ಲಿ ಮದುವೆ ಆದರು.

  ಹಿಂದು ಸಂಪ್ರದಾಯದಂತೆ ಮದುವೆ

  ಮಲ್ಲು ಬೆಡಗಿ ಅಮಲಾ ಪೌಲ್ ರವರ ನಿಶ್ಚಿತಾರ್ಥ ಕ್ರೈಸ್ತ ಸಂಪ್ರದಾಯದಂತೆ ನಡೆದರೆ, ವಿವಾಹ ಹಿಂದೂ ಸಂಪ್ರದಾಯದಂತೆ ಚೆನ್ನೈನಲ್ಲಿ ನಡೆಯಿತು.

  ಮದುವೆ ನಂತರ ಚೆನ್ನೈನಲ್ಲಿ ವಾಸ.!

  ಕೇರಳ ಮೂಲದ ಅಮಲಾ ಪೌಲ್, ಮದುವೆ ನಂತರ ಪತಿ ಎ.ಎಲ್.ವಿಜಯ್ ಜೊತೆ ಚೆನ್ನೈಗೆ ಶಿಫ್ಟ್ ಆಗಿದ್ದರು.

  ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಮದುವೆ

  ತಮಿಳು ಹಾಗೂ ಮಲೆಯಾಳಂನಲ್ಲಿ ಟಾಪ್ ಹೀರೋಯಿನ್ ಆಗಿರುವಾಲೇ ನಟಿ ಅಮಲಾ ಪೌಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

  ಮದುವೆ ನಂತರ ಅಭಿನಯ

  ಮದುವೆ ಆದ ನಂತರ ಅಮಲಾ ಪೌಲ್ ಮಲೆಯಾಳಂನ 'ಲೈಲಾ ಓ ಲೈಲಾ', 'ಮಿಲಿ', ತಮಿಳಿನ 'ಪಸಂಗಾ 2' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಕೈಯಲ್ಲಿ ಎರಡು ಚಿತ್ರಗಳಿವೆ.!

  ಕನ್ನಡದಲ್ಲಿ ಸುದೀಪ್ ಜೊತೆಗಿನ 'ಹೆಬ್ಬುಲಿ' ಸೇರಿದಂತೆ ತಮಿಳಿನ 'ವಾಡಾ ಚೆನ್ನೈ' ಚಿತ್ರದಲ್ಲಿ ಅಮಲಾ ಪೌಲ್ ಸದ್ಯಕ್ಕೆ ಅಭಿನಯಿಸುತ್ತಿದ್ದಾರೆ.

  English summary
  According to the reports, Actress Amala Paul and Director A.L.Vijay are headed for a split. The reason for their alleged split is that Amala continued her film career against Vijay and his parents wish.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more