»   » 'ಬಾಯ್ಸ್' ಜೊತೆ 'ಗೋವಾ'ದಲ್ಲಿ ಏನಾಯ್ತು ಗೌಡ್ರೇ?

'ಬಾಯ್ಸ್' ಜೊತೆ 'ಗೋವಾ'ದಲ್ಲಿ ಏನಾಯ್ತು ಗೌಡ್ರೇ?

By: ಜೀವನರಸಿಕ
Subscribe to Filmibeat Kannada

'ಗೋವಾ' ಅನ್ನೋ ಸಿನಿಮಾ ರೈಟ್ಸ್ ನ್ನು ಪರಭಾಷೆಯಿಂದ ತಂದು ಕನ್ನಡದಲ್ಲಿ ರೀಮೇಕ್ ಮಾಡೋಕೆ ಹೊರಟಾಗ 'ಕೆಂಪೇಗೌಡ' ಖ್ಯಾತಿಯ ಶಂಕರೇಗೌಡರು ಒಂದು ಚಾಲೆಂಜ್ ಮಾಡಿದ್ರು. ವರದನಾಯಕ ಲೇಟಾಯ್ತು. ಆದ್ರೆ 'ಗೋವಾ' ಸಿನಿಮಾ ಹಾಗಾಗಲ್ಲ. ಮೂರು ತಿಂಗಳಲ್ಲಿ ಸಿನಿಮಾ ರೆಡಿಮಾಡಿಸ್ತೀನಿ ಆಗಸ್ಟ್ ನಲ್ಲೇ ತೆರೆಗೂ ತರ್ತೀನಿ ಅಂತ ಸವಾಲ್ ಹಾಕಿದ್ರು.

ಆದರೆ ಈಗ 'ಗೋವಾ' ಕಥೆ ಅಂದುಕೊಂಡ ಹಾಗಿಲ್ಲ. ಆಗಸ್ಟ್ ಇರ್ಲಿ ವರ್ಷವೇ ಮುಗೀತಾ ಇದ್ರು ಚಿತ್ರದ ಒಂದೂ ಪೋಸ್ಟರ್ ಕಾಣಿಸ್ತಿಲ್ಲ. ಅಂದಹಾಗೆ 'ಗೋವಾ' ಸಿನಿಮಾ ಮೂರು ಡಿಫರೆಂಟ್ ಡಿಫರೆಂಟ್ ಕ್ಯಾರೆಕ್ಟರ್ ಗಳ ಕಥೆ. ಇಲ್ಲಿ ಕೋಮಲ್, ಶ್ರೀಕಿ, ತರುಣ್ ಚಂದ್ರ ಮುಖ್ಯಪಾತ್ರಗಳಲ್ಲಿದ್ದಾರೆ. ಚಿತ್ರದ ಶೂಟಿಂಗ್ ನ ಹೆಚ್ಚಿನ ಭಾಗ ಮುಗಿದಿದೆ. ['ಗೋವಾ' ತೀರದ ಜಿಂಗ್ ಚಾಕ್ ಬಿಕಿನಿ ಚಿತ್ರಗಳು]


ಆದರೆ 'ಕೆಂಪೆಗೌಡ್ರು' ಮಾತ್ರ ಘರ್ಷಣೆ ರಿಲೀಸ್ ಗೆ ರೆಡಿಯಾಗಿದ್ದಾರೆ. ಏತನ್ಮಧ್ಯೆ ಶಂಕರೇಗೌಡರ ಮತ್ತೊಂದು ಚಿತ್ರ 'ಬಾಯ್ಸ್' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗ್ತಿದೆ. ಇತ್ತೀಚೆಗೆ 'ಬಾಯ್ಸ್' ಸಿನಿಮಾಗೆ ಅಂಡರ್ ವಾಟರ್ ಫೈಟ್ ಮಾಡಿಸಿದ್ದಾರೆ. ಆದರೆ 'ಗೋವಾ'ದ ಚಾಲೆಂಜ್ ಏನಾಯ್ತು ಕೆಂಪೇಗೌಡ್ರೆ?

ಇದೆಲ್ಲದರ ನಡುವೆ ಸಿಸಿಎಲ್ ಬರ್ತಿದೆ. ಕಿಚ್ಚ ಅಂಡ್ ಟೀಂ ಜೊತೆ ಯಾವಾಗಲೂ ಇರೋ 'ಕೆಂಪೇಗೌಡ್ರು' ಸಿಸಿಎಲ್ ಬಂದರೆ ಕ್ರಿಕೆಟ್ ನಲ್ಲಿ ಬಿಸಿಯಾಗ್ತಾರೆ. ಸಿನಿಮಾ ಮಾಡಿ ರಿಲೀಸ್ ಮಾಡ್ತೀನಿ ಅಂದ ನಿರ್ಮಾಪಕರು ಹೀಗಾ ಕೈಕೊಡೋದು ಅಂತ ಮಾತಾಡ್ತಿದೆ ಗಾಂಧಿನಗರ.

English summary
Why Kannada movie 'Goa' getting delayed? The movie is a remake of Tamil movie 'Goa'. It is based on a gang of friends who go to Goa to celebrate their holiday, get stuck in a perilous situation but emerge unscathed.
Please Wait while comments are loading...