»   » ಯಾರ ಪೊಗರಿನಿಂದ ಧ್ರುವ ಭರ್ಜರಿಗೆ ಕತ್ತರಿ ಬಿತ್ತುರಿ?

ಯಾರ ಪೊಗರಿನಿಂದ ಧ್ರುವ ಭರ್ಜರಿಗೆ ಕತ್ತರಿ ಬಿತ್ತುರಿ?

By: ಜೀವನರಸಿಕ
Subscribe to Filmibeat Kannada

ನನ್ಮಗಂದ್ ಬೇಕಿತ್ತಾ ಇದೆಲ್ಲಾ ಬಿಲ್ಡಪ್ಪು? ಅಂತ ಹುಚ್ಚ ವೆಂಕಟ್ ಸ್ಟೈಲಲ್ಲಿ ದೊಡ್ಮನೆಯಿಂದ ಡೈಲಾಗ್ಗಳು ಕೇಳಿ ಬರ್ತಿದ್ರೂ ಅಚ್ಚರಿಯಿಲ್ಲ. ಯಾಕ್ ಗೊತ್ತಾ ಅಷ್ಟೊಂದು ಭರ್ಜರಿಯಾಗಿ ಶುರುವಾದ ಸಿನಿಮಾ ಧ್ರುವ ಸರ್ಜಾ ಅಭಿನಯದ ಭರ್ಜರಿ.

ಸಿನಿಮಾದ ಮುಹೂರ್ತ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಮುಹೂರ್ತಕ್ಕೆ ಸೌತ್ ಇಂಡಿಯನ್ ಆಕ್ಷನ್ ಕಿಂಗ್, ಧ್ರುವಾ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ, ಕ್ರೇಜಿ ಸ್ಟಾರ್ ರವಿಚಂದ್ರನ್, ಚಿರಂಜೀವಿ ಸರ್ಜಾ, ಅಷ್ಟೇ ಯಾಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬಂದಿದ್ರು.[ಬ್ರಹ್ಮಚಾರಿ ಹನುಮಂತನಿಗೆ ರೋಮ್ಯಾನ್ಸ್ ಮಾಡೋ ಯೋಗ!]

ಆದ್ರೆ ಈ ಭರ್ಜರಿ ಕಥೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಪ್ಲ್ಯಾನ್ ಮಾಡಿದ್ದ ಜೇಮ್ಸ್ ಸಿನಿಮಾದ್ದೂ ಅಂತ ಮೂಲಗಳಿಂದ ಬಂದಿದ್ದ ವರದಿ. ಪುನೀತ್ಗೆ ಮಾಡಬೇಕಿದ್ದ ಸಿನಿಮಾವನ್ನೇ ನಿರ್ದೇಶಕ ಚೇತನ್ ಅವರು ಧ್ರುವ ಸರ್ಜಾಗೆ ಮಾಡೋಕೆ ಹೊರಟಿದ್ಯಾಕೆ? ಈಗೇನಾಗಿದೆ ಅನ್ನೋ ಇಂಟರೆಸ್ಟಿಂಗ್ ಕಹಾನಿ ಮುಂದಿದೆ... ಓದ್ತಾ ಹೋಗಿ.

ಹ್ಯಾಟ್ರಿಕ್ ಹೀರೋ

ಭರ್ಜರಿ ಅನ್ನೋ ಸಿನಿಮಾ ಫಸ್ಟ್ ಲುಕ್, ಫೋಟೋಶೂಟ್ ಟೀಸರ್ಗಳಿಂದ ಸಾಕಷ್ಟು ಸುದ್ದಿ ಮಾಡಿತ್ತು. ಶಿವಣ್ಣನ ನಂತ್ರ ತನ್ನನ್ನ ಹ್ಯಾಟ್ರಿಕ್ ಹೀರೋ ಆಗಿಸೋ ಸಿನಿಮಾ ಅನ್ನೋದು ಸ್ವತಃ ಧ್ರುವ ಮನಸ್ಸಲ್ಲಿದ್ದದ್ದರಿಂದ ಅದ್ಧೂರಿ, ಬಹಾದ್ದೂರ್ ನಂತ್ರ ಭರ್ಜರಿಗೆ ಭರ್ಜರಿ ಮಹತ್ವ ಬಂದಿತ್ತು. ['ಬಹದ್ದೂರ್' ಗಂಡು ಧ್ರುವ 'ಭರ್ಜರಿ' ಸೌಂಡು]

ಭರ್ಜರಿ ಡೌಟು ರೀ

ಈಗ ಭರ್ಜರಿ ಡೌಟು ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ಹೌದಾ ಅಂತ ಧ್ರುವ ಸರ್ಜಾರನ್ನ ಕೇಳಿದ್ರೆ ಧ್ರುವ ಹೂಂ ಅಂತಾನೂ ಇಲ್ಲ, ಊಹೂಂ ಅಂತಾನೂ ಇಲ್ಲ. ಸೋ ಸದ್ಯಕ್ಕೆ ಡೌಟ್ ಖುಲ್ಲಂ ಖುಲ್ಲಾ ಸುದ್ದಿಯಾಗಿದೆ.

ರೆಡಿ ಇದೆ ಪೊಗರು

ಭರ್ಜರಿಯಷ್ಟೇ ಪವರ್ಫುಲ್ ಕಥೆ ಪೊಗರು ಬೇಗ ಶುರುವಾಗುತ್ತೆ ಅನ್ನೋದು ಸದ್ಯದ ಮಾಹಿತಿ. ಇನ್ನು ಪೊಗರು ಚಿತ್ರ ನಿರ್ದೇಶನ ಮಾಡ್ತಿರೋದು ರನ್ನ ನಿರ್ದೇಶಕ ನಂದಕಿಶೋರ್. ನಂದಕಿಶೋರ್ ಬಗ್ಗೆ ಧ್ರುವಗೆ ಅಪಾರ ನಂಬಿಕೆ ಇದ್ದು ನವೆಂಬರ್ನಲ್ಲಿ ಪೊಗರು ಶುರುವಾಗಲಿದೆಯಂತೆ.

ಟೈಗರ್ ಮುಗೀತಾ ಇದೆ

ಇನ್ನೊಂದು ಕಡೆ ಇದಕ್ಕೆ ಇಂಬು ಕೊಡುವಂತೆ ನಂದ ಕಿಶೋರ್ ನಿರ್ದೇಶನದ 'ಜಾಲಿಡೇಸ್' ಪ್ರದೀಪ್ ಅಭಿನಯದ ಟೈಗರ್ ಕೂಡ ಕೊನೆಯ ಶೆಡ್ಯೂಲ್ನತ್ತ ಹೊರಳ್ತಿದೆ. ನವಂಬರ್ ವೇಳೆಯಲ್ಲಿ ಕುಂಬಳಕಾಯಿ ಒಡೆಯಲಿರೋ ಟೈಗರ್ನಿಂದ ನೇರವಾಗಿ ನಂದಕಿಶೋರ್ ಧ್ರುವ ಪೊಗರಿಗೆ ಶಿಫ್ಟ್ ಆಗಲಿದ್ದಾರೆ.

ಯಾರಿಗೆ ಭರ್ಜರಿ ಪೊಗರು

ಭರ್ಜರಿ ನಿರ್ದೇಶಕ ಚೇತನ್ ಮೊದಲ ಸಿನಿಮಾ ಬಹಾದ್ದೂರ್ನಲ್ಲೇ ನಿರ್ಮಾಪಕರ ಜೊತೆ ಎಗರಾಡಿ ಗಲಾಟೆ ಮಾಡಿಕೊಂಡಿದ್ರು ಒದೆಯನ್ನೂ ತಿಂದು ಆಸ್ಪತ್ರೆ ಸೇರಿದ್ರು ಅನ್ನೋ ಸುದ್ದಿಯಿತ್ತು. ಈಗ ಧ್ರುವ ಸರ್ಜಾ ಜೊತೆ ಭಿನ್ನಾಭಿಪ್ರಾಯ ಉಂಟಾಗಿದೆ ಅಂತಿದೆ ಗಾಳಿ ಸುದ್ದಿ ಮೂಲ.

