For Quick Alerts
  ALLOW NOTIFICATIONS  
  For Daily Alerts

  ಬ್ರೂಸ್ಲಿ 'ಗೇಮ್ ಆಫ್ ಡೆತ್' ಕೋಟ್ ಗೆ 77 ಸಾವಿರ ಡಾಲರ್

  By Mahesh
  |
  ಮಾರ್ಷಲ್ ಆರ್ಟ್ಸ್ ದಂತಕತೆ, ನಟ ಬ್ರೂಸ್ ಲೀ ತನ್ನ ಕೊನೆಯ ಚಿತ್ರ 'ಗೇಮ್ ಆಫ್ ಡೆತ್'ನಲ್ಲಿ ಧರಿಸಿದ್ದ ಫರ್ ಕೋಟ್ ಭಾರಿ ಮೊತ್ತಕ್ಕೆ ಹರಾಜಾಗಿದೆ. ಹಾಂಕಾಂಗ್‌ನಲ್ಲಿ ನಡೆದ ಹರಾಜಿನಲ್ಲಿ 77,000 ಅಮೆರಿಕನ್ ಡಾಲರ್‌ ನೀಡಿ ಅಮೆರಿಕದ ದಂಪತಿಗಳು ಖರೀದಿಸಿದ್ದಾರೆ.

  ಲೀ 1973ರಲ್ಲಿ 32ರ ಹರೆಯದಲ್ಲಿ ಅಕಾಲಿಕ ಮರಣಕ್ಕೀಡಾಗುವ ಮೊದಲು ಚಿತ್ರ ನಿರ್ಮಾಣ ಹಂತದಲ್ಲಿ ಈ ಕೋಟ್ ಧರಿಸಿ ಫೋಟೊ ಸೆಶನ್ ನಡೆಸಿದ್ದರು. ಆ ಚಿತ್ರ ಅವರ ಮರಣದ ಕೆಲವು ವರ್ಷಗಳ ಬಳಿಕ 1978ರಲ್ಲಿ ಬಿಡುಗಡೆಯಾಯಿತು.

  ಕಡು ನೀಲಿ ಬಣ್ಣದ ಕೋಟನ್ನು ಸುಮಾರು 1973ರ ಸುಮಾರಿಗೆ 'ಗೇಮ್ ಆಫ್ ಡೆತ್" ಚಿತ್ರಕ್ಕಾಗಿ ತಯಾರಿಸಲಾಗಿತ್ತು. ಅದು ನಿರೀಕ್ಷೆಗಿಂತ ಸುಮಾರು ಒಂಬತ್ತು ಪಟ್ಟು ಅಧಿಕ ಬೆಲೆಗೆ ಮಾರಾಟವಾಯಿತು.

  ಲೀ ಬಳಸಿದ್ದ 13 ವಸ್ತುಗಳನ್ನು ಮಾರಾಟಕ್ಕಿಡಲಾಯಿತು. ಒಟ್ಟು 2,27,000 ಅಮೆರಿಕನ್ ಡಾಲರ್ ಸಂಗ್ರಹವಾಯಿತು.ದಕ್ಷಿಣ ಚೀನದ ನಗರ ಹಾಂಕಾಂಗ್‌ನಲ್ಲಿ ನಡೆದ ಕುಂಗ್ ಫೂ ಮಾಂತ್ರಿಕನ ಸ್ಮಾರಕಗಳ ಬೃಹತ್ ಹರಾಜು ಎಂದು ಪರಿಗಣಿಸಲಾಗಿದೆ.

  English summary
  Martial arts star Bruce Lee's a fur lined coat has sold at auction in Hong Kong. The famous coat was worn by Lee in 1973 Game of Death Movie.
  Sunday, August 7, 2011, 11:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X