»   » ಪಮೇಲಾ ಆಂಡರ್ಸನ್ ಪೂರ್ಣಕುಂಭ ದರ್ಶನ

ಪಮೇಲಾ ಆಂಡರ್ಸನ್ ಪೂರ್ಣಕುಂಭ ದರ್ಶನ

Subscribe to Filmibeat Kannada
Bay Watch babe Pamela Anderson
ಲಂಡನ್, ಜ. 4 : ಪ್ರಳಯವೇನೂ ಸಂಭವಿಸಲಿಲ್ಲ, ಆದರೂ ಕೆಲವು ನಿಮಿಷಗಳ ಕಾಲ ಅಲ್ಲಿ ಜಗತ್ತು ಫುಲ್ ಸ್ಟಾಪ್ ಆಯಿತು. ಗಡಿಯಾರದ ಮುಳ್ಳುಗಳು ಮುಂದೋಡುವುದಕ್ಕೆ ಹಿಂದೇಟು ಹಾಕಿದವು. ಬೆಕ್ಕಸ ಬೆರಗಾದ ಕಣ್ಣಾಲಿಗಳು ಅವಾಕ್ಕಾಗಿ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದರೆ ರೆಪ್ಪೆಗಳು ಕೂಡ ತಮ್ಮ ಕಾರ್ಯ ಮರೆತು ಕಣ್ಣುಗಳ ಬೆಂಬಲಕ್ಕೆ ನಿಂತವು. ಆ ಕ್ಷಣ ಹಾಲಿವುಡ್ಡಿನ ಪ್ಯಾರಾಮೌಂಟ್ ಸ್ಟೂಡಿಯೋದಲ್ಲಿ ನೆರೆತವರೆಲ್ಲ ಸ್ಥಂಬೀಭೂತರಾದರು ಮತ್ತು ತಮ್ಮಇರುವನ್ನು ತಾವೇ ನಂಬದಾದರು.

ಸಂದರ್ಭ : ಹಾಲಿವುಡ್ ನಲ್ಲಿ 2009 ಡಿಸೆಂಬರ್ 31ರ ರಾತ್ರಿ ನಡೆದ ಹೊಸ ವರ್ಷದ ಮುನ್ನಾದಿನದ ಸಮಾರಂಭ. ಮಾದಕ ಮೈಮಾಟದ ತಾರೆ ಪಮೇಲಾ ಆಂಡರ್ಸನ್ ಪಾರ್ಟಿಗೆ ಬಂದಿದ್ದರು. ಅದು ಅವರೇ ಕರೆದಿದ್ದ, ಗತಿಸುತ್ತಿರುವ ಸಂವತ್ಸರದ ಮುಸ್ಸಂಜೆ ಪಾರ್ಟಿ. ಜನ ನೋಡನೋಡುತ್ತಿದ್ದಂತೆಯೇ ಪಾರ್ಟಿ ಅಂಗಳದಲ್ಲಿ ಪಮ್ಮಿ ವಸ್ತ್ರ ಸನ್ಯಾಸ ಸ್ವೀಕರಿಸಿ ರಸಿಕರಿಗೆ ಅಮೃತಪಾನ ಮಾಡಿದ ಅನುಭವ ದಾನ ಮಾಡಿದರು.

2010ರ ಆಗಮನವನ್ನು ಘೋಷಿಸುವ ಪಾರ್ಟಿಯಲ್ಲಿ ಕಣ್ಣುಕೋರೈಸುವ ದೀಪಗಳು ಝಗಝಗಿಸುವ ತೊಡಗಿದವು. ಆಗ ಪಮ್ಮಿ ಬಟ್ಟೆ ಕಳಚಿ ಧರಾಶಾಯಿಯಾದಳು ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಹೇಳಿತು. ನೆರೆದಿದ್ದ ಅಭಿಮಾನಿಗಳು ಪಮ್ಮಿಯ ಪೂರ್ಣಕುಂಭ ದರ್ಶನದಿಂದ ಪುನೀತರಾದವರಂತೆ ಕುಣಿಕುಣಿದಾಡಿದರು. ಪಾರ್ಟಿ ಪ್ರಿಯರಿಗೆ ಹೊಸವರ್ಷದ ಜೋಡಿ ಉಡುಗೊರೆ ಕೊಟ್ಟ 42 ವರ್ಷ ಬೇವಾಚ್ ಬೇಬಿ ಪಮೇಲಾ ಆನಂತರ ಲಾಸ್ ಏಂಜಲಿಸ್ ಗೆ ಹಿಂತಿರುಗಿದರು ಎಂದು ಪತ್ರಿಕೆ ತನ್ನ ವರದಿ ಮುಗಿಸಿತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada