For Quick Alerts
  ALLOW NOTIFICATIONS  
  For Daily Alerts

  'ವಾರಿಸು'ಗೆ ಹುಬ್ಬೇರಿಸುವ ಸಂಭಾವನೆ ಪಡೆದ ವಿಜಯ್, ಭಾರತದಲ್ಲಿ ಇನ್ಯಾರೂ ಪಡೆದಿಲ್ಲ ಇಷ್ಟು ಮೊತ್ತ!

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಟಾರ್ ನಟರ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡಲು ಬಾಕ್ಸ್ ಆಫೀಸ್‌ನಲ್ಲಿ ಪರಸ್ಪರ ಸ್ಪರ್ಧೆ ಮಾಡುವುದು ಸಾಮಾನ್ಯ, ಅಂತೆಯೇ ಸ್ಟಾರ್ ನಟರು ಸಂಭಾವನೆ ವಿಷಯದಲ್ಲಿ ಪರಸ್ಪರ ಪೈಪೋಟಿಗೆ ಬಿದ್ದಂತಿದ್ದಾರೆ.

  ಅದರಲ್ಲಿಯೂ ದಕ್ಷಿಣ ಭಾರತದ ನಟರಂತೂ ಭಾರಿ ದುಬಾರಿ ಸಂಭಾವನೆ ಪಡೆಯುವುದರಲ್ಲಿ ಒಬ್ಬರ ಮೇಲೋಬ್ಬರು ಪೈಪೋಟಿ ನಡೆಸುತ್ತಿದ್ದಾರೆ.

  ಆದರೆ ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಶ್ರೇಯ ಮಾತ್ರ ತಮಿಳಿನ ಸ್ಟಾರ್ ನಟ ವಿಜಯ್‌ ರದ್ದು. ವಿಜಯ್ ಪಡೆವಷ್ಟು ಸಂಭಾವನೆಯನ್ನು ಭಾರತದ ಇನ್ನಾವ ನಟನೂ ಪಡೆಯುವುದಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್ ಸಹ ಅಷ್ಟು ಸಂಭಾವನೆ ಪಡೆಯುವುದಿಲ್ಲ. ಇದೀಗ ಬಿಡುಗಡೆ ಆಗಿರುವ 'ವಾರಿಸು' ಸಿನಿಮಾಕ್ಕೆ ವಿಜಯ್‌ರ ಸಂಭಾವನೆ ಇನ್ನೂ ಸ್ವಲ್ಪ ಹೆಚ್ಚಳ ಆಗಿದೆ!

  'ವಾರಿಸು' ಸಿನಿಮಾಕ್ಕೆ ವಿಜಯ್‌ ಪಡೆದ ಸಂಭಾವನೆ ಎಷ್ಟು?

  'ವಾರಿಸು' ಸಿನಿಮಾಕ್ಕೆ ವಿಜಯ್‌ ಪಡೆದ ಸಂಭಾವನೆ ಎಷ್ಟು?

  ವಿಜಯ್ ನಟನೆಯ 'ವಾರಿಸು' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಉತ್ತಮ ಗಳಿಕೆಯನ್ನೇ ಕಂಡಿದೆ. ಸಿನಿಮಾವನ್ನು ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಿದ್ದು, ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 150 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರೆ. ಭಾರತದಲ್ಲಿ ಈ ವರೆಗೆ ಇನ್ನಾವ ನಟನೂ ಇಷ್ಟು ದೊಡ್ಡ ಸಂಭಾವನೆಯನ್ನು ಸಿನಿಮಾ ಒಂದಕ್ಕೆ ಪಡೆದಿಲ್ಲ. ಶಾರುಖ್ ಖಾನ್ ಸಹ ಇಲ್ಲ.

  ರಜನೀಕಾಂತ್ ಅನ್ನು ಮೀರಿಸಿದ ವಿಜಯ್

  ರಜನೀಕಾಂತ್ ಅನ್ನು ಮೀರಿಸಿದ ವಿಜಯ್

  ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿ ಈ ಮೊದಲು ರಜನೀಕಾಂತ್ ಬಳಿ ಇತ್ತು. ಅವರು ರೋಬೋ ಸಿನಿಮಾಕ್ಕಾಗಿ 100 ಕೋಟಿ ಸಂಭಾವನೆ ಪಡೆದಿದ್ದರು. ಆ ಬಳಿಕ ಇತ್ತೀಚೆಗೆ ವಿಜಯ್‌ ಹಾಗೂ ಪ್ರಭಾಸ್ ಅವರುಗಳು ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ವಿಜಯ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಖ್ಯಾತಿಯನ್ನು ಹೊತ್ತು ಮುಂದೆ ಸಾಗುತ್ತಿದ್ದಾರೆ. ಸಲ್ಮಾನ್, ಶಾರುಖ್, ಪ್ರಭಾಸ್ ಅವರುಗಳೆಲ್ಲ ವಿಜಯ್‌ರ ನಂತರವೇ!

  ಖುಷಿಯಿಂದ ಕೊಡುವ ನಿರ್ಮಾಪಕರು

  ಖುಷಿಯಿಂದ ಕೊಡುವ ನಿರ್ಮಾಪಕರು

  ವಿಜಯ್‌ ತಮ್ಮ ಹಿಂದಿನ ಸಿನಿಮಾ 'ಬೀಸ್ಟ್'ಗೆ ನೂರು ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ವಿಜಯ್‌ರ ಸಿನಿಮಾ ಒಂದೇ ವಾರದಲ್ಲಿ ನೂರರಿಂದ ಇನ್ನೂರು ಕೋಟಿ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್‌ನಲ್ಲಿ ಮಾಡುತ್ತದೆ ಹೀಗಿರುವಾಗ ಅವರು ನೂರು ಅಥವಾ ನೂರೈವತ್ತು ಕೋಟಿ ಸಂಭಾವನೆ ಪಡೆಯುವುದು ದೊಡ್ಡ ವಿಷವೇನಲ್ಲ ಎನ್ನಿಸುತ್ತದೆ. ನಿರ್ಮಾಪಕರು ಸಹ ಖುಷಿಯಿಂದಲೇ ವಿಜಯ್‌ಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡುತ್ತಾರೆ.

  ಲೋಕೇಶ್ ಜೊತೆ ಮುಂದಿನ ಸಿನಿಮಾ

  ಲೋಕೇಶ್ ಜೊತೆ ಮುಂದಿನ ಸಿನಿಮಾ

  ವಿಜಯ್‌ರ 'ವಾರಿಸು' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಕೌಟುಂಬಿಕ ಸಿನಿಮಾ ಆಗಿರುವ ಇದು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾದ ಹಿಂದೆ ಬಿಡುಗಡೆ ಆಗಿದ್ದ ವಿಜಯ್‌ರ 'ಬೀಸ್ಟ್' ಸಿನಿಮಾ ಫ್ಲಾಪ್ ಆಗಿತ್ತು. ಹಾಗಿದ್ದರೂ ಸಹ ಸುಮಾರು 150 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ಇದೀಗ ವಿಜಯ್, ಲೋಕೇಶ್ ಕನಕರಾಜ್ ಜೊತೆ ಸಿನಿಮಾ ಮಾಡಲು ಸಹಿ ಮಾಡಿದ್ದು, ಈ ಸಿನಿಮಾ ಪಕ್ಕಾ ಹಿಟ್ ಎನ್ನಲಾಗುತ್ತಿದೆ.

  English summary
  Actor Vijay took huge amount as remuneration for Varisu movie. He charges 150 crore rs for this movie.
  Thursday, January 12, 2023, 8:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X