»   » ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?

ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಂತೆ ಅಂತ ಸಾಕಷ್ಟು ಅಂತೆ-ಕಂತೆ ಸುದ್ದಿಗಳನ್ನ ನೀವೆಲ್ಲಾ ಕೇಳಿರ್ತೀರಾ.

ಆದ್ರೆ, ಇದುವರೆಗೂ ಗಾಂಧಿನಗರದ ಕಡೆ ಐಶ್ವರ್ಯ ರೈ ಬಚ್ಚನ್ ಮುಖ ಮಾಡಿಲ್ಲ. ನಮ್ಮ ಕರ್ನಾಟಕದ ಕರಾವಳಿ ಬೆಡಗಿ ಕನ್ನಡ ಚಿತ್ರದಲ್ಲಿ ನಟಿಸಲಿಲ್ಲವಲ್ಲಾ ಅಂತ ಕೆಲವರು ಬೇಸರ ಮಾಡಿಕೊಂಡಿರಬಹುದು. ಅಂಥವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. [ಭವಿಷ್ಯದ ಸೂಪರ್ ಜೋಡಿಯಂತೆ ಈ ಮುದ್ದು ಕಂದಮ್ಮಗಳು]

ಐಶ್ವರ್ಯ ರೈ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಮುಂದೆ ಓದಿ....

ಗಾಂಧಿನಗರದ ಗಲ್ಲಿ ನ್ಯೂಸ್!

ಗಾಂಧಿನಗರದ ಗಲ್ಲಿಗಳಲ್ಲಿ ಹಬ್ಬಿರುವ ಸುದ್ದಿ ಪ್ರಕಾರ, ಅಭಿಶೇಕ್ ಬಚ್ಚನ್-ಐಶ್ವರ್ಯ ರೈ ಬಚ್ಚನ್ ಪುತ್ರಿ, ಅಮಿತಾಬ್ ಬಚ್ಚನ್ ಮೊಮ್ಮಗಳು ಆರಾಧ್ಯ ಬಚ್ಚನ್ ರನ್ನ ಕನ್ನಡ ಚಿತ್ರದ ಮೂಲಕ ಪರಿಚಯ ಮಾಡುವ ಬಗ್ಗೆ ಮಾತುಕತೆ ನಡೆದಿದೆ. [ವ್ಹಾವ್!! ಮರಿ ಸುಂದರಿ ಆರಾಧ್ಯ ಬಚ್ಚನ್ ಚಿತ್ರಗಳನ್ನು ನೋಡಿ]

ಯಾವ ಚಿತ್ರಕ್ಕೆ?

ನಟ ರಮೇಶ್ ಅರವಿಂದ್ ಅಭಿನಯಿಸುತ್ತಿರುವ 'ಪುಷ್ಪಕ ವಿಮಾನ' ಚಿತ್ರದ ಒಂದು ಸಣ್ಣ ಪಾತ್ರದಲ್ಲಿ ಆರಾಧ್ಯ ಬಚ್ಚನ್ ಕಾಣಿಸಿಕೊಂಡರೆ ಹೇಗೆ ಎನ್ನುವ ಆಲೋಚನೆ ನಿರ್ದೇಶಕ ರವೀಂದ್ರನಾಥ್ ಗೆ ಹೊಳೆದಿದ್ಯಂತೆ. [ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]

ಯುವಿನಾ ಪಾರ್ಥವಿ ಪುಟಾಣಿ!

ಈಗಾಗಲೇ 'ಪುಷ್ಪಕ ವಿಮಾನ' ಚಿತ್ರದಲ್ಲಿ ಪುಟಾಣಿ ಯುವಿನಾ ಪಾರ್ಥವಿ ನಟಿಸಿದ್ದಾಳೆ. ಆಕೆಯ ಜೊತೆ ಇನ್ನೊಂದು ಪುಟಾಣಿ ಪಾತ್ರಕ್ಕೆ ಆರಾಧ್ಯ ಬಚ್ಚನ್ ಇದ್ರೆ ಚೆನ್ನ ಅನ್ನೋದು ರವೀಂದ್ರನಾಥ್ ಬಯಕೆ.

ಐಶ್ವರ್ಯ-ಅಮಿತಾಬ್ ಒಪ್ತಾರಾ?

ಪುಟಾಣಿ ಆರಾಧ್ಯ ಬಚ್ಚನ್ ಫೋಟೋ ರಿವೀಲ್ ಮಾಡುವುದಕ್ಕೆ ವರ್ಷ ತೆಗೆದುಕೊಂಡ ಬಚ್ಚನ್ ಫ್ಯಾಮಿಲಿ, ಈಗ ಇಷ್ಟು ಬೇಗ ಆರಾಧ್ಯಳನ್ನ ಬಣ್ಣದ ಲೋಕಕ್ಕೆ ಅಡಿಯಿಡಲು ಬಿಡ್ತಾರಾ ಅನ್ನೋ ಡೌಟ್ ಎಲ್ಲರನ್ನ ಕಾಡ್ತಿದೆ.

ಕನ್ನಡ ಚಿತ್ರದಲ್ಲಿ ಅಮಿತಾಬ್!

ಲಕ್ಕಿ ಸ್ಟಾರ್ ರಮ್ಯಾ ಅಭಿನಯದ 'ಅಮೃತಧಾರೆ' ಚಿತ್ರದ ವಿಶೇಷ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಮಿಂಚಿದ್ದರು.

ಗಾಸಿಪ್!?

ನಿರ್ದೇಶಕ ರವೀಂದ್ರನಾಥ್ ನಿಜವಾಗಿಯೂ ಬಚ್ಚನ್ ಫ್ಯಾಮಿಲಿ ಜೊತೆ ಮಾತುಕತೆ ನಡೆಸಿದ್ದಾರೋ ಅಥವಾ ಇದು ಜಸ್ಟ್ ಗಾಂಧಿನಗರದ ಗಲ್ಲಿ ಗಾಸಿಪ್ ಸುದ್ದಿಯೋ ಅಂತ ಕನ್ಫರ್ಮ್ ಮಾಡಿಕೊಳ್ಳೋಣ ಅಂತ ಫೋನ್ ಮಾಡಿದ್ರೆ ರಮೇಶ್ ಅರವಿಂದ್ ಮತ್ತು ರವೀಂದ್ರನಾಥ್ ನೆಟ್ ವರ್ಕ್ ಇರುವ ಏರಿಯಾದಲ್ಲಿ ಸಿಗುತ್ತಲೇ ಇಲ್ಲ.!

ಪುಷ್ಪಕ ವಿಮಾನ ಟೀಸರ್ ನೋಡಿ

ಎಲ್ಲೆಡೆ ಸಖತ್ ಸುದ್ದಿ ಮಾಡುತ್ತಿರುವ 'ಪುಷ್ಪಕ ವಿಮಾನ' ಚಿತ್ರದ ಮನಮಿಡಿಯುವ ಟೀಸರ್ ಇಲ್ಲಿದೆ ನೋಡಿ....

English summary
According to the grapevine, Aaradhya Bachchan, daughter of Aishwarya rai bachchan and Abhishek bachchan will debut in Sandalwood through Ramesh Aravind starrer 'Pushpaka Vimana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada