twitter
    For Quick Alerts
    ALLOW NOTIFICATIONS  
    For Daily Alerts

    ಎ ಆರ್ ರೆಹೆಮಾನ್ ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    By Staff
    |

    ಲಾಸ್ ಎಂಜಲೀಸ್, ಜ. 12 : ಬಾಲಿವುಡ್ ನ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರು 'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ಸಂಗೀತಕ್ಕೆ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಲ್ಪಟ್ಟಿರುವ 'ಗೋಲ್ಡನ್ ಗ್ಲೂಬ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಗೋಲ್ಡನ್ ಗ್ಲೂಬ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಸಂಗೀತ ನಿರ್ದೇಶಕದ ಎಂಬ ಕೀರ್ತಿಯ ಜೊತೆಗೆ ಇತಿಹಾಸವನ್ನು ರೆಹಮಾನ್ ಸೃಷ್ಟಿಸಿದಂತಾಗಿದೆ.

    ಲಾಸ್ ಎಂಜಲೀಸ್ ನಲ್ಲಿ ಏರ್ಪಡಿಸಲಾಗಿದ್ದ 66 ನೇ ಗೋಲ್ಡನ್ ಗ್ಲೂಬ್ ಪ್ರಶಸ್ತಿ ಪ್ರದಾನ ಸಮಾರಂಭದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಾಹಿತಿ ಗುಲ್ಜಾರ್ ಅವರ ರಚಿಸಿರುವ 'ಜೈ ಹೋ..' ಹಾಡಿಗೆ ರೆಹಮಾನ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಸ್ಲಂ ಡಾಗ್ ಮಿಲೇನಿಯರ್ ಚಿತ್ರವು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯ ಜೊತೆಗೆ 'ಅತ್ಯುತ್ತಮ ಚಿತ್ರಕಥೆ' ಹಾಗೂ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನೂ ಗಳಿಸಿದೆ. ಈ ಪ್ರಶಸ್ತಿ ಗೆಲ್ಲುವ ಮೂಲಕ ಜಾಗತಿಕ ಮಟ್ಟದ ಸಂಗೀತ ನಿರ್ದೇಶಕ ಎಂಬ ಕೀರ್ತಿಗೂ ಪಾತ್ರರಾದರು. ಕಾರ್ಯಕ್ರಮದಲ್ಲಿ ಕಿಂಗ್ ಖಾನ್ ಶಾರೂಕ್ ಖಾನ್ ಹಾಜರಿದ್ದರು.

    (ದಟ್ಸ್ ಕನ್ನಡ ವಾರ್ತೆ)

    Thursday, April 16, 2009, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X