ಸಲ್ಲುಗೆ ಶರ್ಟ್ ಬಿಚ್ಚಿಸಲಿದ್ದಾರೆ ಯೋಗರಾಜ್ ಭಟ್!
ಜನಪ್ರಿಯ ನಿರ್ದೇಶಕ, ಗೀತಸಾಹಿತಿ ಯೋಗರಾಜ್ ಭಟ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ಒಂದು ಸುತ್ತು ಹೊಡೆದುಕೊಂಡು ಪುನಃ ತಮ್ಮ ವಾಸ್ತು ಬದಲಾಯಿಸಿ 'ವಾಸ್ತುಪ್ರಕಾರ' ಸ್ಯಾಂಡಲ್ ವುಡ್ ಗೆ ಮರಳಿದ್ದು ಗೊತ್ತೇ ಇದೆ.
ನಲವತ್ತೆರಡನೇ ಹುಟ್ಟುಹಬ್ಬದ (ಅ.8) ಸಂಭ್ರಮದಲ್ಲಿರುವ ಯೋಗರಾಜ್ ಭಟ್ಟರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯೊಂದು ಗಾಂಧಿನಗರದಿಂದ ಹೊರಬಿದ್ದಿದೆ. ಅದೇನೆಂದರೆ ಬಾಲಿವುಡ್ ನಟ, 'ದಬಾಂಗ್' ಬಾಯ್ ಸಲ್ಮಾನ್ ಖಾನ್ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು. [ವಾಸ್ತು ಪ್ರಕಾರ ಬಣ್ಣ ಹಚ್ಚಿದ 'ಬ್ರಹ್ಮಾಂಡ' ಬಾಬು]

ಬಳಿಕ ಯಾಕೋ ಏನೋ ಅವರು ಅಲ್ಲಿಂದ ಗಾಂಧಿನಗರಕ್ಕೆ ಮರಳಿದ್ದರು. ಅವರ ಕನಸು ಕನಸಾಗಿಯೇ ಉಳಿದಿತ್ತು. ಇದೀಗ ಸಲ್ಮಾನ್ ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ. ಸಲ್ಮಾನ್ ಖಾನ್ ಗೆ ಶರ್ಟ್ ಬಿಚ್ಚಿಸಲಿದ್ದಾರೆಯೇ ಯೋಗರಾಜ್ ಭಟ್? ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. (ಏಜೆನ್ಸೀಸ್)
More from Filmibeat
English summary
Sandalwood grapevine is that, ace director Yograj Bhat all set to direct a Hindi film starring Salman Khan. After finishing 'Vaastu Prakara' he may Take up Sallu movie.


Click it and Unblock the Notifications











