»   » ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!

ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!

Posted By:
Subscribe to Filmibeat Kannada

ನಟ ಧ್ರುವ ಸರ್ಜಾ ಕನ್ನಡ ಚಿತ್ರರಂಗದ ಓಡುವ ಕುದುರೆ. ಮೂರು ಸೂಪರ್ ಹಿಟ್ ಸಿನಿಮಾ ನೀಡಿದ ಈ ಭರ್ಜರಿ ಹುಡುಗನಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀಗಿರುವಾಗ ಧ್ರುವ ಸರ್ಜಾ ನಟನೆಯ ಮತ್ತೊಂದು ಹೊಸ ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ.

ವಿಶೇಷ ಅಂದರೆ ಈಗ ನಟ ಅರ್ಜುನ್ ಸರ್ಜಾ ತಮ್ಮ ಅಳಿಯ ಧ್ರುವ ಸರ್ಜಾಗೆ ಒಂದು ಸಿನಿಮಾ ಮಾಡಲಿದ್ದಾರಂತೆ. ಇದುವರೆಗೂ ಧ್ರುವ ಸರ್ಜಾ ಅವರ ಸಿನಿಮಾಗಳ ಹಿಂದೆ ನಿಂತು ಸಾಥ್ ನೀಡುತ್ತಿದ್ದ ಅರ್ಜುನ್ ಸರ್ಜಾ ಈಗ ತಾವೇ ಒಂದು ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ. ಇನ್ನೂ ಮಾವ ಅಳಿಯನ ಈ ಹೊಸ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಮುಂದಿದೆ ಓದಿ...

ಅರ್ಜುನ್ ಸರ್ಜಾ ಜೊತೆ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಮುಂದಿನ ಸಿನಿಮಾವನ್ನು ಅರ್ಜುನ್ ಸರ್ಜಾ ಅವರೇ ತಮ್ಮ ಶ್ರೀ ರಾಮ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿ ಇದೀಗ ಕೇಳಿ ಬಂದಿದೆ.

ಆರನೇ ಸಿನಿಮಾ

'ಭರ್ಜರಿ' ಚಿತ್ರದ ನಂತರ 'ಪೋಗರು' ಮತ್ತು ಉದಯ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ. ಹೀಗಾಗಿ ಅರ್ಜುನ್ ಸರ್ಜಾ ಧ್ರುವ ಅವರ ಆರನೇ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮ

ವಾಯುಪುತ್ರ

ಈ ಹಿಂದೆ ಅರ್ಜುನ್ ಸರ್ಜಾ ತಮ್ಮ ಮತ್ತೊಬ್ಬ ಅಳಿಯ ಚಿರಂಜೀವಿ ಸರ್ಜಾ ಅವರ 'ವಾಯುಪುತ್ರ' ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಆದರೆ ಇದೇ ಮೊದಲ ಬಾರಿಗೆ ಧ್ರುವಗೆ ಒಂದು ಚಿತ್ರವನ್ನು ಮಾಡುತ್ತಿದ್ದಾರೆ.

ಅಣ್ಣ - ಅತ್ತಿಗೆ ಜೋಡಿ ನೋಡಿ ನಟ ಧ್ರುವ ಸರ್ಜಾ ಹೀಗೆ ಹೇಳುತ್ತಾರೆ!

'ಪ್ರೇಮ ಬರಹ'ದ ನಂತರ

ಸದ್ಯ ತಮ್ಮ ಮಗಳಿಗಾಗಿ 'ಪ್ರೇಮ ಬರಹ' ಸಿನಿಮಾ ಮಾಡುತ್ತಿರುವ ಅರ್ಜುನ್ ಸರ್ಜಾ ಆ ಸಿನಿಮಾದ ಬಳಿಕ ಧ್ರುವ ಜೊತೆ ಸಿನಿಮಾ ಮಾಡಲಿದ್ದಾರಂತೆ.

ಚಿತ್ರಪಟ: ಚಿರು - ಮೇಘನಾ ನಿಶ್ಚಿತಾರ್ಥದ ಅಮೂಲ್ಯ ಕ್ಷಣಗಳು

ನಿರ್ದೇಶಕರು ಯಾರು..?

ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಕಾಂಬಿನೇಶನ್ ಸಿನಿಮಾಗೆ ನಿರ್ದೇಶಕರು ಯಾರು ಎಂಬುದು ಇನ್ನು ಫೈನಲ್ ಆಗಿಲ್ಲ. ನಿರ್ಮಾಣದ ಜೊತೆಗೆ ಈ ಚಿತ್ರವನ್ನು ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡುತ್ತಾರ ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

English summary
According to the source Arjun Sarja will produce a movie to Dhruva Sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X