»   » 'ಸಂತು Straight Forward' ಒಟ್ಟಾರೆ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

'ಸಂತು Straight Forward' ಒಟ್ಟಾರೆ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

Posted By:
Subscribe to Filmibeat Kannada

ಭಾವಿ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ನಟಿಸಿದ್ದ 'ಸಂತು Straight Forward', ಕಳೆದ ವಾರ (ಶುಕ್ರವಾರ, ಅಕ್ಟೋಬರ್ 28) ತೆರೆಕಂಡಿದೆ. ಬಿಡುಗಡೆ ಆದ ಮೊದಲ ದಿನ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಂಡಿತ್ತು. ಅದ್ರಲ್ಲೂ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಅಭಿಮಾನಿಗಳ ಕಡೆಯಿಂದ 'ಸಂತು...' ಚಿತ್ರದ ಬಗ್ಗೆ ಭಯಂಕರ ರೆಸ್ಪಾನ್ಸ್ ಬಂದಿತ್ತು.

ಅಭಿಮಾನಿಗಳೇನೋ ಸಿನಿಮಾದ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಯಾರೋ ಕೆಲವರು ಚಿತ್ರದ ಬಗ್ಗೆ ಅಪಪ್ರಚಾರ ಮಾಡಿದ್ದಾರಂತೆ. ಇದು ಚಿತ್ರದ ನಿರ್ಮಾಪಕ ಕೆ.ಮಂಜು ಅವರ ಕಿವಿಗೂ ಬಿದ್ದಿದೆ. ಆದ್ದರಿಂದ ತಕ್ಷಣ ಸುದ್ದಿಗೋಷ್ಠಿ ಕರೆದು ಚಿತ್ರದ ಕಲೆಕ್ಷನ್ ರಿಪೋರ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ.[ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!]


ಹಬ್ಬದ ದಿನವಾದರೂ ಪಟಾಕಿ ಹೊಡಿಯೋದನ್ನು ಬಿಟ್ಟು ಕೆ.ಮಂಜು ಅವರು, ತರಾತುರಿಯಲ್ಲಿ ಸೋಮವಾರ ಸಂಜೆ, ಬೆಂಗಳೂರಿನ ಗ್ರೀನ್ ಹೌಸ್ ಸ್ಟುಡಿಯೋದಲ್ಲಿ ಪ್ರೆಸ್ ಮೀಟ್ ಮಾಡಿ, ಚಿತ್ರದ ಕಲೆಕ್ಷನ್ ಹೇಳುವ ಮೂಲಕ ಅಪಪ್ರಚಾರ ಮಾಡಿದವರ ಬಾಯಿಗೆ ಬೀಗ ಜಡಿದಿದ್ದಾರೆ.


ಅಷ್ಟಕ್ಕೂ 'ಸಂತು..' ಸಿನಿಮಾ ಮಾಡಿದ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ಸ್ ಎಷ್ಟು?, ನಿರ್ಮಾಪಕ ಕೆ.ಮಂಜು ಪ್ರೆಸ್ ಮೀಟ್ ನಲ್ಲಿ ಏನಂದ್ರು?, ಎಲ್ಲಾ ಕಥೆಗಳನ್ನು ನೋಡಲು, ಮುಂದೆ ಓದಿ....


'ಸಂತು...' ಫಸ್ಟ್ ಡೇ ಕಲೆಕ್ಷನ್ ಎಷ್ಟು.?

ರಾಕಿಂಗ್ ಸ್ಟಾರ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಜುಗಲ್ ಬಂದಿಯ 'ಸಂತು Straight Forward', ಮೊದಲ ದಿನ ಸುಮಾರು 2.82 ಕೋಟಿ ರೂಪಾಯಿ, ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮಾಡಿತ್ತು.['Straight ಸಂತು..' ಬಗ್ಗೆ ವಿಮರ್ಶಕರು ಏನು ಹೇಳ್ತಾರೆ?]


ಒಟ್ಟಾರೆ 'ಸಂತು...' ಕಮಾಯಿಸಿದ್ದೆಷ್ಟು?

ಎರಡನೇ ದಿನ, ಕಲೆಕ್ಷನ್ ನಲ್ಲಿ ಭರ್ಜರಿ 20% ಹೆಚ್ಚಳ ಕಂಡುಬಂದಿದೆ. ಜೊತೆಗೆ ಸಾಕಷ್ಟು ರಜಾದಿನಗಳು ಇದ್ದಿದ್ದರಿಂದ ನನ್ನ ಪ್ರಕಾರ ಇಲ್ಲಿಯವರೆಗಿನ ಒಟ್ಟಾರೆ ಕಲೆಕ್ಷನ್ಸ್ ಅಂದಾಜು 25 ಕೋಟಿ ರೂಪಾಯಿ ತನಕ ಆಗಬಹುದು ಎಂಬ ವಿಚಾರವನ್ನು ಖುದ್ದು ನಿರ್ಮಾಪಕ ಕೆ.ಮಂಜು ಅವರೇ ತಿಳಿಸಿದ್ದಾರೆ.


'ಸಂತು..' ಬಗ್ಗೆ ಇಲ್ಲ-ಸಲ್ಲದ ದೂರು

ಇನ್ನು ಕೆಲವರು ಈ ಸಿನಿಮಾ ಚೆನ್ನಾಗಿಲ್ಲ, ಏನೇನೂ ಕಲೆಕ್ಷನ್ ಕೂಡ ಮಾಡಿಲ್ಲ ಅಂತ, ಚಿತ್ರದ ಬಗ್ಗೆ ಅಪಪ್ರಚಾರ ಮಾಡಿದ್ದಾರಂತೆ. ಇದಕ್ಕೆ ಉತ್ತರ ಕೊಡುವ ಸಲುವಾಗಿ ಮಂಜು ಅವರು ಪ್ರೆಸ್ ಮೀಟ್ ಮಾಡಿ, ದಯವಿಟ್ಟು ಸಿನಿಮಾ ನೋಡಿ ಗೆಲ್ಲಿಸಿ, ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಎಂದು ಕನ್ನಡಿಗರಿಗೆ ಮನವಿ ಮಾಡಿಕೊಂಡಿದ್ದಾರೆ.


ರೀಮೇಕ್ ಹಕ್ಕಿಗೆ ಬೇಡಿಕೆ ಬಂದಿದೆ

ಈಗಾಗಲೇ ಸುಮಾರು 222 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಸಂತು..' ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರ ಇನ್ನೂ 50 ಚಿತ್ರಮಂದಿರಗಳು ಹೆಚ್ಚಾಗಲಿವೆ ಎಂಬ ವಿಚಾರವನ್ನು ಕೂಡ, ನಿರ್ಮಾಪಕರು ತಿಳಿಸಿದ್ದಾರೆ. ಜೊತೆಗೆ ತೆಲುಗು ರೀಮೇಕ್ ಹಕ್ಕಿಗೆ ಬೇಡಿಕೆ ಬಂದಿದ್ದು, ನಿರ್ಮಾಪಕ ಚಿನ್ನಿಕೃಷ್ಣ ಅವರು ರೀಮೇಕ್ ಹಕ್ಕು ಖರೀದಿಸಲು ಮುಂದಾಗಿದ್ದಾರೆ, ಎಂಬ ವಿಚಾರವನ್ನು ಕೂಡ ಈ ಸಂದರ್ಭದಲ್ಲಿ ಕೆ.ಮಂಜು ಅವರು ಹೇಳಿಕೊಂಡಿದ್ದಾರೆ.


English summary
Kannada producer K Manju says his new film 'Santhu Straight Forward' will collect 25 crores and will be a huge blockbuster. K Manju was talking during the press meet of the film at Green House in Bangalore on Monday (October 1) evening.Kannada Actor Yash, Kannada Actress Radhika Pandit in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada