»   »  'ಏಂಜಲ್ಸ್ ಅಂಡ್ ಡೆಮನ್ಸ್ ' ಚಿತ್ರಕ್ಕೆ ಕ್ರೈಸ್ತರ ವಿರೋಧ

'ಏಂಜಲ್ಸ್ ಅಂಡ್ ಡೆಮನ್ಸ್ ' ಚಿತ್ರಕ್ಕೆ ಕ್ರೈಸ್ತರ ವಿರೋಧ

Subscribe to Filmibeat Kannada
Angels & Demons tussle continues
ಹಾಲಿವುಡ್ ನಟ ಟಾಮ್ ಹಂಕ್ಸ್ ಅಭಿನಯಿಸಿದ ಹೊಚ್ಚ್ಚ ಹೊಸ ಚಿತ್ರ 'ಏಂಜಲ್ಸ್ ಅಂಡ್ ಡೆಮನ್ಸ್' ವಿವಾದದಲ್ಲಿ ಸಿಲುಕಿಕೊಂಡಿದೆ. ಮತ್ತೊಂದು ವಿವಾದಾತ್ಮಕ ಚಿತ್ರ 'ದಿ ಡಾವಿನ್ಸಿ ಕೋಡ್' ಚಿತ್ರದ ಮೊದಲ ಭಾಗ (ಪ್ರೀಕ್ವೆಲ್) ಇದಾಗಿದೆ. ರೋನ್ ಹೋವಾರ್ಡ್ ಈ ಚಿತ್ರವನ್ನು ನಿರ್ದೇಶಿಸಿದ್ದು ಮೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಸೋನಿ ಪಿಕ್ಚರ್ಸ್ ಸಂಸ್ಥೆ.

ಆದರೆ ಬಿಡುಗಡೆಗೂ ಮುನ್ನವೇ ಈ ಚಿತ್ರ ವಿವಾದದ ಸುಳಿಗೆ ಸಿಲುಕಿದೆ. 'ದಿ ಡಾ ವಿನ್ಸಿ ಕೋಡ್' ಚಿತ್ರದ ತರಹದಲ್ಲೇ ಇದರಲ್ಲೂ ವಿವಾದಾತ್ಮಕ ಸನ್ನಿವೇಶಗಳಿವೆ ಎಂಬ ಊಹಾಪೋಹಗಳೇ ವಿವಾದಕ್ಕೆ ಕಾರಣ. ಕ್ಯಾಥೋಲಿಕ್ ಚರ್ಚ್ ನ್ನು ತಪ್ಪುದಾರಿಗೆ ಎಳೆಯುವ ರೀತಿಯ ಸನ್ನಿವೇಶಗಳು ಚಿತ್ರದಲ್ಲಿವೆ ಎಂದು ಚಿತ್ರವನ್ನು ನೋಡಿದ ಕೆಲವರು ಆರೋಪಿಸುತ್ತಿದ್ದಾರೆ.

ಕೆಲವು ದೇಶಗಳಲ್ಲಿ ಈ ಚಿತ್ರವನ್ನು ನಿಷೇಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಭಾರತದಲ್ಲಿ 'ಕ್ಯಾಥಲ್ಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ' ಎಂಬ ಸಂಘಟನೆ ಸೆನ್ಸಾರ್ ಮಂಡಳಿಗೆ ಈಗಾಗಲೇ ಪತ್ರ ಬರೆದಿದ್ದು, ಈ ಚಿತ್ರವನ್ನು ಯಾವುದೇ ಕಾರಣಕ್ಕೂ ಭಾರತದಲ್ಲಿ ಬಿಡುಗಡೆ ಮಾಡಬಾರದು ಎಂದು ವಿನಂತಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಟಾಮ್ ಹಂಕ್ಸ್ ಮಾತನಾಡುತ್ತಾ, ದಿ ಡಾವಿನ್ಸಿ ಕೋಡ್ ಚಿತ್ರದ ಪ್ರೀಕ್ವೆಲ್ ಆಗಿ ಏಂಜಲ್ಸ್ ಅಂಡ ಡೆಮನ್ಸ್ ಚಿತ್ರವನ್ನು ತೆಗೆಯುತ್ತಿದ್ದೇವೆ...ಇದು ಬಹಳ ಕಷ್ಟದಿಂದ ಕೂಡಿದ ಕೆಲಸ ಅಲ್ಲವೇ? ಎಂದು ಬಹಳಷ್ಟು ಮಂದಿ ಕೇಳುತ್ತಿದ್ದಾರೆ. ಅವರೆಲ್ಲರಿಗೂ ಕೊಡುವ ಉತ್ತರ ಒಂದೇ. ಜೀವನದಲ್ಲಿ ರಿಸ್ಕ್ ಅನ್ನುವುದು ಇಲ್ಲದೆ ಬದುಕುವುದು ಕಷ್ಟ. ಆದರೆ ಒಂದಂದೂ ನಿಜ. ಏಂಜಲ್ಸ್ ಅಂಡ್ ಡೆಮಾನ್ಸ್ ಚಿತ್ರ ಸಂಚಲನ ಉಂಟುಮಾಡುತ್ತದೆ ಎನ್ನುತ್ತಾರೆ.

''ಈ ಚಿತ್ರದಲ್ಲಿ ನಿಗೂಢತೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದೇವೆ. ಪೂರ್ಣ ಪ್ರಮಾಣದ ಸಾಹಸ ದೃಶ್ಯಗಳನ್ನು ಪ್ರೇಕ್ಷಕನಿಗೆ ತೋರುಸುತ್ತಿದ್ದೇವೆ. ಡಾನ್ ಬ್ರೌನ್ ಬರೆದ ಕೃತಿಯ ಆಧಾರವಾಗಿ ಕಾಲ್ಪನಿಕವಾಗಿ ಚಿತ್ರೀಕರಿಸಲಾಗಿದೆ. ಯಾರ ಮನಸ್ಸನ್ನು ನೋಯಿಸುವ ರೀತಿಯಲ್ಲಿ ಚಿತ್ರ ಇಲ್ಲ. ವಿವಾದಗಳಿಗೆ ಅವಕಾಶವೇ ಇಲ್ಲ. ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರ ಬಾಯಿಂದಲೇ ಈ ಅಭಿಪ್ರಾಯ ಕೇಳಿಬರಲಿದೆ. ಮೇ 15ರಂದು ವರ್ಲ್ಡ್ ಪ್ರೀಮಿಯರನ್ನು ಏರ್ಪಡಿಸಿದ್ದೇವೆ. ಆ ನಂತರ ಚಿತ್ರವನ್ನು ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸುತ್ತೇವೆ ಎನ್ನುತ್ತಾರೆ ಟಾಮ್ ಹಂಕ್ಸ್.

ವಿವಾದಾತ್ಮಕ ಸನ್ನಿವೇಶಗಳೇನು?
ಕಥಾಂಶದ ವಿಷಯಕ್ಕೆ ಬಂದರೆ ವಾಟಿಕನ್ ನಗರದ ಹಿನ್ನೆಲೆಯಲ್ಲಿ ಸಾಗುತ್ತದೆ. ಪೋಪ್ ಮರಣಾನಂತರ ಆ ಸ್ಥಾನವನ್ನು ಯಾರಿಗೆ ಕೊಡಬೇಕು ಎಂದು ಕ್ಯಾಥಲಿಕ್ ಚರ್ಚ್ ಆಲೋಚಿಸುತ್ತದೆ. ಆ ಸ್ಥಾನಕ್ಕೆ ಅರ್ಹರಾಗಿ ನಾಲ್ಕು ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ. ಒಬ್ಬರಾದ ನಂತರ ಒಬ್ಬರು ಕೊಲೆಯಾಗುತ್ತಾರೆ. ಈ ನಾಲ್ಕು ಹತ್ಯೆಗಳಿಗೆ ಕಾರಣ ಯಾರು? ಎಂಬ ಪ್ರಶ್ನೆಗೆ ಉತ್ತರವೇ ಏಂಜಲ್ಸ್ ಅಂಡ್ ಡೆಮಾನ್ಸ್.

ಚಿತ್ರದಲ್ಲಿನ ಚರ್ಚಾತ್ಮಕ ಅಂಶಗಳು. ಚಿತ್ರೀಕರಿಸಿದ ಸನ್ನಿವೇಶಗಳು ಕ್ಯಾಥಲಿಕ್ ಚರ್ಚ್ ಗೌರವಕ್ಕೆ ಭಂಗ ತರುವ ರೀತಿಯಲ್ಲಿವೆ ಎಂಬುದೇ ವಿವಾದಕ್ಕೆ ಕಾರಣವಾಗಿರುವ ಅಂಶ. ಈ ಚಿತ್ರದ ಬಗ್ಗೆ ಭಾರತೀಯ ಸೆನ್ಸಾರ್ ಮಂಡಳಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲೇ ಸೆನ್ಸಾರ್ ಮಂಡಳಿಯ ನಿರ್ಣಯ ಹೊರಬೀಳಲಿದೆ.

(ಏಜೆನ್ಸೀಸ್)

ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!
ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು
ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada