For Quick Alerts
  ALLOW NOTIFICATIONS  
  For Daily Alerts

  ಪವಿತ್ರಾ ಲೋಕೇಶ್‌ ಜೊತೆ ಮೈಸೂರಿನ ಹೋಟೆಲ್‌ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?

  |

  ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರ ಸಂಬಂಧದ ಈಗ ಗುಟ್ಟಾಗಿ ಉಳಿದಿಲ್ಲ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಬೀದಿಗಿಳಿದು ಹೋರಾಟ ಶುರು ಮಾಡಿದ ಮೇಲೆ ಮೂವರ ಕಿತ್ತಾಟ ಜಗತ್‌ಜಾಹೀರಾಗಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾರೆಂದು ರಮ್ಯಾ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇಬ್ಬರೂ ಮೈಸೂರಿನ ಹೋಟೆಲ್‌ನಲ್ಲಿ ರಮ್ಯಾ ರಘುಪತಿ ಕೈಯಲ್ಲೇ ಸಿಕ್ಕಿಬಿದ್ದಿದ್ದರು.

  ಮೈಸೂರಿನ ಹೋಟೆಲ್‌ವೊಂದರಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಗಿದ್ದರು. ಆ ವಿಷಯ ತಿಳಿದ ರಮ್ಯಾ ರಘುಪತಿ ಅಲ್ಲಿಗೆ ಹೋಗಿ ರಂಪಾಟ ಮಾಡಿದ್ದರು. ಹೊಟೇಲ್ ರೂಮಿನ ಮುಂದೆ ಹೈಡ್ರಾಮಾವನ್ನೇ ಸೃಷ್ಟಿಸಿದ್ದರು. ಈ ಘಟನೆ ಬಗ್ಗೆ ಟಾಲಿವುಡ್‌ನಲ್ಲಿ ಹೊಸ ಚರ್ಚೆ ಆರಂಭ ಆಗಿದೆ.

  ರಮ್ಯಾ ಕೈಗೆ ಸಿಕ್ಕಿಬಿದ್ದ ಮೇಲೆ ನರೇಶ್ -ಪವಿತ್ರಾ ಲೋಕೇಶ್ ತೆಗೆದುಕೊಂಡ ಖಡಕ್ ನಿರ್ಧಾರವೇನು?ರಮ್ಯಾ ಕೈಗೆ ಸಿಕ್ಕಿಬಿದ್ದ ಮೇಲೆ ನರೇಶ್ -ಪವಿತ್ರಾ ಲೋಕೇಶ್ ತೆಗೆದುಕೊಂಡ ಖಡಕ್ ನಿರ್ಧಾರವೇನು?

  ಮಾಧ್ಯಮಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಈ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದೆಲ್ಲಾ ತೆಲುಗು ನಟ ನರೇಶ್ ಪ್ಲಾನ್ ಆಗಿತ್ತು ಎಂದು ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ. ಅಷ್ಟಕ್ಕೂ ಟಾಲಿವುಡ್‌ ಮಂದಿ ಕೊಟ್ಟಿರುವ ಆ ಟ್ವಿಸ್ಟ್ ಏನು? ಎಂದು ತಿಳಿಯಲು ಮುಂದೆ ಓದಿ.

  ನರೇಶ್‌ರಿಂದಲೇ ರಮ್ಯಾಗೆ ಮಾಹಿತಿ?

  ನರೇಶ್‌ರಿಂದಲೇ ರಮ್ಯಾಗೆ ಮಾಹಿತಿ?

  ಮೈಸೂರಿನ ಹೋಟೆಲ್ ಮುಂದೆ ಹೈಡ್ರಾಮ ಸೃಷ್ಟಿಯಾಗಿದ್ದಕ್ಕೆ ಕಾರಣ ತೆಲುಗು ನಟ ನರೇಶ್ ಎಂದು ಮಾಧ್ಯಮಗಳು ವರದಿ ಮಾಡಿವೆ. ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ನರೇಶ್ ಉದ್ದೇಶಪೂರ್ವಕವಾಗಿಯೇ ಇಬ್ಬರೂ ಮೈಸೂರಿನ ಹೋಟೆಲ್‌ನಲ್ಲಿ ಇರುವುದಾಗಿ ಹೇಳಿದ್ದರು. ಮೂರನೇ ಪತ್ನಿ ರಮ್ಯಾ ಅಲ್ಲಿಗೆ ಬಂದು ಪವಿತ್ರಾ ಲೋಕೇಶ್ ಜೊತೆ ಜಗಳ ಆಡುವುದು ಅವರ ಪ್ಲ್ಯಾನ್ ಆಗಿತ್ತು ಎಂದು ವರದಿ ಮಾಡಿವೆ.

  ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?

  ನರೇಶ್ ಈ ಪ್ಲ್ಯಾನ್ ಮಾಡಿದ್ದೇಕೆ?

  ನರೇಶ್ ಈ ಪ್ಲ್ಯಾನ್ ಮಾಡಿದ್ದೇಕೆ?

  ಮೈಸೂರಿನ ಹೋಟೆಲ್‌ಗೆ ಬಂದು ಪತ್ನಿ ರಮ್ಯಾ ರಘುಪತಿ ರಂಪಾಟ ಮಾಡಿದರೆ. ಆ ವಿಷಯ ಎಲ್ಲರಿಗೂ ತಿಳಿಯುತ್ತೆ. ನರೇಶ್‌ರಿಂದ ರಮ್ಯಾ ರಘುಪತಿ ಬಹಳ ದಿನಗಳಿಂದ ದೂರವಿದ್ದರೂ, ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಈ ರಂಪಾಟ ಬಯಲಾದರೆ, ರಮ್ಯಾರಿಂದ ಬಹುಬೇಗನೇ ವಿಚ್ಛೇದನ ಸಿಗುತ್ತೆ ಎಂದು ನರೇಶ್ ಈ ರೀತಿ ಮಾಡಿದ್ದಾರೆ ಎಂದು ತೆಲುಗಿನಲ್ಲಿ ಮಾಧ್ಯಮಗಳು ವರದಿ ಮಾಡಿವೆ.

  ಅಪರಾಧವಲ್ಲ ಎಂಬ ಅರಿವಿತ್ತು?

  ಅಪರಾಧವಲ್ಲ ಎಂಬ ಅರಿವಿತ್ತು?

  ಇತ್ತೀಚೆಗೆ ಕಾನೂನಿನಲ್ಲಿ ಬದಲಾವಣೆಯಾಗಿದ್ದರಿಂದ ಇಬ್ಬರೂ ಸ್ವ ಇಚ್ಚೆಯಿಂದ ಒಟ್ಟಿಗೆ ಇರುವುದು ಅಪರಾಧವಲ್ಲ ಎಂಬುದು ನರೇಶ್ ಗೊತ್ತಿತ್ತು. ಹೀಗಾಗಿಯೇ ನರೇಶ್, ನಟಿ ಪವಿತ್ರಾ ಲೋಕೇಶ್ ಅವರ ಜೊತೆಯಲ್ಲಿ ಇದ್ದರು. ಅಲ್ಲದೆ ಈ ವಿಷಯವನ್ನು ಪರೋಕ್ಷವಾಗಿ ಮೂರನೇ ಪತ್ನಿ ರಮ್ಯಾ ರಘುಪತಿಯವರಿಗೂ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.

  ಮಾಧ್ಯಮಗಳಿಂದ ಇಬ್ಬರೂ ದೂರ

  ಮಾಧ್ಯಮಗಳಿಂದ ಇಬ್ಬರೂ ದೂರ

  ಮೈಸೂರಿ ಹೋಟೆಲ್ ಘಟನೆಯ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮಾಧ್ಯಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇಂತಹದ್ದೊಂದು ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ರಮ್ಯಾ ರಘುಪತಿಯನ್ನು ಕಾನೂನಾತ್ಮಕವಾಗಿ ಎದುರಿಸೋಣ ಎಂದು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಕಾರಣಕ್ಕೆ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

  English summary
  V K Naresh Pavitra Lokesh Issue: Telugu Actor Intentionally Informed Wife Ramya About Mysore Stay, Know More.
  Wednesday, July 13, 2022, 17:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X