India
  For Quick Alerts
  ALLOW NOTIFICATIONS  
  For Daily Alerts

  ಟೆಂಪಲ್ ರನ್ ಬಳಿಕ ಮುಂಬೈ ಏರ್‌ಫೋರ್ಟ್‌ನಲ್ಲಿ ಕಾಣಿಸಿಕೊಂಡ ಯಶ್: 'ಕೆಜಿಎಫ್ 2' ಅಬ್ಬರ ಶುರು

  |

  'ಕೆಜಿಎಫ್ 2'.. ಈ ಸಿನಿಮಾಗಾಗಿ ಕಾದಿದ್ದು ಒಂದೆರಡು ವರ್ಷ ಅಲ್ಲ. ಬರೋಬ್ಬರಿ ಮೂರೂವರೆ ವರ್ಷ. ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ಕೇವಲ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಇಡೀ ವಿಶ್ವವೇ ಎದುರು ನೋಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಏನಾದರೂ ಹೊಸ ದಾಖಲೆ ಬರೆಯಬಹುದು ಅನ್ನುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುವುದನ್ನು ನೋಡಲು ಕಾದು ಕೂತಿದ್ದಾರೆ.

  ಪ್ರೇಮಿಗಳ ದಿನದಂದು 'ಕೆಜಿಎಫ್ 2' ತಂಡದಿಂದ ಬಿಗ್ ಸರ್ಪ್ರೈಸ್: ಏನದು? ಪ್ರೇಮಿಗಳ ದಿನದಂದು 'ಕೆಜಿಎಫ್ 2' ತಂಡದಿಂದ ಬಿಗ್ ಸರ್ಪ್ರೈಸ್: ಏನದು?

  ಕೆಜಿಎಫ್ 2 ಎದುರು ನೋಡುತ್ತಿರುವ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

  'ಕೆಜಿಎಫ್ 2' ಅಬ್ಬರಿಸುವ ಕಾಲ ಹತ್ತಿರ ಬಂದಿದೆ. ಸಿನಿಮಾ ಬಿಡುಗಡೆಗೆ ಇನ್ನು ಎರಡು ತಿಂಗಳು ಬಾಕಿ ಇದೆ ಅನ್ನುವಾಗಲೇ ಯಶ್ ಮತ್ತೆ ಆಕ್ಟೀವ್ ಆಗಿದ್ದಾರೆ. ಒಂದೊಂದೇ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ಸೀದಾ ಮುಂಬೈಗೆ ಹಾರಿದ್ದಾರೆ. ದಿಢೀರನೇ ಯಶ್ ಮಯಾನಗರಿ ಮುಂಬೈನಲ್ಲಿ ಪ್ರತ್ಯಕ್ಷ ಆಗಿದ್ದು, ಕೆಜಿಎಫ್ 2 ಪ್ರಚಾರಕ್ಕೆ ಬರೆದ ಮುನ್ನುಡಿ ಎಂದೇ ಹೇಳಲಾಗುತ್ತಿದೆ.

   ಮುಂಬೈನಲ್ಲಿ ಯಶ್ ಪ್ರತ್ಯಕ್ಷ

  ಮುಂಬೈನಲ್ಲಿ ಯಶ್ ಪ್ರತ್ಯಕ್ಷ

  ಕಳೆದ ಕೆಲವು ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಕರ್ನಾಟಕದ ಪ್ರಮುಖ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿದ್ದರು. ಟೆಂಪಲ್ ರನ್ ಮುಗಿಯುತ್ತಿದ್ದಂತೆ ಯಶ್ ಸೀದಾ ಮುಂಬೈನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಸ ಮುಂಬೈ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ದಿಢೀರನೇ ಮುಂಬೈಗೆ ಬಂದಿಳಿದ ಯಶ್ ಕಂಡು 'ಕೆಜಿಎಫ್ 2' ಪ್ರಚಾರ ಆರಂಭ ಅಂತಲೇ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ.

   ಮುಂಬೈನಿಂದಲೇ 'ಕೆಜಿಎಫ್ 2' ಪ್ರಚಾರ?

  ಮುಂಬೈನಿಂದಲೇ 'ಕೆಜಿಎಫ್ 2' ಪ್ರಚಾರ?

  2018, ಡಿಸೆಂಬರ್‌ನಲ್ಲಿ ಯಶ್ ಕೊನೆಯ ಸಿನಿಮಾ 'ಕೆಜಿಎಫ್' ತೆರೆಕಂಡಿತ್ತು. ಅಲ್ಲಿಂದ ಇಲ್ಲಿವರೆಗೂ 'ಕೆಜಿಎಫ್ 2' ಬಿಟ್ಟರೆ ಬೇರೆ ಸಿನಿಮಾ ಬಗ್ಗೆ ಆಲೋಚನೆಯನ್ನೂ ಮಾಡಿಲ್ಲ. ಚಾಪರ್‌ 2 ಬಗ್ಗೆ ಪ್ರಚಾರವನ್ನೂ ಮಾಡಿಲ್ಲ. ತನ್ನ ಹುಟ್ಟುಹಬ್ಬಕ್ಕೆ ಸಿನಿಮಾ ಟ್ರೈಲರ್ ಕೂಡ ರಿಲೀಸ್ ಮಾಡಿರಲಿಲ್ಲ. ಬಿಡುಗಡೆಗೆ ಇನ್ನು ಎರಡು ತಿಂಗಳಿದೆ ಎನ್ನುವಾಗಲೇ ಪ್ರಚಾರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರಂತೆ. ಹಿಂದಿಯಿಂದಲೇ ಪ್ರಚಾರ ಆರಂಭ ಆಗಲಿದೆ ಎನ್ನುವ ಮಾತು ಹೇಳಿಬರುತ್ತಿದೆ. 'ಕೆಜಿಎಫ್ 2' ಹಿಂದಿ ವರ್ಷನ್ ರಿಲೀಸ್ ಮಾಡುತ್ತಿರುವ ವಿತರಕರನ್ನು ಭೇಟಿ ಮಾಡಲು ಯಶ್ ಮುಂಬೈಗೆ ತೆರಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ಯಶ್ ಜೊತೆ ಮುಂಬೈಗೆ ಹೋದವರು ಯಾರು?

  ಯಶ್ ಜೊತೆ ಮುಂಬೈಗೆ ಅವರ ಇಡೀ ತಂಡವೇ ಪ್ರಯಾಣ ಮಾಡಿದೆ. 'ಕೆಜಿಎಫ್ 2' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು , ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ, ಯಶ್ ತಂಡ ಮುಂಬೈನಲ್ಲಿ ಬೀಡು ಬಿಟ್ಟಿದೆ. ಸಿನಿಮಾ ಪ್ರಮೋಷನ್ ಹಾಗೂ ಬಿಡುಗಡೆಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ಮಾಡಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮುಂಬೈಗೆ ಎಂಟ್ರಿ ಕಟ್ಟಿದ್ದು, ಪ್ರಶಾಂತ್ ನೀಲ್ ಕೂಡ ಶೀಘ್ರದಲ್ಲಿಯೇ ಈ ತಂಡವನ್ನು ಸೇರಿಕೊಳ್ಳುತ್ತಾರೆ ಎನ್ನಲಾಗಿದೆ.

   ಬಾಲಿವುಡ್‌ನಲ್ಲಿ 'ಕೆಜಿಎಫ್ 2' ವಿತರಕರು ಯಾರು?

  ಬಾಲಿವುಡ್‌ನಲ್ಲಿ 'ಕೆಜಿಎಫ್ 2' ವಿತರಕರು ಯಾರು?

  ಕೆಜಿಎಫ್ ಚಾಪ್ಟರ್ 1 ಅನ್ನು ವಿತರಣೆ ಮಾಡಿದ ನಿರ್ಮಾಣ ಸಂಸ್ಥೆಯೇ 'ಕೆಜಿಎಫ್ 2' ಸಿನಿಮಾವನ್ನೂ ಡಿಸ್ಟ್ರಿಬ್ಯೂಟ್ ಮಾಡಲಿದೆ. ರವೀನಾ ಟಂಡನ್ ಪತಿ ಅನಿಲ್ ತಡಾನಿಯ ವಿತರಣಾ ಸಂಸ್ಥೆ ಎಎ ಫಿಲಂಸ್ ಹಾಗೂ ಎಕ್ಸೆಲ್ ಎಂಟರ್‌ಟೈನ್ಮೆಂಟ್‌ನ ರಿತೇಶ್ ಸಿದ್ವಾನಿ ಕೆಜಿಎಫ್ 2 ಹಿಂದಿ ಚಾಪ್ಟರ್ ಅನ್ನು ವಿತರಣೆ ಮಾಡಲಿದ್ದಾರೆ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ರಿಲೀಸ್‌ಗೆ ಬೇಕಿರುವ ಸಿದ್ಧತೆಗಳು ಆರಂಭ ಆಗಿವೆ.

  English summary
  Yash seen in the Mumbai airport rumour is that he started KGF 2 promotion with Hindi version. KGF 2 executive producer Karthik Gowda also travelled mumbai with Rocking Star Yash
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X