Just In
Don't Miss!
- News
ಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆ
- Sports
ದ.ಆಫ್ರಿಕಾ ಮಹಿಳೆಯರ ವಿರುದ್ಧದ ಸರಣಿಗೆ ಭಾರತದ ಮಹಿಳಾ ತಂಡ ಪ್ರಕಟ
- Automobiles
ನಮ್ಮ ಬೆಂಗಳೂರಿನಲ್ಲಿ ಸಿಟ್ರನ್ ಇಂಡಿಯಾ ಮೊದಲ ಶೋರೂಂಗೆ ಭರ್ಜರಿ ಚಾಲನೆ
- Finance
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 31 ಸ್ಮಾರ್ಟ್ಫೋನ್ ಬೆಲೆ ಕಡಿಮೆಯಾಗಿದೆ!
- Lifestyle
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರರಂಗಕ್ಕೆ ವಿಜಯ್ ಪುತ್ರನ ಎಂಟ್ರಿ: ಹಿಟ್ ಚಿತ್ರದ ರೀಮೇಕ್‌ನಲ್ಲಿ ನಟನೆ?
ತಮಿಳು ಸೂಪರ್ ಸ್ಟಾರ್ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಮಾಸ್ಟರ್ ಸಕ್ಸಸ್ ಬಳಿಕ ವಿಜಯ್ ನೆಲ್ಸನ್ ದಿಲೀಪ್ ಕುಮಾರ್ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ.
ಸದ್ಯಕ್ಕೆ 'ವಿಜಯ್ 65' ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದು, ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಹೆಸರು ಚರ್ಚೆಯಲ್ಲಿದೆ. ಇದೀಗ, ವಿಜಯ್ ಪುತ್ರ ಚಿತ್ರರಂಗಕ್ಕೆ ಪ್ರವೇಶ ಮಾಡ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತೀಚಿಗಷ್ಟೆ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿರುವ ತೆಲುಗು ಚಿತ್ರದ ರೀಮೇಕ್‌ನಲ್ಲಿ ವಿಜಯ್ ಪುತ್ರ ನಟಿಸುವ ಸಾಧ್ಯತೆ ಇದೆ. ಯಾವುದು ಆ ಚಿತ್ರ? ಮುಂದೆ ಓದಿ....
ಸರ್ಕಾರಕ್ಕೆ ಹೆದರಿ ಸಿನಿಮಾದ ದೃಶ್ಯಕ್ಕೆ ಕತ್ತರಿ ಹಾಕಿದರೇ ನಟ ವಿಜಯ್!?

ಉಪ್ಪೇನಾ ರೀಮೇಕ್‌ನಲ್ಲಿ ವಿಜಯ್ ಪುತ್ರ?
ತೆಲುಗಿನಲ್ಲಿ ಕಳೆದ ವಾರವಷ್ಟೇ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಉಪ್ಪೇನಾ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡುವ ಯೋಜನೆ ನಡೆಯುತ್ತಿದೆಯಂತೆ. ಸದ್ಯದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಉಪ್ಪೇನಾ ತಮಿಳು ರೀಮೇಕ್‌ನಲ್ಲಿ ವಿಜಯ್ ಪುತ್ರ ಜೇಸನ್ ಸಂಜಯ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯ್ ಸೇತುಪತಿ ನಟನೆ
ಸುಕುಮಾರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದ ಬಚ್ಚಿ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವೈಷ್ಣವ್ ತೇಜ್, ಕೃತಿ ಶೆಟ್ಟಿ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ರೀಮೇಕ್ ಹಕ್ಕು ಪಡೆಯಲು ವಿಜಯ್ ಮುಂದಾಗಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.
ತಮಿಳು ನಟ ವಿಜಯ್ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ?

ವಿಜಯ್ ಮುಂದಿನ ಚಿತ್ರಕ್ಕೆ ಮಗ ನಿರ್ದೇಶಕ
ಮತ್ತೊಂದು ಕಡೆ ವಿಜಯ್ ನಟಿಸಲಿರುವ ಮುಂದಿನ ಚಿತ್ರಕ್ಕೆ ಮಗ ಜೇಸನ್ ಸಂಜಯ್ ನಿರ್ದೇಶನ ಮಾಡಲು ತಯಾರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ 65ನೇ ಚಿತ್ರ ಮುಗಿದ ಬಳಿಕ ಮಗನ ಚಿತ್ರದಲ್ಲಿ ವಿಜಯ್ ನಟಿಸುವ ಲೆಕ್ಕಾಚಾರ ಇದೆಯಂತೆ. ಆದ್ರೆ, ಈ ಸುದ್ದಿ ಅಧಿಕೃತವಾಗಿಲ್ಲ.

ತರಬೇತಿ ಪಡೆದು ಬಂದಿರುವ ಜೇಸನ್ ಸಂಜಯ್
ವಿಜಯ್ ಪುತ್ರ ಜೇಸನ್ ಸಂಜಯ್ ಕೆನಡಾದಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಸಿನಿಮಾ ಕಲೆ, ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಈಗ ವಿಜಯ್ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಲು ತೀರ್ಮಾನಿಸಿರುವ ಸಂಜಯ್ ನಂತರ ಸ್ವತಂತ್ರವಾಗಿ ನಿರ್ದೇಶನ ಮಾಡುವ ಕನಸು ಕಂಡಿದ್ದಾರೆ.