»   » ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ...

ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ...

Posted By:
Subscribe to Filmibeat Kannada

'ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ...' ಎಂದು ಓದಿದ ಕೂಡಲೆ ಏನೇನೋ ಕಲ್ಪನೆ ಮಾಡಿಕೊಳ್ಳುವ ಮುನ್ನ ಇದು 'ಸಿನಿಮಾಗೆ ಸಂಬಂಧಪಟ್ಟ' ಸುದ್ದಿ ಎಂಬುದು ನಿಮ್ಮ ಗಮನದಲ್ಲಿ ಇರಲಿ..

ವರ್ಷಗಳ ಹಿಂದೆ 'ರಿಯಲ್ ಸ್ಟಾರ್' ಉಪೇಂದ್ರ ಇದ್ದದ್ದು ಹೀಗೆ...

ಸದ್ಯಕ್ಕೆ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ', ಹಾಗೂ 'ಉಪ್ಪಿ ರುಪೀ' ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿರುವ 'ರಿಯಲ್ ಸ್ಟಾರ್' ಉಪೇಂದ್ರ ಹೊಸ ಸಿನಿಮಾ ಒಂದನ್ನ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಅದೂ ತೆಲುಗು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಎಂಬುದು ನಮಗೆ ಸಿಕ್ಕಿರುವ ಲೇಟೆಸ್ಟ್ ನ್ಯೂಸ್. ಮುಂದೆ ಓದಿರಿ....

ತೆಲುಗಿನ ಬಿಗ್ ಬಜೆಟ್ ಸಿನಿಮಾದಲ್ಲಿ ಉಪೇಂದ್ರ.?

ಗಾಂಧಿನಗರದಲ್ಲಿ ಇದೀಗಷ್ಟೇ ಕೇಳಿಬರುತ್ತಿರುವ ಸುದ್ದಿ ಪ್ರಕಾರ, ತೆಲುಗಿನ ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ನಟ ಉಪೇಂದ್ರ ಅಭಿನಯಿಸುವ ಸಾಧ್ಯತೆ ಇದೆ.

ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!

ಯಾರ ಜೊತೆ ಗೊತ್ತಾ.?

ಮೆಗಾ ಸ್ಟಾರ್ ಚಿರಂಜೀವಿ ರವರ 151ನೇ ಸಿನಿಮಾದಲ್ಲಿ ನಟಿಸಲು ನಟ ಉಪೇಂದ್ರ ರವರಿಗೆ ಆಫರ್ ನೀಡಲಾಗಿದ್ಯಂತೆ.

ಯಾವ ಚಿತ್ರ ಅಂದ್ರೆ...

ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ರವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ನಿರ್ದೇಶಕ ಸುರೇಂದ್ರ ರೆಡ್ಡಿ ಹೊರಟಿದ್ದಾರೆ. 'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ನಟಿಸಲು ಚಿರಂಜೀವಿ ತಯಾರಿ ನಡೆಸುತ್ತಿದ್ದಾರೆ.

ಮುಂದಿನ ತಿಂಗಳು ಮುಹೂರ್ತ

ಆಗಸ್ಟ್ 15 ರಂದು, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 'ಉಯ್ಯಲವಾಡ ನರಸಿಂಹ ರೆಡ್ಡಿ' ಸಿನಿಮಾ ಸೆಟ್ಟೇರಲಿದೆ. ಈ ಚಿತ್ರದ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಉಪೇಂದ್ರ ರವರ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ಯಂತೆ.

ಪಕ್ಕಾ ಆಗಿಲ್ಲ.!

'ಉಯ್ಯಲವಾಡ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಾರೋ, ಇಲ್ವೋ ಇನ್ನೂ ಪಕ್ಕಾ ಆಗಿಲ್ಲ. ಸದ್ಯಕ್ಕೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ ಇದು.

ಟಾಲಿವುಡ್ ನಲ್ಲೂ ಉಪೇಂದ್ರ ರವರಿಗಿದ್ದಾರೆ ಫ್ಯಾನ್ಸ್.!

ಅಷ್ಟಕ್ಕೂ ಉಪೇಂದ್ರ ರವರಿಗೆ ಟಾಲಿವುಡ್ ನಂಟು ಹೊಸದೇನೂ ಅಲ್ಲ. ಉಪೇಂದ್ರ ರವರ ಅನೇಕ ಚಿತ್ರಗಳು ತೆಲುಗಿಗೆ ಡಬ್ ಆಗಿದೆ. ಉಪ್ಪಿಗೆ ತೆಲುಗು ಚಿತ್ರರಂಗದಲ್ಲಿಯೂ ದೊಡ್ಡ ಅಭಿಮಾನಿ ಬಳಗವಿದೆ.

English summary
Will Real Star Upendra act in Chiranjeevi's 151st film.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada