For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಬಿಗ್‌ ಬಜೆಟ್ ಸಿನಿಮಾ ತಿರಸ್ಕರಿಸಿದ ರಾಕಿಭಾಯ್ ಯಶ್!

  |

  'ಕೆಜಿಎಫ್ 2' ಸಿನಿಮಾ ಮೂಲಕ ದೇಶದೆಲ್ಲೆಡೆ ಹವಾ ಸೃಷ್ಟಿಸಿರುವ ಯಶ್‌ ತಮ್ಮ ಮುಂದಿನ ಸಿನಿಮಾ 'ಕೆಜಿಎಫ್ 2' ಗಿಂತಲೂ ಬೃಹತ್ತಾಗಿರಬೇಕೆಂಬ ಆಲೋಚನೆಯಲ್ಲಿ ಎಚ್ಚರಿಕೆಯಿಂದ ಮುತುವರ್ಜಿ ವಹಿಸಿ ಕತೆಯ ಆಯ್ಕೆಯಲ್ಲಿ ತೊಡಗಿದ್ದಾರೆ.

  ಭಾರತದಲ್ಲಿ ಮಾತ್ರವೇ ಅಲ್ಲದೆ, ವಿದೇಶದಲ್ಲಿಯೂ ನಿರ್ದೇಶಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಯಶ್‌ಗೆ ಪರ ಭಾಷೆಯ ಸಿನಿಮಾಗಳಿಂದಲೂ ದೊಡ್ಡ-ದೊಡ್ಡ ಆಫರ್‌ಗಳೇ ಬಂದರೂ ಸಹ ಆ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದಾರಂತೆ.

  ಅದರಲ್ಲಿಯೂ ಬಾಲಿವುಡ್‌ನ ದೊಡ್ಡ ಬಜೆಟ್‌ ಸಿನಿಮಾ ಒಂದರ ಆಫರ್‌ ಯಶ್ ಅನ್ನು ಅರಸಿ ಬಂದಿತ್ತು. ಬಾಲಿವುಡ್‌ನ ಬಿಗ್‌ ಸಿನಿಮಾದಲ್ಲಿ ಬಿಗ್‌ ಸ್ಟಾರ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಯಶ್‌ ಅನ್ನು ಅರಸಿ ಬಂದಿತ್ತು, ಆದರೆ ಯಶ್ ಆ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

  ಇದೇ ವರ್ಷಾರಂಭದಲ್ಲಿ ಬಿಡುಗಡೆ ಆಗಿದ್ದ ಭಾರಿ ಬಜೆಟ್ ಸಿನಿಮಾ 'ಬ್ರಹ್ಮಾಸ್ತ್ರ' ಬಹುದೊಡ್ಡ ಹಿಟ್ ಆಗಿತ್ತು. ರಣ್ಬೀರ್ ಕಪೂರ್-ಆಲಿಯಾ ಭಟ್ ನಟಿಸಿದ್ದ ಈ ಸಿನಿಮಾ ಈ ವರ್ಷದಲ್ಲಿ ಸೂಪರ್ ಹಿಟ್ ಆದ ಏಕೈಕ ಬಾಲಿವುಡ್ ಸಿನಿಮಾ ಎನ್ನಬಹುದು. ಸಿನಿಮಾದ ಎರಡನೇ ಭಾಗಕ್ಕಾಗಿ ನಟ ಯಶ್‌ ಅನ್ನು ಅತಿಥಿ ಪಾತ್ರವೊಂದರಲ್ಲಿ ನಟಿಸಲು ಕೇಳಲಾಗಿತ್ತು. ಆದರೆ ಈ ಅವಕಾಶವನ್ನು ಯಶ್ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಬಾಲಿವುಡ್‌ ಅಂಗಳದಿಂದಲೇ ಸ್ಯಾಂಡಲ್‌ವುಡ್‌ ಕಡೆಗೆ ಬಂದಿದೆ.

  ಅತಿಥಿ ಪಾತ್ರದಲ್ಲಿ ನಟಿಸಿದ್ದ ಶಾರುಖ್ ಖಾನ್

  ಅತಿಥಿ ಪಾತ್ರದಲ್ಲಿ ನಟಿಸಿದ್ದ ಶಾರುಖ್ ಖಾನ್

  'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಹಲವು ನಟರು ನಟಿಸಿದ್ದರು. ಶಾರುಖ್ ಖಾನ್‌ರ ಅತಿಥಿ ಪಾತ್ರವಂತೂ ಭಾರಿ ಹಿಟ್ ಆಗಿತ್ತು. ದಕ್ಷಿಣದ ನಟ ನಾಗಾರ್ಜುನ, ಅಮಿತಾಬ್ ಬಚ್ಚನ್ ಅವರುಗಳು ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಲ್ಟಿಸ್ಟಾರರ್ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲಿಯೂ ಹಲವು ನಟರಿಂದ ಅತಿಥಿ ಪಾತ್ರ ಮಾಡಿಸುವ ಯೋಜನೆಯಲ್ಲಿ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಇದ್ದಾರೆ.

  ಲೆಕ್ಕಾಚಾರ ಹಾಕಿ ನಟಿಸಲು ಆಹ್ವಾನ?

  ಲೆಕ್ಕಾಚಾರ ಹಾಕಿ ನಟಿಸಲು ಆಹ್ವಾನ?

  ಯಶ್ ಅನ್ನು ಸಿನಿಮಾಕ್ಕೆ ತೆಗೆದುಕೊಂಡು ಅವರ ಅಭಿಮಾನಿಗಳನ್ನು ಸಿನಿಮಾದತ್ತ ಸೆಳೆಯುವ ಯೋಜನೆ ಚಿತ್ರತಂಡದ್ದು, ಜೊತೆಗೆ ದಕ್ಷಿಣ ಭಾರತದ ನಟನನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡಲು ಅನುಕೂಲ ಮಾಡಿಕೊಳ್ಳುವುದು ಸಹ ಚಿತ್ರತಂಡದ ಯೋಜನೆ. ನಾಗಾರ್ಜುನಗೆ ಸಿನಿಮಾದಲ್ಲಿ ಪಾತ್ರ ನೀಡಿ, ದಕ್ಷಿಣ ಭಾರತದಲ್ಲಿ ಸಿನಿಮಾದ ಬಗ್ಗೆ ಭರ್ಜರಿ ಪ್ರಚಾರವನ್ನು ಚಿತ್ರತಂಡ ಮಾಡಿತ್ತು. ಒಳ್ಳೆಯ ಕಲೆಕ್ಷನ್ ಅನ್ನೂ ದಕ್ಷಿಣ ಭಾರತದಿಂದ ಮಾಡಿತ್ತು. ಇದೇ ಯೋಜನೆ ಇಟ್ಟುಕೊಂಡು ಯಶ್ ಅನ್ನು ಚಿತ್ರತಂಡ ಸಂಪರ್ಕಿಸಿತ್ತು, ಆದರೆ ಯಶ್‌ ಕಡೆಯಿಂದ ನಿರಾಕರಣೆ ಕೇಳಿ ಹಿಂತಿರುಗಿದೆ.

  ಹೃತಿಕ್-ರಣ್ವೀರ್ ಸಹ ನಟಿಸಿಲ್ಲ

  ಹೃತಿಕ್-ರಣ್ವೀರ್ ಸಹ ನಟಿಸಿಲ್ಲ

  ಯಶ್ ಮಾತ್ರವಲ್ಲ, ಬಾಲಿವುಡ್‌ನಲ್ಲಿಯೂ ಕೆಲವು ನಟರು 'ಬ್ರಹ್ಮಾಸ್ತ್ರ 2' ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ. ನಟ ಹೃತಿಕ್ ರೋಷನ್‌ ಹಾಗೂ ನಟ ರಣ್ವೀರ್ ಸಿಂಗ್‌ಗೆ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿತ್ತು. ಈ ಇಬ್ಬರೂ ನಟರು ತಾವು 'ಬ್ರಹ್ಮಾಸ್ತ್ರ 2' ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಆದರೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಖಾತ್ರಿಯಾಗಿಲ್ಲ.

  ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಿದ್ದ ಸಿನಿಮಾ

  ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಿದ್ದ ಸಿನಿಮಾ

  'ಬ್ರಹ್ಮಾಸ್ತ್ರ' ಸಿನಿಮಾದ ಮೊದಲ ಭಾಗ 2022 ರ ಸೆಪ್ಟೆಂಬರ್ 9 ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಾಯಕನಾಗಿ ನಟಿಸಿದ್ದರು. ಆಲಿಯಾ ಭಟ್ ನಾಯಕಿಯಾಗಿದ್ದರು. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದರು. ಕರಣ್ ಜೋಹರ್, ರಣ್ಬೀರ್ ಕಪೂರ್, ಅಯಾನ್ ಮುಖರ್ಜಿ, ಅಪೂರ್ವ ಮೆಹ್ತ, ನಮಿತಾ ಮೆಹ್ತ ಅವರುಗಳು ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಈ ಸಿನಿಮಾದ ಹಲವು ಭಾಗಗಳು ಮುಂದಿನ ಕೆಲ ವರ್ಷಗಳಲ್ಲಿ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ.

  English summary
  Yash offered a guest role in Brahmastra 2 movie but he said no to makers. Yash planing somthing big.
  Saturday, November 5, 2022, 15:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X