»   » ಭಾರತದಲ್ಲಿ ಮಿಷನ್ ಇಂಪಾಸಿಬಲ್ 4 ಟಾಮ್ ಕ್ರೂಸ್

ಭಾರತದಲ್ಲಿ ಮಿಷನ್ ಇಂಪಾಸಿಬಲ್ 4 ಟಾಮ್ ಕ್ರೂಸ್

Posted By:
Subscribe to Filmibeat Kannada
Tom Cruise
ಹಾಲಿವುಡ್‌ನ ಬಹುನಿರೀಕ್ಷಿತ 'ಮಿಷನ್ ಇಂಪಾಸಿಬಲ್ 4' ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಿವೆ. ಈ ಚಿತ್ರದ ಪ್ರಚಾರಕ್ಕಾಗಿ ನಟ ಟಾಮ್ ಕ್ರೂಸ್ ಭಾರತಕ್ಕೆ ಬಂದಿಳಿದಿದ್ದಾರೆ. ಶನಿವಾರ ಬೆಳಗ್ಗೆ (ಡಿ.3) ನವದೆಹಲಿಗೆ ಬಂದ ಅವರು ಅಲ್ಲಿಂದ ಸೀದಾ ಚಾಣಕ್ಯಪುರಿಯ ಲೀಲಾ ಪ್ಯಾಲೇಸ್‌ಗೆ ತೆರಳಿದರು.

ದೇಶದಲ್ಲೇ ಅತ್ಯಂತ ದುಬಾರಿಯಾದ ಲೀಲಾ ಪ್ಯಾಲೇಸ್‌ನ ಮಹಾರಾಜ ಸೂಟ್‌ನಲ್ಲಿ ಕ್ರೂಸ್ ಉಳಿದುಕೊಂಡಿದ್ದಾರೆ. ಆಗ್ರ ಸೇರಿದಂತೆ ದೇಶದ ಹಲವು ಪ್ರದೇಶಗಳಿಗೆ ಟಾಮ್ ಕ್ರೂಸ್ ಭೇಟಿ ನೀಡಲಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರು ವಿಶೇಷ ಪಾತ್ರವನ್ನು ಪೋಷಿಸಿದ್ದಾರೆ.

ಚಿತ್ರದ ಪ್ರಚಾರಕಾರ್ಯದಲ್ಲಿ ಅವರೂ ಟಾಮ್ ಕ್ರೂಸ್‍ ಜೊತೆಗಿರುತ್ತಾರೆ. ಡಿಸೆಂಬರ್ 21ರಂದು 'ಮಿಷನ್ ಇಂಪಾಸಿಬಲ್ 4' ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಮುಂಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 1500 ಮಂದಿ ಅಭಿಮಾನಿಗಳೊಂದಿಗೆ ಟಾಮ್ ತಮ್ಮ ಚಿತ್ರವನ್ನು ವೀಕ್ಷಿಸಲಿದ್ದಾರೆ. (ಏಜೆನ್ಸೀಸ್)

English summary
Hollywood star Tom Cruise, who is on a worldwide promotional tour of his much-awaited film Mission Impossible: Ghost Protocol, landed here early Saturday. The 49-year-old arrived here at 6 a.m. and headed straight to the Leela Palace, Chanakyapuri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada