»   » 'ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ

'ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ

Posted By:
Subscribe to Filmibeat Kannada

ಭಾವಿ ಜೋಡಿ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ನಟನೆಯ 'ಸಂತು Straight Forward' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 28, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಶ್-ರಾಧಿಕಾ ಜೋಡಿ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡಲಿದ್ದಾರೆ.

ಇದೀಗ 'ಸಂತು' ಬಿಡುಗಡೆಗೆ ಮುನ್ನವೇ ದಾಖಲೆ ಹುಟ್ಟುಹಾಕಿದೆ. ಈ ಮೊದಲು ಚಿತ್ರ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿ ಸುದ್ದಿ ಮಾಡಿದ್ದ ಈ ಸಿನಿಮಾ ಮಗದೊಂದು ದಾಖಲೆ ಮಾಡಿ ಮತ್ತೆ ಸುದ್ದಿ ಮಾಡಿದೆ.[ಸೆನ್ಸಾರ್ ನಲ್ಲಿ 'ಸಂತು'ಗೆ ಕ್ಲೀನ್ ಚಿಟ್, ಅ.28ಕ್ಕೆ ಅಬ್ಬರ ಶುರು]


ಕೆ.ಮಂಜು ನಿರ್ಮಾಣದ, ಪಕ್ಕಾ ಸ್ವಮೇಕ್ ಸಿನಿಮಾ ಆಗಿರುವ 'ಸಂತು Straight Forward' ಚಿತ್ರಕ್ಕೆ ಮಹೇಶ್ ರಾವ್ ಆಕ್ಷನ್-ಕಟ್ ಹೇಳಿದ್ದಾರೆ. ಅಂದಹಾಗೆ 'ಸಂತು' ಅಲಿಯಾಸ್ ಯಶ್ ಅವರ ಕಡೆಯಿಂದ ಹೊರಬಿದ್ದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಗ್ಗೆ ತಿಳಿಯಲು ಮುಂದೆ ಓದಿ...


ಮತ್ತೊಂದು ದಾಖಲೆ ಸುದ್ದಿ ಇದೇ....

'ಸಂತು Straight Forward' ಚಿತ್ರತಂಡದಿಂದ ಹೊರಬಿದ್ದ ಮತ್ತೊಂದು ದಾಖಲೆ ಸುದ್ದಿ ಏನಪ್ಪಾ ಅಂದ್ರೆ, ಚಿತ್ರದ ಸ್ಯಾಟಲೈಟ್ ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿರೋದು. ಬರೋಬ್ಬರಿ ಮೊತ್ತಕ್ಕೆ ಚಿತ್ರದ ಆಡಿಯೋ ಹಕ್ಕು ಸೇಲಾದ ನಂತರ ಇದೀಗ ಸ್ಯಾಟಲೈಟ್ ಹಕ್ಕು ಕೂಡ ರಿಲೀಸ್ ಗೂ ಮುನ್ನವೇ ಸೇಲ್ ಆಗುವ ಮೂಲಕ ದಾಖಲೆ ಹುಟ್ಟುಹಾಕಿದೆ.['ಸಂತು Straight Forward' ಚಿತ್ರದ ಆಕರ್ಷಕ ಟೀಸರ್ ನೋಡಿ]


ಸ್ಯಾಟಲೈಟ್ ಹಕ್ಕು ಎಷ್ಟಕ್ಕೆ ಸೇಲ್ ಆಯ್ತು?

ಸದ್ಯಕ್ಕೆ ಬಂದಿರೋ ಮಾಹಿತಿ ಪ್ರಕಾರ 'ಸಂತು Straight Forward' ಚಿತ್ರದ ಸ್ಯಾಟಲೈಟ್ ಪ್ರಸಾರ ಹಕ್ಕು ಬರೋಬ್ಬರಿ 5 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟ ಆಗಿದೆ. ಆಡಿಯೋ ಹಕ್ಕಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಸ್ಯಾಟಲೈಟ್ ಹಕ್ಕು ಬಿಕರಿಯಾಗಿದ್ದು ವಿಶೇಷ.[ಸ್ಟಾರ್-ವಾರ್, ಮಣ್ಣು-ಮಸಿ ಅಂತ್ಹೇಳಿ ನಟರ ಮಧ್ಯೆ ಹುಳಿ ಹಿಂಡಬೇಡಿ: ಕಿಚ್ಚ]


ಆಡಿಯೋ ಹಕ್ಕು

ಯಶ್-ರಾಧಿಕಾ ಜೋಡಿಯ 'ಸಂತು' ಚಿತ್ರದ ಆಡಿಯೋ ಹಕ್ಕು ಭರ್ಜರಿ 1.08 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಲಹರಿ ಆಡಿಯೋ ಸಂಸ್ಥೆ, ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದ 'ಸಂತು' ಚಿತ್ರದ ಹಾಡುಗಳನ್ನು ಖರೀದಿ ಮಾಡಿದ್ದರು.['ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್]


ಟ್ರೈಲರ್ ಯಾವಾಗ ಬಿಡುಗಡೆ

ಈಗಾಗಲೇ ಚಿತ್ರದ ಸಣ್ಣ-ಸಣ್ಣ ಟೀಸರ್ ತುಣುಕುಗಳು ಬಿಡುಗಡೆ ಆಗಿದ್ದು, ಎಲ್ಲೆಡೆ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇಂದು (ಅಕ್ಟೋಬರ್ 25) ಲಹರಿ ಮ್ಯೂಸಿಕ್ ನಲ್ಲಿ 'ತಂಗಾಳಿಯಲ್ಲಿ ಇಂದು' ವಿಡಿಯೋ ಸಾಂಗ್ ಮತ್ತು 'ಸೆಲ್ಫ್ ಮೇಡ್' ಮೇಕಿಂಗ್ ವಿಡಿಯೋ ಬಿಡುಗಡೆ ಆಗಲಿದೆ. ಇದರ ಜೊತೆಗೆ ಇಂದು 4 ಗಂಟೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗಲಿದೆ.


English summary
Kannada Actor Yash, Kannada Actress Radhika Pandit starrer Kannada Movie 'Santhu Straight Forward', Satellite rights is sold for record price (5 Crore). The Movie is directed by Mahesh Rao and Produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada