Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ 2'ಗೆ ಎಂಟ್ರಿಕೊಟ್ಟ ವಿಜಯ್ ಸೇತುಪತಿ!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಇನ್ನು ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 322.6 ಕೋಟಿ ಗಳಿಸಿದೆ ಎನ್ನಲಾಗಿದೆ.
ಪುಷ್ಪ ಭಾಗ ಒಂದು ರಿಲೀಸ್ ಆದ ಬಳಿಕ, ಈ ಚಿತ್ರದ ಮುಂದುವರೆದ ಭಾಗಕ್ಕಗಾಗಿ ಜನ ಕಾಯುತ್ತಿದ್ದಾರೆ. ಸದ್ಯ 'ಪುಷ್ಪ 2' ಚಿತ್ರದ ಚಿತ್ರೀಕರಣವೂ ಬಹುತೇಕ ಮುಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಸಿನಿಮಾ ತಂಡ ನಿರತವಾಗಿದೆ.
ಪ್ರಶಾಂತ್
ನೀಲ್
ಜೊತೆ
ಪ್ರಭಾಸ್,
ನಾನಿ,
ಅಮಿತಾಬ್
ಬಚ್ಚನ್
ಕಾಣಿಸಿಕೊಂಡಿದ್ದೇಕೆ!
'ಪುಷ್ಪ' ಸಿನಿಮಾದಲ್ಲಿ ಪ್ರತೀ ಪಾತ್ರವು ಹೈಲೈಟ್ ಆಗಿತ್ತು. ನಾಯಕ, ನಾಯಕಿ ಜೊತೆಗೆ, ವಿಲನ್‌ಗಳ ಪಾತ್ರಗಳು ಕೂಡ ಸೂಪರ್ ಎನಿಸಿಕೊಂಡಿವೆ. ಪುಷ್ಪ ರಾಜ್‌ಗೆ ಎದುರಾಗುವ ಪ್ರತೀ ಖಳನಾಯಕರೂ ಕೂಡ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಪುಷ್ಪ 2ನಲ್ಲಿ ವಿಲನ್‌ಗಳ ಅಬ್ಬರ!
ಪುಷ್ಪದ ಚಿತ್ರದ ಕ್ಲೈಮ್ಯಾಕ್ಸ್ ಮತ್ತೊಂದು ಯುದ್ಧದ ಆರಂಭವಗಾಗಿತ್ತು. ಕ್ಲೈ ಮ್ಯಾಕ್ಸ್‌ನಲ್ಲಿ ಚಿತ್ರದ ನಾಯಕ ನಟ ಕೂಡ ಇದನ್ನೇ ಹೇಳುತ್ತಾರೆ. ಇನ್ನು ಪುಷ್ಪ ರಾಜ್ ಶತ್ರುಗಳು ಎಲ್ಲರೂ ಭಾಗ ಒಂದರಲ್ಲಿ ಅಂತ್ಯಗೊಂಡಿಲ್ಲ. ಎಲ್ಲರೂ ಪುಷ್ಪ ರಾಜ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಇವರು ಮಾತ್ರವೇ ಅಲ್ಲ, ಪುಷ್ಪ 2 ಸಿನಿಮಾದಲ್ಲಿ ಮತ್ತಷ್ಟು ಕಲಾವಿದರು ಖಳನಾಯಕರಾಗಿ ಅಬ್ಬರಿಸಲಿದ್ದಾರೆ. ಈ ಸಾಲೊಗೆ ಈಗ ವಿಯಜ್ ಸೇತುಪತಿ ಸೇರಿದ್ದಾರೆ ಎನ್ನಲಾಗುತ್ತಿದೆ.
ಸಲ್ಮಾನ್
ಖಾನ್ಗೆ
'ಊ
ಅಂಟಾವಾ..'
ಸಾಂಗ್
ಇಷ್ಟವಂತೆ:
ಸಮಂತಾ
ರಿಯಾಕ್ಷನ್
ಏನು?

ಅಲ್ಲು ಅರ್ಜುನ್ ಎದುರು ವಿಜಯ್ ಸೇತುಪತಿ!
'ಪುಷ್ಪ 2' ತಾರ ಬಳಗದ ಬಗ್ಗೆ ಈಗ ಟಾಲಿವುಡ್‌ನಲ್ಲಿ ಮತ್ತೊಂದು ದಾಖಲೆ ಹಬ್ಬಿದೆ. ಪುಷ್ಪ 2 ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಖಳನಾಯಕನಾಗಿ ಅಬ್ಬರಿಸುತ್ತಾರ ಅಥವಾ ಬೇರಿ ರೀತಿಯ ಪಾತ್ರದಲ್ಲಿ ನಟಿಸುತ್ತಾರ ಎನ್ನುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.

ಹಿರೋ ಜೊತೆಗೆ ವಿಲನ್‌ಗಳ ಅಬ್ಬರ!
ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಚಿತ್ರದಲ್ಲಿ ಫಹದ್ ಫಾಸಿಲ್, ಬನ್ವರ್ ಸಿಂಗ್ ಶೇಖಾವತ್ ಪಾತ್ರ ಮಾಡಿದರೆ, ಧನಂಜಯ್, ಸುನಿಲ್, ಷನ್ಮುಖ್, ಅಜಯ್ ಘೋಶ್, ಅನುಸುಯಾ ಭರಧ್ವಜ್ ಸೇರಿದಂತೆ, ಹಲವರು ಪುಷ್ಪ ಭಾಗ ಒಂದರಲ್ಲಿ ನಟಿಸಿದ್ದಾರೆ. ಹಾಗಾಗಿ ಪುಷ್ಪ 2 ಚಿತ್ರದಲ್ಲಿ ಯಾರು ಹೇಗೆ ಅಬ್ಬರಿಸಲಿದ್ದಾರೆ ಎನ್ನುವುದನ್ನು ನೋಡಕೇಕಿದೆ.
ನರೇಶ್-ಪವಿತ್ರಾ
ಲೋಕೇಶ್
ಒಟ್ಟಿಗಿದ್ದಾರೆ:
'ನರೇಶ್
ಒಬ್ಬ
ಹೆಣ್ಣುಬಾಕ'
3ನೇ
ಪತ್ನಿ
ರಮ್ಯಾ
ಸ್ಟೋಟಕ
ಹೇಳಿಕೆ!

ಕಮಲ್ ಹಾಸನ್ ಜೊತೆ ವಿಜಯ್ ಸೇತುಪತಿ!
ನಟ ವಿಜಯ್ ಸೇತುಪತಿ ನಾನಾ ಪಾತ್ರಗಳಲ್ಲಿ ನಟಿದ್ದಾರೆ. ಒಂದೊಂದು ಸಿನಿಮಾದಲ್ಲಿ ಒಂದೊಂದು ರೀತಿಯಾಗಿ ಕಾಣಿಸಿಕೊಳ್ಳುತ್ತಾರೆ ವಿಜಯ್ ಸೇತುಪತಿ. ಇತ್ತೀಚೆಗೆ ಬಂದ ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಅಬ್ಬರಿಸಿದ್ದರು.