ಧ್ರುವ ಸರ್ಜಾ ಕಿರಿಕ್

ಧ್ರುವ ಸರ್ಜಾ ಸಿನಿಮಾದ ಕಥೆ ಮತ್ತು ಸ್ಕ್ರಿಪ್ಟ್ ವಿಚಾರದಲ್ಲಿ ಭರ್ಜರಿ ಅಷ್ಟೊಂದು ಭರ್ಜರಿಯಾಗಿಲ್ಲ, ಬದಲಾಯಿಸಬೇಕು ಅಂತ ಪಟ್ಟು ಹಿಡಿದಿದ್ದೇ ಇದಕ್ಕೆ ಕಾರಣ ಅನ್ನೋದು ಬಲ್ಲ ಮೂಲಗಳ ಮತ್ತೊಂದು ಮಾಹಿತಿ.

ಮೊದಲೇ ಗೊತ್ತಿರಲಿಲ್ವ...

ಕಥೆಯನ್ನ ಚಿತ್ರಕಥೆಯನ್ನ ಮೊದಲೇ ಕೇಳಿ ಒಪ್ಪಿಕೊಳ್ಳುವಷ್ಟು ಬುದ್ದಿವಂತಿಕೆಯನ್ನೂ ಧ್ರುವ ತೋರಿಸಲಿಲ್ವಾ. ಅಥ್ವಾ ಚೇತನ್ ಹೇಳೋ ಮಾಸ್ ಡೈಲಾಗ್ಗಳು ಟೈಟಲ್ಗೆ ಫಿದಾ ಆಗಿ ಕಥೇನೂ ಚೆನ್ನಾಗಿರುತ್ತೆ ಅಂತ ಒಪ್ಪಿಕೊಂಡ್ರಾ ಅಂದ್ರೆ.. ಹಾಗಾಗಿರೋದು ಡೌಟು. ಧ್ರುವ ಸರ್ಜಾ ಪ್ರತೀ ಕಥೆಯನ್ನೂ ಓಕೆ ಮಾಡೋದೇ ಅರ್ಜುನ್ ಸರ್ಜಾ ಅಂದಮೇಲೆ ಭರ್ಜರಿ ಟೆಸ್ಟೆಡ್ ಓಕೆ ಪೀಸೇ ಆಗಿರ್ಬೇಕಲ್ವಾ...

ಹಾಗಾದ್ರೆ ಆಗಿರೋದೇನು?

ಸದ್ಯ ಆಗಿರೋದೇನು ಅಂತ ಗುಪ್ತವಾಗೇ ಉಳಿದಿದೆ. ಭರ್ಜರಿ ಸಿನಿಮಾ ಶೂಟಿಂಗ್ ಮುಗಿದು ಸಿನಿಮಾ ಹೊರಬರುತ್ತಾ? ಇಲ್ಲಾ ಪೊಗರೇ ಮೊದಲು ಬರುತ್ತಾ ನಟ ನಿರ್ದೇಶಕರೇ ಹೇಳ್ಬೇಕು..

English summary
Action hero Kannada actor Dhruv Sarja was dreaming to achieve Hat-trick through his latest movie Bharjari. His two earlier movies Adduri and Bahaddur were super hit movies. But, as per reliable sources due to infight between director Chetan and Dhruv. So, almost it is confirmed that Pogaru will move ahead of Bharjari. ಯಾರ ಪೊಗರಿನಿಂದ ಧ್ರುವ ಭರ್ಜರಿಗೆ ಕತ್ತರಿ ಬಿತ್ತುರಿ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada