»   » ಬೆಳ್ಳಿಪರದೆಗೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ

ಬೆಳ್ಳಿಪರದೆಗೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ

By: ಉದಯರವಿ
Subscribe to Filmibeat Kannada
Vinay Raj
ವರನಟ, ಗಾನಗಂಧರ್ವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಕುಟುಂಬದ ಮತ್ತೊಂದು ಕುಡಿ ಬೆಳ್ಳಿಪರದೆಗೆ ಅಂಬೆಗಾಲಿಡಲಿದೆ. ರಾಜ್ ಕುಟುಂಬದ ವಾರಸ್ದಾರರಾಗಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮಿಂಚುತ್ತಿದ್ದಾರೆ.

ಇನ್ನು ಮುರಳಿ, ವಿಜಯ ರಾಘವೇಂದ್ರ ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಬೆಳ್ಳಿತೆರೆಗೆ ರಾಜ್ ಕುಟುಂಬದ ಮೂರನೆ ತಲೆಮಾರಿನ ಆಗಮನವಾಗುತ್ತಿದೆ. ರಾಘಣ್ಣ ಅವರ ಪುತ್ರ ವಿನಯ್ ಬೆಳ್ಳಿತೆರೆ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಕಳೆದೆರಡು ವರ್ಷಗಳಿಂದ ವಿನಯ್ ಬೆಳ್ಳಿತೆರೆಗೆ ಬರುವ ಸುದ್ದಿ ಚಾಲ್ತಿಯಲ್ಲಿದೆ. ಕಳೆದ ವರ್ಷವೇ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ವಿನಯ್ ಚಿತ್ರ ಲಾಂಚ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಠುಸ್ ಆಯಿತು.

ವಿನಯ್ ಅಭಿನಯ ತರಬೇತಿ ಪಡೆಯುತ್ತಿದ್ದಾರೆ. ಕಾಲ ಕೂಡಿಬಂದಾಗ ಅವರ ಎಂಟ್ರಿ ಎನ್ನುತ್ತಿದ್ದರು ರಾಘವೇಂದ್ರ ರಾಜ್ ಕುಮಾರ್. ಬಹುಶಃ ಈಗ ಕಾಲಕೂಡಿ ಬಂದಿದೆ ಅನ್ನಿಸುತ್ತದೆ. ಏಪ್ರಿಲ್ 24, 2013ರಂದೇ ವಿನಯ್ ಹೊಸ ಚಿತ್ರ ಘೋಷಣೆಯಾಗಲಿದೆ ಎನ್ನಲಾಗಿದೆ.

ಈ ಬಗ್ಗೆ ರಾಜ್ ಕುಟುಂಬ ಸದ್ಯಕ್ಕೆ ಏನನ್ನೂ ಹೇಳುತ್ತಿಲ್ಲ. ರಾಘವೇಂದ್ರ ರಾಜ್ ಕುಮಾರ್ ಸಹ ಮೌನಕ್ಕೆ ಶರಣಾಗಿದ್ದಾರೆ. ಆದರೆ ವಿನಯ್ ಎಂಟ್ರಿ ಸುದ್ದಿ ಮಾತ್ರ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕನ್ನಡ ಚಿತ್ರರಂಗ ಸಹ ಹೊಸ ಮುಖದ ನಿರೀಕ್ಷೆಯಲ್ಲಿದೆ.

ಅಭಿನಯಕ್ಕೆ ಅಡಿಯಿಡುತ್ತಿರುವ ವಿನಯ್ ರಾಜ್ ಅವರೇನು ಕೈಕಟ್ಟಿ ಕುಳಿತಿಲ್ಲ. ಫೈಟಿಂಗ್, ಡ್ಯಾನ್ಸಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ. ನಾಯಕ ನಟನಿಗೆ ಬೇಕಾದ ಮೈಕಟ್ಟು ಅವರಿಗಿದೆ. ಡಾ.ರಾಜ್ ಅಭಿಮಾನಿಗಳಿಗಳಿಗೂ ವಿನಯ್ ಎಂಟ್ರಿ ಬಗ್ಗೆ ಕುತೂಹಲ ಇದ್ದೇ ಇದೆ. ಮೇಲಿಂದ ತಾತ ಮತ್ತುರಾಜ್‌ರ ಆಶೀರ್ವಾದ ಧಾರಾಳವಾಗಿದೆ.

English summary
Kannada Matinee Idol late Dr. Rajkumar's Grandson Vinay Raghavendra Rajkumar (Vinay Raj) soon making an entry into the Sandalwood. Vinay Raj is son of Raghavendra Rajkumar is entering Kannada films soon, May be he enters sandalwood on Dr Raj's birthday 24th April 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada