Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯ್‌ಗಾಗಿ ಹಾಲಿವುಡ್ ಕತೆ ಹೊತ್ತು ತರುತ್ತಿರುವ 'ವಿಕ್ರಂ' ನಿರ್ದೇಶಕ
ನಾಲ್ಕು ಫೈಟ್, ಒಂದು ಇಂಟ್ರೊಡಕ್ಷನ್ ಹಾಡು, ಒಂದು ಐಟಂ ಹಾಡು, ಎರಡು ಡ್ಯುಯೆಟ್, ನಾಲ್ಕು ಪಂಚ್ ಡೈಲಾಗ್, ಮೂರು ಹಾಸ್ಯ ದೃಶ್ಯ ಒಬ್ಬ ಸ್ಟಾರ್ ನಟ, ಒಬ್ಬ ಯುವ ನಟಿ ಇದೇ ಹಿಟ್ ಸಿನಿಮಾದ ಫಾರ್ಮುಲ ಎಂಬ ಸಂಪ್ರದಾಯ ಮುಗಿಯುತ್ತಾ ಬಂದಿದೆ. ಈಗ ಸ್ಟಾರ್ ನಟರೂ ಸಹ ಕಂಟೆಂಟ್ ಕಡೆ ಗಮನ ಹರಿಸುತ್ತಿದ್ದಾರೆ.
ತಮಿಳಿನ ಸ್ಟಾರ್ ನಟ ವಿಜಯ್ ಸಹ ಇದಕ್ಕೆ ಹೊರತಲ್ಲ. ವಿಜಯ್‌ರ ಈ ಹಿಂದಿನ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಆದ ಬಳಿಕವಂತೂ ಅವರು ನಿರ್ದೇಶಕ ಹಾಗೂ ಕತೆ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದಾರೆ.
'ಲೈಗರ್'
ಹೀನಾಯ
ಸೋಲಿನ
ಬಳಿಕ
ಹೊಸ
ಸಿನಿಮಾಗೆ
ವಿಜಯ್
ದೇವರಕೊಂಡ
ಗ್ರೀನ್
ಸಿಗ್ನಲ್?
ಇದೀಗ ಅವರು 'ವಾರಿಸು' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಇದು ಮಾಸ್ ಎಂಟರ್ಟೈನರ್ ಎನ್ನಲಾಗುತ್ತಿದೆ. ಆದರೆ ಅದರ ಬಳಿಕ ನಟಿಸುತ್ತಿರುವ ಸಿನಿಮಾ ಕಂಟೆಂಟ್ ಜೊತೆಗೆ ಮಾಸ್ ಅಂಶಗಳನ್ನೂ ಒಳಗೊಂಡಿರಲಿದೆ. ಇದೇ ಮಾದರಿಯ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಲೋಕೇಶ್ ಕನಗರಾಜ್ ಅವರು ವಿಜಯ್‌ರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಹಾಲಿವುಡ್ ಸಿನಿಮಾದಿಂದ ಪ್ರೇರಣೆ
ವಿಜಯ್‌ರ ಹೊಸ ಸಿನಿಮಾಕ್ಕೆ ಕತೆಯನ್ನು ಹಾಲಿವುಡ್‌ನಿಂದ ಹೊತ್ತು ತರುತ್ತಿದ್ದಾರೆ ಲೋಕೇಶ್ ಕನಗರಾಜ್. ಹಾಲಿವುಡ್ ಸಿನಿಮಾಗಳ ದೊಡ್ಡ ಪ್ರಭಾವ ಲೋಕೇಶ್ ಮೇಲಿರುವುದು ಅವರ ಈ ಹಿಂದಿನ ಸಿನಿಮಾಗಳಿಂದಲೂ ತಿಳಿದುಕೊಳ್ಳಬಹುದು. ಆದರೆ ಈಗ ನೇರವಾಗಿ ಅಲ್ಲಿನ ಸಿನಿಮಾ ಒಂದನ್ನೇ ಎರವಲು ಪಡೆದು ತಮಿಳು ಪ್ರೇಕ್ಷಕರಿಗೆ ರುಚಿಸುವಂತೆ ತಿದ್ದಿ ತೆರೆಗೆ ತರಲು ಹೊರಟಿದ್ದಾರೆ.

ವಿಜಯ್ ದ್ವಿಪಾತ್ರದಲ್ಲಿ!?
2005 ರಲ್ಲಿ ಬಿಡುಗಡೆ ಆಗಿದ್ದ ಹಿಟ್ ಹಾಲಿವುಡ್ ಸಿನಿಮಾ 'ಹಿಸ್ಟರಿ ಆಫ್ ವೈಯೊಲೆನ್ಸ್' ಸಿನಿಮಾದ ಕತೆಯನ್ನು ಆಧರಿಸಿ ಲೋಕೇಶ್ ಕನಗರಾಜ್ ಚಿತ್ರಕತೆ ಬರೆದಿದ್ದು, ವಿಜಯ್‌ರ ಇಮೇಜು ಹಾಗೂ ತಮಿಳು ಪ್ರೇಕ್ಷಕರು ಒಪ್ಪುವಂತೆ ಇಲ್ಲಿನ ಪರಿಸರಕ್ಕೆ ತಕ್ಕುದಾಗಿ ಹೊಂದಿಕೊಳ್ಳುವಂತೆ ಚಿತ್ರಕತೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಲೋಕೇಶ್ ಯೂನಿವರ್ಸ್ ಹೊರತಾದ ಸಿನಿಮಾ
ಲೋಕೇಶ್ ಕನಗರಾಜ್ ಈಗಾಗಲೇ ವಿಜಯ್‌ಗಾಗಿ 'ಮಾಸ್ಟರ್' ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಅದರ ಬಳಿಕ ನಿರ್ದೇಶನ ಮಾಡಿರುವ 'ವಿಕ್ರಂ' ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಗಿದೆ. 'ವಿಕ್ರಂ 2' ಸಿನಿಮಾವನ್ನು ಸಹ ಲೋಕೇಶ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಆ ಸಿನಿಮಾದಲ್ಲಿ ನಟ ಸೂರ್ಯ ಮುಖ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ವಿಜಯ್‌ಗಾಗಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲೋಕೇಶ್.

ಭಾರಿ ಬಜೆಟ್‌ನ ಸಿನಿಮಾ
ವಿಜಯ್‌ರ 67 ನೇ ಸಿನಿಮಾ ಇದಾಗಿರಲಿದ್ದು, ಈ ಸಿನಿಮಾವನ್ನು 250 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾಕ್ಕಾಗಿ ವಿಜಯ್‌ಗೆ 125 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಇನ್ನು ನಿರ್ದೇಶಕ ಲೋಕೇಶ್ ಕನಗರಾಜ್‌ಗೆ 20 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಇದೀಗ ವಿಜಯ್ 'ವಾರಿಸು' ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ತೆಲುಗಿನ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ.