»   » ನಿಜಕ್ಕೂ ಧ್ರುವ ಸರ್ಜಾ ಹಾಗೂ ವಿಕ್ರಮ್ ಜೊತೆ ನಟಿಸುತ್ತಾರಾ ಕಮಲ್ ಹಾಸನ್ ಪುತ್ರಿಯರು?

ನಿಜಕ್ಕೂ ಧ್ರುವ ಸರ್ಜಾ ಹಾಗೂ ವಿಕ್ರಮ್ ಜೊತೆ ನಟಿಸುತ್ತಾರಾ ಕಮಲ್ ಹಾಸನ್ ಪುತ್ರಿಯರು?

Posted By:
Subscribe to Filmibeat Kannada
Kamal haasan daughter enter sandalwood ? | Filmibeat Kannada

ಕಾಲಿವುಡ್ ಚಿತ್ರರಂಗದ ಸ್ಟಾರ್ ಸಹೋದರಿಯರು ಈಗ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ನಟ ಕಮಲ್ ಹಾಸನ್ ಪುತ್ರಿಯರಾದ ಶೃತಿ ಹಾಸನ್ ಮತ್ತು ಅಕ್ಷರಾ ಹಾಸನ್ ಸ್ಯಾಂಡಲ್ ವುಡ್ ನಲ್ಲಿ ಸಿನಿ ಜರ್ನಿ ಶುರು ಮಾಡಲಿದ್ದಾರೆ ಎನ್ನುವ ಗುಸು ಗುಸು ಎಲ್ಲೆಡೆ ಹರಿದಾಡಿದೆ.

ಒಂದು ಕಡೆ ಈ ರೀತಿಯ ಸುದ್ದಿ ಕೇಳಿ ಬಂದರೆ ಇನ್ನೊಂದು ಕಡೆ ನಿಜಕ್ಕೂ ಈ ನಟಿಯರು ಕನ್ನಡಕ್ಕೆ ಬರ್ತಾರಾ ಎನ್ನುವ ಅನುಮಾನವೂ ಮೂಡಿದೆ. ಮುಂದೆ ಓದಿರಿ...

ಧ್ರುವ ಸರ್ಜಾ ಜೊತೆ ಶೃತಿ ಹಾಸನ್

ನಟ ಧ್ರುವ ಸರ್ಜಾ ಅವರ 'ಪೊಗರು' ಚಿತ್ರಕ್ಕೆ ಶೃತಿ ಹಾಸನ್ ಅವರನ್ನು ಕರೆತರಲು ಚಿತ್ರತಂಡ ಪ್ರಯತ್ನ ಪಟ್ಟಿದೆ. ನಿರ್ದೇಶಕ ನಂದ ಕಿಶೋರ್ ಕಥೆ ಕೇಳಿ ಇಂಪ್ರೆಸ್ ಆಗಿರುವ ಶೃತಿ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಸದ್ಯ ಶೃತಿ ಕೈನಲ್ಲಿ ಇರುವುದು ಒಂದೇ ಸಿನಿಮಾ

ಸದ್ಯ ಶೃತಿ ಹಾಸನ್ ತಂದೆ ಕಮಲ್ ಹಾಸನ್ ನಿರ್ದೇಶನದ ಒಂದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದ ಹೊರತಾಗಿ ಶೃತಿ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ.

ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

ವಿಕ್ರಮ್ ಜೊತೆ ಅಕ್ಷರಾ ಹಾಸನ್

ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಅವರ ಮೊದಲ ಸಿನಿಮಾಗೆ ಅಕ್ಷರಾ ಹಾಸನ್ ಅವರನ್ನು ಕರೆ ತರುವ ಸುದ್ದಿ ಅನೇಕ ದಿನಗಳಿಂದ ಇದೆ.

ಅಕ್ಷರಾ ಹಾಸನ್ ಓಕೆ ಅಂತಾರಾ.?

ಸದ್ಯ ಅಕ್ಷರಾ ಹಾಸನ್ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಸೋ, ವಿಕ್ರಮ್ ಅವರ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರಕ್ಕೆ ಅಕ್ಷರ ಓಕೆ ಹೇಳುವ ಸಾಧ್ಯತೆ ಇದೆ. ಇಲ್ಲ ಅನ್ನಲ್ಲ ಅಂತಲೂ ಹೇಳುವ ಹಾಗಿಲ್ಲ.

ಕಮಲ್ ಹಾಸನ್ ಪುತ್ರಿಯನ್ನು ನಿರ್ದೇಶಕ ನಾಗಶೇಖರ್ ಭೇಟಿ ಮಾಡಿದ್ದೇಕೆ ?

ಅನೇಕ ನಟಿಯರ ಆಗಮನ

ಇತ್ತೀಚಿಗೆ 'ಹೆಬ್ಬುಲಿ' ಸಿನಿಮಾದ ಮೂಲಕ ಅಮಲಾ ಪೌಲ್, 'ಜಾಗ್ವಾರ್' ಚಿತ್ರದಿಂದ ತಮನ್ನಾ ಹಾಗೂ 'ದಿ ವಿಲನ್' ಚಿತ್ರದಲ್ಲಿ ಆಮಿ ಜಾಕ್ಸನ್ ನಟಿಸುವ ಮೂಲಕ ಕನ್ನಡಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರು ಕಾಲಿಟ್ಟಿದ್ದಾರೆ.

English summary
Will Kamal Haasan's daughter Shruthi Haasan and Akshara Haasan make debut in Sandalwood.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada