»   » ದರ್ಶನ್ ಎಪಿಸೋಡಲ್ಲಿ ವಿಜಿ ಅಂದು ಏನಂದಿದ್ದರು?

ದರ್ಶನ್ ಎಪಿಸೋಡಲ್ಲಿ ವಿಜಿ ಅಂದು ಏನಂದಿದ್ದರು?

Posted By:
Subscribe to Filmibeat Kannada
What Vijay had said in Darshan episode
"ಯಾರ ಸಂಸಾರದಲ್ಲಿ ಪ್ರಾಬ್ಲಂ ಇರಲ್ಲ ಹೇಳಿ? ಸುಮ್ಮನೆ ದರ್ಶನ್ ಅವರ ಮೇಲೆ ಗೂಬೆ ಕೂರಿಸುವುದನ್ನು ಬಿಡಿ. ಸೆಲೆಬ್ರಿಟಿಗಳ ಜೀವನದಲ್ಲಿ ಏನಾದರೂ ಸಂಭವಿಸಿದರೆ ರೋಚಕವಾಗಿ ತೋರಿಸುವುದನ್ನು ಬಿಡಿ. ದರ್ಶನ್ ಪತ್ನಿ ಹೇಳಿಕೆ ಕೇಳಿದ ನಂತರ ಸುದ್ದಿ ಪ್ರಸಾರ ಮಾಡಿ. ಸಂಸಾರ ಸರಿಯಾಗಿರುವುದು ಮುಖ್ಯ."

ಹೀಗೆಂದು ಅಂದು ಹೇಳಿದ್ದವರು 'ದುನಿಯಾ' ಖ್ಯಾತಿಯ ವಿಜಿ ಅಲಿಯಾಸ್ 'ಬ್ಲಾಕ್ ಕೋಬ್ರಾ' ವಿಜಯ್. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದಾಗ, ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳಿಗೆ ದುನಿಯಾ ವಿಜಯ್ ಕಿವಿಮಾತು ಹೇಳಿದ್ದರು. ಸಂಸಾರ ಸರಿಯಾಗಿ ನಡೆಯಲು ಅವಕಾಶ ಮಾಡಿಕೊಡಿ ಎಂದು ನುಡಿದಿದ್ದರು.

ಇಷ್ಟು ಮಾತ್ರವಲ್ಲ, 'ದಯವಿಟ್ಟು ಸಂಸಾರದ ಬಿರುಕು ಸರಿಮಾಡಿಕೊಳ್ಳಿ. ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸಿ' ಎಂದು ಕೂಡ ಅವರು ದರ್ಶನ್ ದಂಪತಿಗಳಿಗೆ ಕಿವಿಮಾತು ಹೇಳಿದ್ದರು. ಆ ಸಂದರ್ಭದಲ್ಲಿ ದರ್ಶನ್ ಅವರನ್ನು, ಹೆಂಡತಿಯನ್ನು ಹೊಡೆದ ಕಳಂಕದಿಂದ ಮುಕ್ತವಾಗಿಸಲು ಭಾರೀ ಓಡಾಡಿದ್ದರು ಮತ್ತು ಮಧ್ಯಸ್ಥಿಕೆ ವಹಿಸಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರನ್ನು ಒಗ್ಗೂಡಿಸುವಲ್ಲಿ ಕೂಡ ಪ್ರಮುಖ ಪಾತ್ರವಹಿಸಿದ್ದರು.

ವಿಪರ್ಯಾಸವೆಂದರೆ, ಈಗ ಅವರ ಸಂಸಾರದಲ್ಲಿಯೇ ಬಿರುಕು ಕಂಡಿದೆ. ಸೆಲೆಬ್ರಿಟಿಗಳಾಗಿದ್ದರೇನು ಸಂಸಾರದಲ್ಲಿ ಒಡಕು ಕಾಣಿಸುವುದು ಸಹಜವೆ. ವಿಜಯ್ ಮತ್ತು ಅವರೊಂದಿಗೆ ಹದಿನಾಲ್ಕು ವರ್ಷಗಳ ಕಾಲ ಸಂಸಾರ ತೂಗಿಸಿಕೊಂಡು ಹೋಗಿ, ಮೂರು ಮಕ್ಕಳನ್ನು ಕಾಣಿಕೆಯಾಗಿ ನೀಡಿದ ನಾಗರತ್ನ ಅವರ ಸಂಸಾರದಲ್ಲಿ ಸಾಮರಸ್ಯಕ್ಕೆ ಕೊರತೆ ಉಂಟಾಗಿದೆ.

ನಾಗರತ್ನ ಅವರು ತಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ತಮ್ಮ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವಿಜಯ್ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲ ಸ್ನೇಹಿತರ ಪ್ರಕಾರ, ನಾಗರತ್ನ ಅವರು ವಿಜಯ್ ಸಂಸಾರ ಚೆನ್ನಾಗೇ ಇತ್ತು, ಅವರ ಪತ್ನಿ ವಿಜಯ್ ಅವರ ತಂದೆತಾಯಿಯನ್ನು ಚೆನ್ನಾಗೂ ನೋಡಿಕೊಳ್ಳುತ್ತಿದ್ದರು. ಮಕ್ಕಳನ್ನು ಮತ್ತು ಇತರ ಜನರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ, ವಿಜಯ್ ಮತ್ತು ನಾಗರತ್ನ ಅವರ ದಾಂಪತ್ಯದಲ್ಲಿ ಒಡಕು ಕಾಣಿಸಿಕೊಂಡಿದ್ದು ಯಾಕೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಈ ವಿಚ್ಛೇದನಕ್ಕೆ ನಿಜವಾದ ಕಾರಣವಾದರೂ ಯಾವುದು? ಯಾವ 'ವ್ಯಕ್ತಿ' ಈ ಬಿರುಕಿನ ಹಿಂದಿದ್ದಾರೆ? ಯಾವ ಕಾರಣಕ್ಕಾಗಿ ವಿಜಯ್ ಈ ನಿರ್ಧಾರಕ್ಕೆ ಬಂದರು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

English summary
When actor Darshan was in news for hitting his wife Vijayalakshmi, Duniya Vijay had played an important role bridging the gap between the couple. But, irony is that, Vijay's marriage itself is on the rocks. Vijay has applied for divorce against his wife Nagaratna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada