For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಇಬ್ಬರು ಸ್ಟಾರ್ ಅತಿಥಿಗಳು?

  |

  ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ಮುಗಿತು. ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮದ ಸಿದ್ಧತೆ ಭರ್ಜರಿಯಾಗಿ ಸಾಗುತ್ತಿದೆ. ಇದು ಮುಗಿದ ತಕ್ಷಣ ಕೆಜಿಎಫ್ ಚಾಪ್ಟರ್ 2 ಪ್ರಚಾರ ಶುರು ಮಾಡಲಿದೆ ಹೊಂಬಾಳೆ ಫಿಲಂಸ್. ಅದಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ.

  KGF 2 ಬೆನ್ನಿಗೆ ನಿಂತ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ಸ್..? | Filmibeat Kannada

  ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಪ್ರಕಟಣೆ ಸಹ ಮಾಡಲಾಗಿದೆ. ಮೊದಲ ಭಾಗಕ್ಕಿಂತ ಚಾಪ್ಟರ್ 2ರ ಮೇಲೆ ಹೆಚ್ಚಿನ ನಿರೀಕ್ಷೆ, ಬಿಸಿನೆಸ್ ಲೆಕ್ಕಾಚಾರ ಜೋರಾಗಿದೆ. ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗು ಮಾರ್ಕೆಟ್‌ನಲ್ಲಿ ಕೆಜಿಎಫ್ ಹೆಚ್ಚು ಸದ್ದು ಮಾಡ್ತಿದೆಯಂತೆ. ಸದ್ಯ ಟಾಲಿವುಡ್ ಮಾಯಾನಗರಿಯಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಟಾಲಿವುಡ್‌ನ ಇಬ್ಬರು ಸೂಪರ್ ಸ್ಟಾರ್‌ಗಳು ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರಂತೆ. ಯಾರದು? ಮುಂದೆ ಓದಿ...

  ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಪೂರ್ವ ತಯಾರಿ?

  ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಪೂರ್ವ ತಯಾರಿ?

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಜುಲೈ 16ಕ್ಕೆ ರಿಲೀಸ್ ಆಗಲಿದೆ. ಬಿಡುಗಡೆಗೆ ಇನ್ನು ಮೂರ್ನಾಲ್ಕು ತಿಂಗಳು ಬಾಕಿಯಿರುವಾಗಲೇ ಪ್ರಿ-ರಿಲೀಸ್ ಕಾರ್ಯಕ್ರಮದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಈ ಶೋಗೆ ಯಾರನ್ನು ಅತಿಥಿಗಳನ್ನಾಗಿ ಆಹ್ವಾನಿಸಬಹುದು ಎಂಬ ನಿರೀಕ್ಷೆ ಈಗಲೇ ಹೆಚ್ಚಾಗುತ್ತಿದೆ.

  ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಮಾಳವಿಕಾ ಅವಿನಾಶ್ ಹೇಳಿದ್ದೇನು?

  ಕಳೆದ ಬಾರಿ ರಾಜಮೌಳಿ ಬಂದಿದ್ದರು

  ಕಳೆದ ಬಾರಿ ರಾಜಮೌಳಿ ಬಂದಿದ್ದರು

  ಕಳೆದ ಬಾರಿ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ತೆಲುಗು ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರಿಲೀಸ್‌ಗೂ ಮುಂಚೆ ಆಂಧ್ರದಲ್ಲಿ ಕೆಜಿಎಫ್ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿತ್ತು. ವಾರಾಹಿ ಚಲನಚಿತ್ರ ಸಂಸ್ಥೆ ಸಿನಿಮಾ ವಿತರಣೆ ಮಾಡಿದ್ದರು.

  ಈ ಸಲ ಇಬ್ಬರು ಸೂಪರ್ ಸ್ಟಾರ್?

  ಈ ಸಲ ಇಬ್ಬರು ಸೂಪರ್ ಸ್ಟಾರ್?

  ಈ ಸಲ ಕೆಜಿಎಫ್ ಚಾಪ್ಟರ್ 2 ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ತೆಲುಗಿನ ಇಬ್ಬರು ಸೂಪರ್ ಸ್ಟಾರ್‌ಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ತಯಾರಿ ನಡೆದಿದೆಯಂತೆ. ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಭಾಸ್ ಮತ್ತು ಜೂನಿಯರ್ ಎನ್ ಟಿ ಆರ್ ಹೆಸರು ಬಲವಾಗಿ ಕೇಳಿ ಬರುತ್ತಿದೆ.

  ಹಳೆ ವಿತರಕ ಔಟ್, ದಾಖಲೆ ಬೆಲೆಗೆ ಕೆಜಿಎಫ್ ಚಾಪ್ಟರ್ 2 ತೆಲುಗು ಮಾರಾಟ?

  ಸಲಾರ್ ಚಿತ್ರದಲ್ಲಿ ಪ್ರಭಾಸ್?

  ಸಲಾರ್ ಚಿತ್ರದಲ್ಲಿ ಪ್ರಭಾಸ್?

  ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿರುವ ಹಾಗೂ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಸಲಾರ್ ಮುಹೂರ್ತಕ್ಕೆ ನಟ ಯಶ್ ಅತಿಥಿಯಾಗಿ ಹೋಗಿದ್ದರು. ಇದೇ ಸ್ನೇಹದ ಮೆರೆಗೆ ಪ್ರಭಾಸ್ ಕೆಜಿಎಫ್ ಚಾಪ್ಟರ್ 2 ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾಗಬಹುದು ಎಂದು ಹೇಳಲಾಗುತ್ತಿದೆ.

  ಬಾಕ್ಸ್ ಆಫೀಸ್ ಲೆಕ್ಕಾಚಾರ ಹೇಗಿದೆ?

  ಬಾಕ್ಸ್ ಆಫೀಸ್ ಲೆಕ್ಕಾಚಾರ ಹೇಗಿದೆ?

  ಕೆಜಿಎಫ್ ಚಾಪ್ಟರ್ 1 ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೆಜಿಎಫ್ ರಿಲೀಸ್ ಆಗಿತ್ತು. ಈಗ ಚಾಪ್ಟರ್ 2 ಜುಲೈ 16ಕ್ಕೆ ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಈ ಸಲ ಕೆಜಿಎಫ್ ಗಳಿಕೆ ಎರಡು ಪಟ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಬಾಹುಹಲಿ, 2.0 ಅಂತಹ ಚಿತ್ರಗಳ ದಾಖಲೆ ಮುರಿಯಬಹುದು ಎಂಬ ಲೆಕ್ಕಾಚಾರ ಮಾಡಲಾಗುತ್ತದೆ.

  English summary
  According to Tollywood Latest Buzz, Two Big Superstar will be Participate In KGF Chapter Pre Release Event?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X